ಸುದ್ದಿಲೈವ್ /ಶಿವಮೊಗ್ಗ
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ, ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ, ಈಶ್ವರಪ್ಪನವರ ಬ್ರಿಗೇಡ್ ಸಿಟಿರವಿ ಮತ್ತು ಲಕ್ಷ್ಮೀ ಹೆಬ್ವಾಳ್ಕರ್ ಕುರಿತು ಶಾಸಕ ಗೋಪಾಲಕೃಷ್ಣ ಬೇಳೂರು ಶಿವಮೊಗ್ಗದಲ್ಲಿ ಪ್ರತಿಕ್ರಿಯೆನೀಡಿದ್ದಾರೆ.
ಸ್ವಾಭಾವಿಕವಾಗಿ ಮನೆಗೆ ಔತನಕೂಟಕ್ಕೆ ಕರೆದಿದ್ದಾರೆ ಅಂತ ಸಿಎಂ ಹೋಗಿದ್ದಾರೆ. ಡಿಸಿಎಂ ಹೊರ ದೇಶಕ್ಕೆ ಹೋಗಿರುವ ಹಿನ್ನಲೆ ಈ ರೀತಿಯ ಗೊಂದಲ ಸೃಷ್ಠಿ ಆಗಿದೆ.ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಏನು ಭವಿಷ್ಯ ಹೇಳುವರಾ ಎಂದು ಪ್ರಶ್ನಿಸಿದರು.
ವಿಜಯೇಂದ್ರನ ಬುಡವೇ ಅಲ್ಲಾಡುತ್ತಿದೆ ಅವರ ಪಕ್ಷದವರೇ ಅವರ ವಿರುದ್ದ ಹೋರಾಟ ಮಾಡುತ್ತಿದ್ದಾರೆ. ಧಮ್ಮು ,ತಾಕತ್ತು ಇದ್ರೆ ವಿಜಯೇಂದ್ರ ಸರ್ಕಾರ ಬಿಳಿಸಲಿ ನೋಡೋಣ. ಹಡಬಿ ದುಡ್ಡಿನಿಂದ ಕಳೆದ ಬಾರೀ ಶಾಸಕರನ್ನು ಕರೆದುಕೊಂಡು ಹೋಗಿದ್ರು, ವಿಜಯೇಂದ್ರನಿಗೆ ಇನ್ನೂ ಏಳೆ ವಯಸ್ಸು ಏಳೆ ವಯಸ್ಸಿನ ಹಿನ್ನಲೆ ಏನ್ ಏನೋ ಮಾತಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಈಶ್ವರಪ್ಪ ಚಾಲ್ತಿಯಲ್ಲಿಲ್ಲ
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ.ವಿರೋಧ ಪಕ್ಷದವರ ಗೊಂದಲ ಇದು ಬಿಟ್ಟರೆ ನಮ್ಮಲ್ಲಿ ಗೊಂದಲ ಇಲ್ಲ ಎಂದ ಸಾಗರ ಶಾಸಕರು, ಈಶ್ವರಪ್ಪ ಹೊಸ ಬ್ರಿಗೆಡ್ ಕಟ್ಟುತ್ತಿದ್ದಾರೆ. ಹಿಂದುತ್ವ ಹಿಂದುತ್ವ ಅಂತ ಅದರ ಹಿಂದೋಗಿ ಬಿಟ್ಟಿದ್ದಾರೆ. ಈಶ್ವರಪ್ಪನವರ ಯಾವ ಬ್ರಿಗೇಡ್ ನಡೆಯಲ್ಲ ಎಂದರು.
ಈಶ್ವರಪ್ಪನವರು ಈಗ ಜಾಲ್ತಿಯಲ್ಲಿ ಇಲ್ಲ. ಪ್ರಿಯಾಂಕ ಖರ್ಗೆ ಪ್ರಕರಣವನ್ಬ ಸಿಬಿಐಗೆ ಕೊಡಬೇಕಾದರೆ ಕೋಡೋಣ. ಪ್ರಿಯಾಂಕ ಖರ್ಗೆಯವರ ಪಾತ್ರ ಏನಿದೆ ಅವರ ಆತ್ಮಹತ್ಯೆಯಲ್ಲಿ ಎಂದು ಪ್ರಶ್ನಿಸಿದರು. ಮುಡಾ ಹೋರಾಟ ಎಲ್ಲಾ ಮಾಡಿದ್ರಲ್ಲ ಏನ್ ಆಯ್ತು?ಬಿಜೆಪಿ ಪಕ್ಷದಲ್ಲೇ ಎರಡು ಭಾಗ ಆಗಿ ಬುಡ ಅಲ್ಲಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಬಾಣಂತಿರ ಸಾವು ಸರಿಯಲ್ಲ
ಬಾಣಂತಿಯರ ಸಾವನ್ನ ನಾವು ಸಮರ್ಥಿಸುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಗಮನ ಹರಿಸಬೇಕು. ಯಾರು ಸಹ ಸಾವನ್ನಪ್ಪಬಾರದು ಹೀಗಾದಾಗ ನೋವಾಗುತ್ತೆ. ಸಾರಿಗೆ ಬಸ್ ದರ ಎಲ್ಲಾ ಕಡೆ ಹೆಚ್ಚಳ ಮಾಡ್ತಾರೆ. ಗ್ಯಾಸ್ ದರ ಏರಿಕೆ ಆಗಿಲ್ವ,ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿಲ್್ವಾ ಎಂದು ಪ್ರಶ್ನಿಸಿದ ಶಾಸಕರು ಕೆಎಸ್ಆರ್ಟಿಸಿ ಹಾಳು ಮಾಡಿದ್ದೆ ಈ ಹಿಂದಿನ ಬಿಜೆಪಿ ಸರ್ಕಾರ ಎಂದು ದೂರಿದರು.
ಶಕ್ತಿ ಯೋಜನೆಯಿಂದ ನಮಗೆ ಲಾಸ್ ಆಗಿಲ್ಲ. ಬಿಜೆಪಿಯ ಪಾಪಿಗಳಿಂದ ನಮಗೆ ಲಾಸ್ ಆಗಿದೆ ಹೋರತು ಶಕ್ತಿ ಯೋಜನೆಯಿಂದಲ್ಲ. ಬಿಜೆಪಿಯವರು ಕೊರೊನಾ ಟೈಮ್ ನಲ್ಲಿ ಲೂಟಿ ಹೊಡೆದು ಹೋಗಿದ್ದಾರೆ. ಹೊಸ ಬಸ್ ಖರೀದಿ ಮಾಡಬೇಡಿ ಅಂದ್ರೆ ದರ ಹೆಚ್ಚಳ ಮಾಡಲ್ಲ ಬಿಡಿ ಎಂದರು.
ನಾನೂ ಪ್ರಬಲ ಆಕಾಂಕ್ಷಿ
ಗ್ಯಾರಂಟಿ ಯೋಜನೆ ಅಭಿವೃದ್ದಿ ಅಲ್ವ ಅದರಿಂದ ಜನರಿಗೆ ಅನುಕೂಲ ಆಗುತ್ತಿದೆ. ಬಿಜೆಪಿಯವರು ಸಾಲ ಮಾಡಿ ಹೋಗಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿಯಿಂದ ಯಾವುದೇ ಲಾಸ್ ಆಗಿಲ್ಲ.ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ನಾನು ಸಹ ಪ್ರಭಲ ಆಕಾಂಕ್ಷಿ ನಾನೇನು ರಾಜಕೀಯ ಸನ್ಯಾಸಿ ಅಲ್ಲ
ಆ ಸಂದರ್ಭ ಬಂದಾಗ ಕೇಳುತ್ತೇನೆ ಕೊಡುವುದು ಬಿಡುವುದು ಹೈ ಕಮಾಂಡ್ ಗೆ ಬಿಟ್ಟಿದ್ದು, ಈಗ ಯಾವುದೇ ಸಂಪುಟ ಬದಲಾವಣೆ ಚೆರ್ಚೆ ಆಗಿಲ್ಲ.ಸಿಟಿ ರವಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣ ವಿಚಾರದತ್ತಪೀಠ ದಲ್ಲಿ ಮಾಲೆ ಹಾಕೊಂಡು ಬೀಕ್ಷೆ ಬೆಡುವುದು ಮಾಡುತ್ತಾರೆ ಇದೇನಾ ಅವರಿಗೆ ಆರ್ ಎಸ್ ಎಸ್ ಕಲಿಸಿದ್ದು ಎಂದು ಪ್ರಶ್ನಿಸಿದರು.
ಬಿಜೆಪಿಯವರು ನಾರಿಗೆ ಗೌರವ ಕೊಡುತ್ತೇವೆ ಅನ್ನುತ್ತಾರೆ ಇದೇನಾ ಗೌರವ ಕೊಡೋದು ಎಂದು ಪ್ರಶ್ನಿಸಿದರು.