ಪಾಲಿಕೆ ಚುನಾವಣೆ ನಡೆಸದಂತೆ ಆಯೋಗವೂ ಸಿದ್ದವಾಗಿದೆ-ಶಾಸಕರ ದೂರು



ಸುದ್ದಿಲೈವ್/ಶಿವಮೊಗ್ಗ

ಸ್ಥಳೀಯ ಸಂಸ್ಥೆಗಳ ಮಗ್ಗಲು ಮುರಿಯುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಶಾಸಕ ಚೆನ್ನಬಸಪ್ಪ ಆರೋಪಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಸ್ಥಳೀಯ ಸಂಸ್ಥೆಗಳಿಗೆ ಗಾಂಧಿಜಿ ಮಹತ್ವ ನೀಡುವ ಕಾಂಗ್ರೆಸ್ ಜಿಪಂ ಮತ್ರು ತಾಪಂ ಚುನಾವಣೆ ನಡೆಯದೆ ಐದು ವರ್ಷ ಆಗಿದೆ ಬಿಬಿಎಂಪಿ ಚುನಾವಣೆಯೂ ಸಹ ಚುನಾವಣೆ ನಡೆದಿಲ್ಲ. ಅಧಿಕಾರ ವಿಕೇಂದ್ರಿಕರಣಗೊಳಿಸುವ ಬಗ್ಗೆ 

ಸೆಕ್ಷನ್ 24 ರ ತಿದ್ದುಪಡಿ 6 ತಿಂಗಳ ಒಳಗೆ ಚುನಾವಣೆ ನಡೆಯಬೇಕು  ಎಂದು ಹೇಳಿದೆ ಎಲ್ಲವೂ ಗಾಳಿಗೆ ತೂರಲಾಗಿದೆ. ಚುನಾವಣೆ ಆಯೋಗವೂ ಸಹ ಕೈಕಟ್ಟಿ ಕುಳಿತಿದೆ. ಸಂವಿಧಾನ ವಿರೋಧಿಯಾಗಿ ಬಡೆಯುತ್ತಿರುವಂತೆ ಕಂಡು ಬಂದಿದೆ. ಮೋಹನ್ ರೆಡ್ಡಿಯವರ ನೇತೃತ್ವದಲ್ಲಿ ಮೊನ್ನೆ ಜ.2 ರಙದು ಚುನಾವಣೆ ಆಯೋಗವನ್ನ ಭೇಟಿ ಮಾಡಿದ್ವಿ 40 ನಿಮಿಷ ಮಾತುಕತೆ ನಡೆಸಿದ್ವಿ. 

ಅಧಿಕಾರಿಗಳು ಚುನಾವಣೆ ಮಾಡ್ತೀವಿ ಎಂದು ಹೇಳಿದ್ದಾರೆ. ನಂಬೋದು ಹೇಗೆ ಎಂದು ಕೇಳಲಾಗಿದೆ. ಮೈಸೂರು, ತುಮಕೂರು ಮತ್ತು ಶಿವಮೊಗ್ಗದ ಪಾಲಿಕೆಗೆ ಚುನಾವಣೆ ನಡೆಯಲಿದೆ ಎಂದು ಸುದ್ದಿಗೋಷ್ಠಿ ನಡೆಸಿ ಐದಾರು ತಿಂಗಳಾಗಿದೆ. ಆದರೆ ಚುನಾವಣೆಯ ಬಗ್ಗೆ ಪ್ರಸ್ತಾವನೆ ಇಲ್ಲ ಎಂದು ದೂರಿದರು. 

ರಿಸರ್ವೇಷನ್ ಕೊಡದ ಕಾರಣ ಚುನಾವಣೆ ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿದರು. ಆದರೆ ಹಳೆ ಮೀಸಲಾತಿಯಲ್ಲಿ ನಡೆಸಲಾಗುವುದು ಎಂದು ಹೇಳುದ ಅಧಿಕಾರಿಗಳು ಅಕ್ಷಮ್ಯ ಅಪರಾಧ ಎಸೆಗಿದ್ದಾರೆ ಎಂದು ದೂರಿದರು. 

ಮತ್ತೊಮ್ಮೆ ಅಧಿಸೂಚನೆ ಹೊರಡಿಸುವುದಾಗಿ ಆಯೋಗದ ಅಧಿಕಾರಿಗಳು ತಿಳಿಸಿದ್ದರು. ರಾಜ್ಯ ಚುನಾವಣೆ ಆಯೋಗದ ಪ್ರಕಟ ಸಹ ಹೊರಡಿಸಿದ್ದರು. ಮತದಾನ ಪಟ್ಟಿ ಪರಿಷ್ಜರಣೆ ಆಗಿಕ್ಲ. ಟೈಮ್ ಟೇಬಲ್ ನೀಡಲಾಗಿತ್ತು. ಉಲ್ಲಂಘನೆಯಾಗಿದೆ. ಅಧಿಕಾರಿ ಸಂಗ್ರೇಶಿಯವರಿಂದ ಉಲ್ಲಂಘನೆಯಾಗಿದೆ ಎಂದು ದೂರಿದರು. 

18940 ಸಾವಿರ ಕೋಟಿ ಕೇಂದ್ರದ 15 ನೇ ಹಣಕಾಸು ನಿಗದಿ ಪಡಿಸಿತ್ತು. ಈ ಹಣ ವಾಪಾಸ್ ಹೋಗಲಿದೆ. ಒಂದು ಕಡೆ ಕೇಂದ್ರ ಸರ್ಕಾರ ಹಣ ಕೊಡಲ್ಲ ಎಂದು ಹೇಳುವ ರಾಜ್ಯ ಸರ್ಕಾರ ಬಙದ ಹಣವನ್ನ ಉಪಯೋಗಿಸಿಕೊಳ್ತಯಿಲ್ಲ ಎಂದು ದೂರಿದರು. 

ಹಿಂದೂ ದೇವಾಲಯಗಳನ್ನ ಅಭಿವೃದ್ಧಿ ಪಡಿಸದ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರವಾಗಿದೆ. ಮುಜರಾಯಿಗೆ ನೀಡುವ ಹಣ ಶಿವಮೊಗ್ಗಕ್ಕೆ 5 ಕೋಟಿ ಬಿಡುಗಡೆಯಾಗಿದೆ ಅದರಲ್ಲಿ 2.5 ಕೋಟಿ ಹಣ ಬಂದಿದೆ. ಆದರೆ ಮುಂದಿನ ಹಣಕ್ಕೆ ಘೋಷಣೆ ನಾಡದಂತೆ  ಆದೇಶಿಸಿದೆ. ಇದು ಪಾಪರ್ ಚೀಟ್ ಸರ್ಕಾರ ಎಂದು ದೂರಿದರು. 

ಉಸ್ತುವಾರಿ ಸಚಿವರು, ತರಿಕೆರೆ ಶಾಸಕರೆ ಹಣ ಬಿಡುಗಡೆ ಮಾಡುವಂತೆ ಕೋರಿದ್ದಾರೆ. ಬಜೆಟ್ ಒಳಗೆ ಮುಜುರಾಯಿ ಇಲಾಖೆಗೆ ಸೂಕ್ತ ಹಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಗುಡುಗಿದರು. 

30 ದೇವಸ್ಥಾನಗಳ ಅಭಿವೃದ್ಧಿಗೆ ಕೊಡಲು ಹಣವಿಲ್ಲವೆಂದರೆ ಹಿಂದೂಗಳು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ಸಚಿನ್ ಪಾಂಚಾಳ್ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ಸುಪಾರಿ ಕಿಲ್ಲರ್ ಸರ್ಕಾರವಾಗಿದೆ. ಮಾತು ಎತ್ತಿದರೆ ಸಂವಿದಾನ ಸಂರಕ್ಷಕರು ಎನ್ನುವ ಸರ್ಕಾರ ಪ್ರಿಯಾಂಕ್ ಖರ್ಗೆ ಬಹಳ ಒಳ್ಳೆಯ ಸಚಿವರ ಬಗ್ಗೆ ಕ್ರಮ ಯಾಕೆ ಯಾವ ಇಲ್ಲವೆಂದು ವ್ಯಂಗ್ಯವಾಡಿದರು. 

ಪ್ರಿಯಾಂಕ್  ಖರ್ಗೆ ಹೊರತು ಪಡಿಸಿ ಆರೋಪಿ ಸ್ಥಾನದಲ್ಲಿರುವ 8 ಜನರ ವಿರುದ್ಧ ಕ್ರಮ ಏನು? ರಕ್ಷಣ ಇಲಾಖೆ ಕಾಂಗ್ರೆಸ್ ನ ಕೈಗೊಂಬೆಯಾಗಿದೆ. ನಂದಕುಮಾರ್, ಮನೋಜ್ ಸೆಗವಾಲ್ ವಿನೋದ್ ಪಿ, ರಾಮನಗೌಡ ಪಾಟೀಲ್ ಸೇರಿದಂತೆ 8 ಜನರ ಹೆಸರು ಆರೋಪಿಪಟ್ಟಿಯಲ್ಲಿದೆ ಎನು ಕ್ರಮ ಎಂದರು. 

ಎಲ್ಲಾ ಭಾಗ್ಯದ ಜೊತೆ ಅನಾಥ ಭಾಗ್ಯವೂ ಸೇರಿದೆ. ಬಾಣಂತಿಯರ ಸಾವು ಸರ್ಕಾರ ಪ್ರಯೋಜಿತವಾಗಿದೆ. ತಾಯಿಯೇ ಇಲ್ಲವೆಂದ ಮೇಲೆ ಮಗು ಅನಾಥವಾಗುವುದರಿಂದ ಕಾಂಗ್ರೆಸ್ ನವರದ್ದು ಅನಾಥ ಭಾಗ್ಯವೆಂದರು. 

ನಾ.ಡಿಸೋಜರವರ ನಿಧನ ತುಂಬಲಾರದ ನಷ್ಟವಾಗಿದೆ. 2014 ರಲ್ಲಿ ಮಡಿಕೇರಿಯಲ್ಲಿ ನಡೆದ 80 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಯನ್ನ‌ ಮುಡಿಗೇರಿಸಿಕೊಂಡಿದ್ದಾರೆ. ಶಿವಮೊಗ್ಗದ ದಸರಾಗೆ ಅವರನ್ನ ಕರೆಸಲಾಗಿತ್ತು. ಅವರ ಮಕ್ಕಳ ಹೆಸರನ್ನ‌ನೋಡಿದರೆ ಅವರು ಒಂದು ಧರ್ಮಕ್ಕೆ ಸೀಮಿತರಾದಂತೆ ಕಂಡು ಬಂದಿಲ್ಲ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close