ತಮಿಳು ಶಾಲೆಯಲ್ಲಿ ಪೊಂಗಲ್ ಸಂಭ್ರಮ


ಸುದ್ದಿಲೈವ್/ಶಿವಮೊಗ್ಗ

ಸಂಕ್ರಾಂತಿ ಹಾಗೂ ಪೊಂಗಲ್ ಹಬ್ಬದ ಪ್ರಯುಕ್ತ ಇಂದು ಬಿ.ಹೆಚ್ ರಸ್ತೆಯಲ್ಲಿರುವ ತಮಿಳು ಶಾಲೆಯಲ್ಲಿ ವಿಭಿನ್ನವಾದ ಕಾರ್ಯಕ್ರಮ ನಡೆದಿದೆ. ಮಕ್ಕಳಿಗಾಗಿ ಪಿಪಿ ಒಡೆಯುವ, ಮಡಿಕೆ ಹೊಡೆಯುವ ಮತ್ತು ಮೊಂಗಲ್ ಅಡಿಗೆ ಮಾಡುವ ಸ್ಪರ್ಧೆ ನಡೆದಿದೆ. 

ಸೌತ್ ಇಂಡಿನ್ ಕಲ್ಚರಲ್ ಅಕಾಡೆಮಿಯ ವತಿಯಿಂದ ಬಿಹೆಚ್ ರಸ್ತೆಯಲ್ಲಿರುವ ತಮಿಳು ಶಾಲೆಯಲ್ಲಿ ಪೊಂಗಲ್ ಸಂಭ್ರಮ ಕಾರ್ಯಕಮದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಜರುಗಿವೆ. 

ಕಾರ್ಯಕ್ರಮದಲ್ಲಿ 1-10 ನೇ ತರಗತಿ ಶಾಲೆ ಮಕ್ಕಳಿಗೆ ಕಂಠಪಾಠ, ಕ್ರೀಡೆ, ಉರಿ ಅಡಿತಲ್ ಎಂಬ ವಿಭಿನ್ನ ಕಾರ್ಯಕ್ರಮ ನಡೆದಿದೆ. 18 ವರ್ಷಗಳಿಂದ ಅಕಾಡೆಮಿ ನಡೆಸಿಕೊಂಡು ಬಂದಿದೆ. ವರ್ಷ ವರ್ಷ ಈ ಕಾರ್ಯಕ್ರಮ‌ನಡೆಯಲಿದೆ. 


ಭಾನುವಾರ ಸಂಜೆ 5 ಗಂಡೆಗೆ ಅಂಬೇಡ್ಕರ್ ಭವನದಲ್ಲಿ ಶಾಲೆಯ ವರ್ಷಾಚರಣೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಾಕ್ರಮದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ವಜೇತರಿಗೆ ಬಹುಮಾನ ವಿತರಿಸಲಾಗುವುದು.  ಸರಿಗಮಪ ವಿಜೇತರಾದ ಎಡ್ವಿನ್,  ಚಿನ್ನ ಪೊನ್ನು ಎಂಬ ಹೆಸರಾಂತ ಗಾಯಕಿ ಭಾಗವಹಿಸಲಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close