ಮುಸುಕುಧಾರಿಗಳಿಂದ ವ್ಯಕ್ತಿಯ ಅಪಹರಣಕ್ಕೆ ಯತ್ನ

In rural Bhadravati, the masked men are attempting kidnap. There was an unsuccessful attempt to kidnap a person by 6 unknown persons.


ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿ ಗ್ರಾಮಾಂತರ ಭಾಗದಲ್ಲಿ ಮುಸುಕುಧಾರಿಗಳು ಅಟ್ಟಹಾಸ ಮೆರೆದಿದ್ದಾರೆ. 6 ಜನ ಅಪರಿಚಿತರಿಂದ ವ್ಯಕ್ತಿಯೋರ್ವ ಅಪಹರಣದ ವಿಫಲ ಪ್ರಯತ್ನ ನಡೆದಿದೆ. 

ನಿಂಗಪ್ಪರವರು ಜ.15 ರಂದು ರಾತ್ರಿ ಸುಮಾರು 9-15 ಗಂಟೆ ಸಮಯದಲ್ಲಿ  ತಮ್ಮ ಮನೆಯಿಂದ ಅರ್ಧ ಕಿ.ಮಿ ದೂರದ ತಾರೀಕಟ್ಟೆ ಗ್ರಾಮದ ಸರ್ಕಲ್ ಬಳಿ ಇರುವ ದೇವಸ್ಥಾನದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಭಾಗಿಯಾಗಿದ್ದ ನಿಂಗಪ್ಪನವರು ಸಭೆ  ಮುಗಿಸಿಕೊಂಡು KA-14-EZ-9621 ಹೊಂಡಾ ಆಕ್ಟಿವಾದಲ್ಲಿ ಮನೆಗೆ ತೆರಳಿದ್ದಾರೆ.  

ತಾರಿಕಟ್ಟೆಯ ಜಯರಾಮ್ ರವರ ಇಟ್ಟಿಗೆ ಪ್ರಾಕ್ಟರಿ ಮುಂಭಾಗದಲ್ಲಿ  ನಂಬರ್ ಇಲ್ಲದ ಬಿಳಿ ಬಣ್ಣದ ಬೋಲೆರೋ ಪಿಕ್ ಅಪ್ ವಾಹನ ನಿಂತಿತ್ತು. ನಿಂಗಪ್ಪನವರ  ದ್ವಿ ಚಕ್ರ ವಾಹನದಲ್ಲಿ ಬೋಲೋರೋ ಪಿಕ್ ಅಪ್ ವಾಹನವನ್ನು ದಾಟಿ ಮುಂದೆ ಹೋಗುತ್ತಿದ್ದಂತೆ ನಿಂತಿದ್ದ ಬೋಲೆರೋ ಪಿಕ್ ಅಪ್ ವಾಹನ ಸ್ಮಾರ್ಟ್ ಮಾಡಿಕೊಂಡು ಬಂದು ನಿಂಗಪ್ಪನವರ ವಾಹನವನ್ನ ಅಡ್ಡಕಟ್ಟಿದೆ.  

ನಿಂಗಪ್ಪನವರು ಬೈಕನ್ನು ನಿಲ್ಲಿಸುತ್ತಿದ್ದಂತೆ ಬೋಲೆರೋ ವಾಹನದಲ್ಲಿದ್ದ ಮೂರು ಜನ ಮುಸುಕುಧಾರಿಗಳು (ಮಂಕಿ ಕ್ಯಾಪ್ ಧರಿಸಿದ್ದು) ಇಳಿದು ನಿಂಗಪ್ಪನವರನ್ನ ಹಿಡಿದುಕೊಂಡು ಅವರಲ್ಲಿ ಒಬ್ಬ  ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಇನ್ನೊಬ್ಬ ಮುಸುಕುಧಾರಿ ನಿಂಗಪ್ಪನವರ ಕೈಯಲ್ಲಿದ್ದ ಬಟ್ಟೆಯಿಂದ  ಬಾಯಿ ಮತ್ತು ಮೂಗಿಗೆ ಬಿಗಿಯಾಗಿ ಅದುಮಿಟ್ಟುಕೊಂಡಿದ್ದಾನೆ.  ಇನ್ನೊಬ್ಬ ವ್ಯಕ್ತಿ ಎಂತದ್ದೋ ಔಷಧಿ ಇದ್ದ ಬಾಟಲ್ ಅನ್ನು ಮುಖಕ್ಕೆ ಸಿಂಪಡಿಸಿ ಮೂರು ಜನರು ಒಟ್ಟಿಗೆ ಸೇರಿ  ಬೋಲೋರೋ ಪಿಕ್ ಅಪ್ ವಾಹನದಲ್ಲಿ ಎತ್ತಿಹಾಕಿಕೊಳ್ಳಲು ಪ್ರಯತ್ನಿಸಿದ್ದಾರೆ. 

ಆಗ ನಿಂಗಪ್ಪನವರು ಬಲವಾಗಿ ತನ್ನ ಕಾಲುಗಳಿಂದ ಬೋಲೆರೋ ವಾಹನಕ್ಕೆ ಒದ್ದಾಗ ಹಿಡಿದುಕೊಂಡಿದ್ದ ಮೂರು ಜನ ಮುಸುಕುಧಾರಿಗಳು ಆಯಾ ತಪ್ಪಿ ಬಿದ್ದಿದ್ದಾರೆ. ಆಗ ನಿಂಗ್ಪ ಜೋರಾಗಿ ಕೂಗಿಕೊಂಡಾಗ  ಚೀರುವುದನ್ನು ಕೇಳಿ  ಊರಿನ ಶಂಕರರೆಡ್ಡಿ, ಜನಾರ್ಧನ ರೆಡ್ಡಿ, ರಮೇಶ @ ಅಮ್ಮಣ್ಣಿ ಇವರುಗಳು ಓಡಿ ಬಂದಿದ್ದಾರೆ. ಅವರು ಓಡಿ ಬರುವುದನ್ನು ನೋಡಿದ ಮುಸುಕುಧಾರಿಗಳು ತಾವು ತಂದಿದ್ದ ಬೋಲೆರೋ ಪಿಕ್ ಆಫ್ ವಾಹನವನ್ನು ಜೋರಾಗಿ ಚಲಾಯಿಸಿಕೊಂಡು ಗೊಂದಿ ಕೈಮರ ಕಡೆಗೆ ಪರಾರಿಯಾಗಿದ್ದಾರೆ. 

ಈ ಬಗ್ಗೆ ತಡವಾಗಿ ನಿಂಗಪ್ಪ ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಚರ್ಚಿಸಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆದರೆ ಅಪಹರಣಕಾರರ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close