Minister Madhu Bangarappa today visited the Govindapur shelter house issue which is a hotbed of confusion, and there is an uproar against the Jalmandal officials. |
ಸುದ್ದಿಲೈವ್/ಶಿವಮೊಗ್ಗ
ಗೊಂದಲದ ಗೂಡಾಗಿರುವ ಗೋವಿಂದಾಪುರದ ಆಶ್ರಯ ಮನೆಗಳ ಹಂಚಿಕೆ ವಿಷಯ ಇನ್ನೂ ಜೀವಂತವಾಗಿರುವ ಬೆನ್ನಲ್ಲೇ ಇಂದು ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಜಲಮಂಡಳಿ ಅಧಿಕಾರಿಗಳ ವಿರುದ್ಧ ಕೆಂಡಮಂಡಲರಾಗಿದ್ದಾರೆ.
ಗೋವಿಂದಾ ಪುರದಲ್ಲಿ 634 ಮನೆ ಹಂಚಿಕೆಗೆ ಸಿದ್ದವಾಗಿದ್ದು ಇಂದು ಸಚಿವರು ಭೇಟಿ ಮಹತ್ವ ಪಡೆದುಕೊಂಡಿದೆ. ಸಚಿವರು ಭೇಟಿ ನೀಡಿದ ವೇಳೆ ಜಲಮಂಡಳಿ ಅಧಿಕಾರಿ ನವೀನ್ ಹಾಜರಿರದ ಹಿನ್ನಲೆಯಲ್ಲಿ ಕೆಂಡಮಂಡಲರಾದರು.
ಆಶ್ರಯ ಮನೆ ಬಡಾವಣೆಯಲ್ಲಿ ವಿದ್ಯುತ್ ಸಮಸ್ಯೆ, ಕುಡಿಯುವ ನೀರು, ಯುಜಿಡಿ, ಬಸ್ ಅವ್ಯವಸ್ಥೆ,ಗಳಿವೆ. ಈ ಹಿನ್ನಲೆಯಲ್ಲಿ ಇಂದು ಸಚಿವರು ಭೇಟಿ ನೀಡಲಿದ್ದಾರೆ ಎಂಬ ವಿಷಯ ಗೊತ್ತಿದ್ದರೂ ಬಾರದೆ ಇರುವ ಹಿನ್ನಲೆಯಲ್ಲಿ ಸಚಿವರು ಗರಂಆದರು. ಸ್ಥಳದಲ್ಲಿದ್ದ ಪಾಲಿಕೆ ಆಯುಕ್ತರಿಗೆ ನೀವು ಮಾಹಿತಿ ನೀಡಿಲ್ವಾ ಎಂದು ಕೆಂಡ ಕಾರಿದರು.
ನಂತರ ಮಾಧ್ಯಮಗಳಿಗೆ ಮಾತನಾಡಿದ ಸಚಿವ ಮಧು ವಙಗಾರಪ್ಪ 20 ದಿನಗಳಲ್ಲಿ ಸಮಸ್ಯೆ ಬಗೆಹರಿಸಿ ಹಂಚಿಕೆಯ ದಿನಾಂಕವನ್ನ ನಿಗದಿಪಡಿಸಲಾಗುವುದು. ಎಲ್ಲಾ ತಾತ್ಕಾಲಿಕ ಸಂಪರ್ಜ ಪಡೆಯದೆ ಖಾಯಂ ಸಂಪರ್ಕ ಪಡೆದು ಹಂಚೋಣ ಎನ್ನಲಾಗಿದೆ. 2014ವರಲ್ಲಿ ಮಾಡಬೇಕಿದ್ದ ಕಾಮಗಾರಿ ಈಗ ಹಂಚಿಕೆಯಾಗುತ್ತಿದೆ ಎಂದರು.
ಬಿಜೆಪಿ ಸರ್ಕಾರ ಇದ್ದಾಗ ಅರ್ಧಂಬರ್ಧ ಆಗಿತ್ತು. ಈಗ ನಮಗೆ ಬಂದಿಗೆ ಜನ ಇಲ್ಲೆಗೆ ಬಂದ ಮೇಲೆ ಒದ್ದಾಡುವಂತಾಗಬಾರದು ಎಂಬ ಆಶಯದಿಂದ ತಡವಾಗಿದೆ. 20 ದಿನದಲ್ಒಇ ಮೂಲಭೂತ ಸಮಸ್ಯೆ ಬಗೆಹರಿಸಲಿದ್ದೇವೆ ಎಂದು ಸಚಿವರು ಭರವಸೆ ನೀಡಿದರು. ಆಶ್ರಯ ಮನೆ ಹಂಚಿಕೆಗೆ ದಿನಾಂಕ ಗೊಂದಲದ ಗೂಡಾಗಿದೆ.