ಸುದ್ದಿಲೈವ್|ಶಿವಮೊಗ್ಗ-ಜ.05
ಗೃಹಣಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತರ ಕುಟುಂಬ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಶಂಕೆ ವ್ಯಕ್ತಪಡಿಸಿದೆ. ಘಟನೆ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶೈಲಜಾ (28) ಎಂಬ ಮಹಿಳೆ ಮೃತ ದುರ್ದೈವಿಯಾಗಿದ್ದು, ಘಟನೆ ಸೊರಬ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. ಆದರೆ ಶೈಲಜಾಳನ್ನು ಪತಿ ಹಾಗು ಅವರ ಅತ್ತೆ ಹೊಡೆದು ನೇಣು ಹಾಕಿದ್ದಾರೆ ಶೈಲಜಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕುಟುಂಬಸ್ಥರ ಆಗ್ರಹಿಸಿದ್ದು, ಘಟನೆ ಕುರಿತು ಸೊರಬ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.