Person arrested who attacked police during election
ಸುದ್ದಿಲೈವ್/ಶಿವಮೊಗ್ಗ
ಕಾಳಿಕ ಪರಮೇಶ್ವರಿ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿ ನಿರ್ದೆಶಕರ ಚುನವಾಣೆ ಮತ ಎಣಿಕೆ ಸಂರ್ಧಭದಲ್ಲಿ ಮತ ಎಣಿಕೆ ಕೊಠಡಿಗೆ ಹೋಗದಂತೆ ತಡೆದ ಪೋಲಿಸರ ಮೇಲೆ ಹಲ್ಲೆ (assault) ನಡೆದ ಘಟನೆ ತಡವಾಗಿ ಬೆಳಕಿಗೆ ಬಂದ್ದಿದೆ. ಪೊಲೀಸರ ಮೇಲೆ ಮಾಡಿದ ಆರೋಪಿಗೆ ಜೆಸಿ ಆಗಿದೆ.
ನಗರದ ಬಸವೇಶ್ವರ ಕಾಲೇಜಿನಲ್ಲಿ ನಡೆಯುತ್ತಿದ ಕಾಳಿಕ ಪರಮೇಶ್ವರಿ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿ ನಿರ್ದೆಶಕರ ಚುನವಾಣೆ(election) ಮತ ಎಣಿಕೆ ಸಂರ್ಧಭದಲ್ಲಿ ಕೊಠಡಿಯ ಬಳಿ ಅನಿಲ ಹಾಗು ಸಹಚರರು ಕಾನುಬಾಹಿರವಾಗಿ ಮತ ಎಣಿಕೆ ಕೊಠಡಿಯ ಒಳಗೆ ಪ್ರೆವೇಸಿಸಲು ಹೋರಟಾಗ ಅಲ್ಲೆ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ ಪೋಲಿಸರು ಕೋಡಲೆ ತಡೆಯಲು ಹೋಗಿದ್ದಾರೆ. ಆದರೆ ಅನಿಲ ಏಕಾಏಕಿ ಪೋಲಿಸರ ಮೇಲೆ ಹಲ್ಲೆ ನಡೆಸಿದ್ದಾನೆ.
ತದನಂತರ ಕರ್ತವ್ಯದಲ್ಲಿ ಸಿಬ್ಬಂದಿಗಳು ಹಾಗು ಸಾರ್ವಜನಿಕರು ಗಲಾಟೆ ಬಿಡಿಸಿದರೆ ಈಗ ಕೋಟೆ ಪೋಲಿಸ ಠಾಣೆಯಲ್ಲಿ ಅನಿಲ ವಿರುದ್ದ ಪ್ರಕರಣ ದಾಖಲಾಗಿದ್ದು ಆತನನ್ನ ಬಂಧಿಸಿರುವ ಕೋಟೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.