ಮೆಗ್ಗಾನ್ ಎಟಿಎಂ ಬಳಿ ಪರಿಚಯವಾದ ಅಪರಿಚಿತ-ಹಣ ತೆಗೆದುಕೊಡುವುದಾಗಿ ಹೇಳಿ ವಂಚನೆ

A case of fraud has come to light in which over Rs. 55,000 was withdrawn by pretending to withdraw money from the Union Bank ATM in the premises of Megan Hospital, Shimoga.


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿರುವ ಯುನಿಯನ್ ಬ್ಯಾಂಕ್ ನ ಎಟಿಎಂನಲ್ಲಿ ಹಣ ತೆಗೆದುಕೊಡುವುದಾಗಿ ನಟಿಸಿ 55 ಸಾವಿರ ರೂಗೂ‌ಅಧಿಕ ಹಣವನ್ನ ಡ್ರಾ ಮಾಡಿಕೊಂಡು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. 

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಹುಣಸೆಕಟ್ಟೆಯ 65 ವರ್ಷದ ನಿವಾಸಿ ತನ್ನ ಅಣ್ಣನಿಗೆ ಹುಷಾರಿಲ್ಲದ ಕಾರಣ ಡಿ.25 ರಂದು  ಶಿವಮೊಗ್ಗ ಮಗ್ರಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು, ಮಾರನೇ ದಿನ ದಿನಾಂಕ: 26-12-2024 ರಂದು ತನ್ನ ಅಣ್ಣನಿಗೆ ಉಸಿರಾಟದ ತೊಂದರೆಯಾಗಿದ್ದರಿಂದ ಆಕ್ಸಿಜನ್ ಮೆಷಿನ್ ಖರೀದಿಸಲು ಹಣ ಬೇಕಾಗಿದ್ದರಿಂದ ಪರಮೇಶ್ವರಪ್ಪ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿರುವ ಯುನಿಯನ್ ಬ್ಯಾಂಕ್ ನ ಎಟಿಎಂ ಗೆ ಸಂಜೆ 06-30 ಗಂಟೆಗೆ ಹೋಗಿದ್ದರು. 

ಎಟಿಎಂನಲಿ. ಹಣ ಡ್ರಾ ಮಾಡಲು ಬಾರದೇ ಇದ್ದುದರಿಂದ ಅಲ್ಲೆ ಇದ್ದ ಒಬ್ಬ ಅಪರಿಚಿತ ವ್ಯಕ್ತಿಗೆ ಹಣವನ್ನು ಡ್ರಾ ಮಾಡಿಕೊಡಲು ಪರಮೇಶ್ವರಪ್ಪ ಎಟಿಎಂ ಕಾರ್ಡ್ ಕೊಟ್ಟಿದ್ದು, ಆ ವ್ಯಕ್ತಿಯು ಎಟಿಎಂ ಮೆಷಿನ್ ನಲ್ಲಿ ಎಟಿಎಂ ಕಾರ್ಡ್ ಹಾಕಿ 16000 ರೂಗಳನ್ನು ಡ್ರಾ ಮಾಡಿಕೊಟ್ಟಿದ್ದಾನೆ. ಪರಮೇಶ್ವರಪ್ಪ ಕೈಗೆ ಕೊಟ್ಟು ಹಣವನ್ನು ಎಣಿಸಿಕೊಳ್ಳುವಂತೆ ಹೇಳಿ ಹೊರಗಡೆ ಹೋಗಿ ಉಗಿಯಲು ಹೋಗಿದ್ದನು, 

ನಂತರ ವಾಪಾಸ್ ಬಂದು ಪರಮೇಶ್ವರಪ್ ನವರ ಕೈಗೆ ಎಟಿಎಂ ಕೊಟ್ಟಿದ್ದಾನೆ.   ಮಾರನೇ ದಿನ ದಿನಾಂಕ: 27-12-2024 ರಂದು ಬೆಳಿಗ್ಗೆ ಊರಿಗೆ ಹೋಗಿದ್ದು,  ಮಗನು ಬೋರ್ ಕೊರೆಸಲು ಲಾರಿಗೆ ಹಣ ಕಟ್ಟಬೇಕು ಹಣವನ್ನು ಡ್ರಾ ಮಾಡಿಕೊಂಡು ಬರಲು ಎಟಿಎಂ ಕಾರ್ಡ್ ಕೊಡುವಂತೆ ಕೇಳಿದ್ದರಿಂದ ಪರಮೇಶ್ವರಪ್ಪ ಎಟಿಎಂ ಕಾರ್ಡ್ ಕೊಟ್ಟಿದ್ದರು. ಅದನ್ನು ನೋಡಿದ ಮಗನು ಯುನಿಯನ್ ಬ್ಯಾಕ್ ಕಾರ್ಡ್ ಕೊಟ್ಟಿದಿಯಾ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಾರ್ಡ್ ಎಟಿಎಂ ಕೊಡುವಂತೆ ಹೇಳಿದ್ದಾರೆ.‌ 

ತನ್ನ ಹತ್ತಿರ ಇದೊಂದೆ ಕಾರ್ಡ್ ಇರುವುದು ಅಂತ ಹೇಳಿಪರಮೇಶ್ವರಪ್ಪನವರಿಗೆ  ಶಿವಮೊಗ್ಗದ ಮೆಗ್ಗಾನ್ ನ ಎಟಿಎಂ ನಲ್ಲಿ  ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ಕೊಟ್ಟು ಹಣವನ್ನು ಡ್ರಾ ಮಾಡಿಸಿದ ವಿಚಾರ ಹೇಳಿದ್ದಾರೆ.‌ ಹೊಸದುರ್ಗ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ಹೋಗಿ ವಿಚಾರವನ್ನು ತಿಳಿಸಿ. ಎಟಿಎಂ ಕಾರ್ಡ್ ನ್ನು ಮ್ಯಾನೇಜರ್ ಗೆ ಕೊಟ್ಟು ತಮ್ಮ ಎಟಿಎಂ ಕಾರ್ಡ್ ನ್ನು ಬ್ಲಾಕ್ ಮಾಡಿಸಿದ್ದಾರೆ. 

ಆದರೆ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಚೆಕ್ ಮಾಡಿಸಿದಾಗ ಎಟಿಎಂ ಕಾರ್ಡ್ ನಿಂದ 55035/-ರೂಗಳನ್ನು ಡ್ರಾ ಮಾಡಿರುವುದು ಕಂಡುಬಂದಿದ್ದು, ಆ ಅಪರಿಚಿತ ವ್ಯಕ್ತಿಯ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close