ಈಗಲೂ ಬಿಎಸ್ ವೈ ನಮ್ಮ‌ನಾಯಕರು-ಬೇಳೂರು

Congress MLA Belur Gopalakrishna praised BS Yeddyurappa as always our leader.

ಸುದ್ದಿಲೈವ್/ಶಿವಮೊಗ್ಗ

ಬಿಎಸ್ ಯಡಿಯೂರಪ್ಪ ಯಾವಾಗಲೂ ನಮ್ಮ ನಾಯಕರೇ ಎಂದು ಕಾಂಗ್ರೇಸ್ ಶಾಸಕ ಬೇಲೂರು ಗೋಪಾಲಕೃಷ್ಣ ಹಾಡಿ ಹೊಗಳಿದ್ದಾರೆ.

ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಕಾರ್ಯಕ್ರಮ ಒಂದರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ರವರನ್ನ ಬೇಳೂರು ಗೋಪಾಲಕೃಷ್ಣ ನಾನು ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು ಯಡಿಯೂರಪ್ಪ ನಾಯಕತ್ವದಲ್ಲಿ ಎಂದು ಹೇಳಿದ್ದು ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. 


ಯಡಿಯೂರಪ್ಪ ರವರು ನಮ್ಮ ನಾಯಕರೇ ಆದರೆ ಕೆಲವು ರಾಜಕೀಯ ಬೆಳವಣಿಗೆಗಳಿಂದ ಬೇರೆ ರೀತಿ ಮಾತನಾಡಬೇಕಾಗುತ್ತದೆ ಎಂದು ಕೆಲವರು ಅಂದುಕೊಳ್ಳುತ್ತಾರೆ. 

ಆದರೆ ಯಡಿಯೂರಪ್ಪ ಎಂದರೆ ಏನೋ ಒಂದು ರೀತಿಯಲ್ಲಿ ಮಾತನಾಡುತ್ತಾರೆ ಎಂದು 2004 ಮತ್ತು 2008ರಲ್ಲಿ ಅವರ ನಾಯಕತ್ವದಲ್ಲಿ ನಾನು ಗೆದ್ದು ಬಂದಿದ್ದೇನೆ. ಪಕ್ಷಗಳು ಬದಲಾದ ಹಿನ್ನೆಲೆಯಲ್ಲಿ ನಾವುಗಳು ಬೇರೆ ಇದ್ದೇವೆ ಈಗಲೂ ಕೂಡ ಅವರು ನನ್ನ ನಾಯಕರೇ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ. 

ಬಿಜೆಪಿಯಲ್ಲೇ ಹಲವು ಗೊಂದಲ ಮೂಡಿರುವ ವೇಳೆ ಗೋಪಾಲಕೃಷ್ಣರ ಈ ಹೇಳಿಕೆ ಟಾಂಗ್ ನೀಡಿರುವುದೋ ಅಥವಾ ನಿಜವಾಗಿಯೂ ನಾಯಕರೆ ಎಂದು ಒಪ್ಪಿಕೊಂಡ್ರಾ ಎಂದು ಕಾದು ನೋಡಬೇಕಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close