ಶಿವಕುಮಾರ್ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ |
ಸುದ್ದಿಲೈವ್/ಶಿವಮೊಗ್ಗ
ಪದೇ ಪದೇ ಗೋವು ಸಂರಕ್ಷಣೆ ವಿಚಾರವಾಗಿ ಹೇಳಿಕೆ ನೀಡುತ್ತಿರುವ ಈಶ್ವರಪ್ಪನವರು ತಮ್ಮ ಅಧಿಕಾರ ಅವಧಿಯಲ್ಲಿ ಶಿವಮೊಗ್ಗ ನಗರಕ್ಕೆ ಎಷ್ಟು ಗೋಶಾಲೆಗಳನ್ನು ಕೊಟ್ಟಿದ್ದೀರಿ ಎಂದು ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ ಎಸ್ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಶಿವಮೊಗ್ಗ ನಗರಕ್ಕೆ ಗೋಶಾಲೆ ಗೆಂದು ಸ್ಥಳ ನೀಡಿದ್ದು ಅಂದಿನ ಕಾಂಗ್ರೆಸ್ ಪಕ್ಷದ ಶಾಸಕರಾದ ಎಚ್ ಎಮ್ ಚಂದ್ರಶೇಖರಪ್ಪ ನವರ ಅಧಿಕಾರ ಅವಧಿಯಲ್ಲಿ ಮಹಾವೀರ ಜೈನ್ ಸಮುದಾಯಕ್ಕೆ ನೀಡಲಾಯಿತು. ತದನಂತರ 2013-2018 ರ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ 50 ಲಕ್ಷ ಹಣವನ್ನು ಗೋಶಾಲೆಗೆ ಅಭಿವೃದ್ಧಿಗೆಂದು ಬಿಡುಗಡೆ ಮಾಡಿದ್ದರು.
ಕೆ ಎಸ್ ಈಶ್ವರಪ್ಪನವರು ಶಿವಮೊಗ್ಗ ನಗರದಿಂದ ಐದು ಬಾರಿ ಶಾಸಕರಾಗಿದ್ದರು, ಬಿಜೆಪಿ ಸರ್ಕಾರದ ಮಂತ್ರಿ ಮಂಡಲದಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ವಿವಿಧ ಮಂತ್ರಿ ಪದವಿಯನ್ನು ಹೊಂದಿದ್ದರು ಸಹ ಗೋಶಾಲೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಭಿವೃದ್ಧಿ ಪಡಿಸುವ ವಿಚಾರವಾಗಿ ಪ್ರಯತ್ನವೇ ಪಟ್ಟಿರುವುದಿಲ್ಲ, 2018 ರಿಂದ 2023 ರ ಅವಧಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯು ಬಿಜೆಪಿ ಆಡಳಿತದಲ್ಲಿದ್ದು ಅದೇ ಸಂದರ್ಭದಲ್ಲಿ ಶಿವಮೊಗ್ಗ ನಗರಕ್ಕೆ ಕೆ ಎಸ್ ಈಶ್ವರಪ್ಪನವರು ಶಾಸಕರಾಗಿದ್ದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಮಹಾನಗರ ಪಾಲಿಕೆಯ ಅನುದಾನದಲ್ಲಿ 50 ಲಕ್ಷ ರೂಪಾಯಿ ಹೊಸದಾಗಿ ಗೋಶಾಲೆ ನಿರ್ಮಾಣ ಮಾಡಲು ಘೋಷಿಸಿದ್ದರು.
ಆದರೆ ಐದು ವರ್ಷಗಳ ಅವಧಿಯಲ್ಲಿ ಗೋಶಾಲೆ ಗೆಂದು ಸೀಮಿತವಾಗುತ್ತಿದ್ದ ಹಣವನ್ನು ಉಪಯೋಗಿಸದೆ ಹೊಸ ಗೋಶಾಲೆಯನ್ನು ನಿರ್ಮಾಣ ಮಾಡದೆ, ಗೋವುಗಳ ವಿಚಾರದಲ್ಲಿ ರಾಜಕೀಯ ಮಾಡುತ್ತಾ ಕಾಲ ಕಳೆದಿದ್ದಾರೆ. ಹಿಂದೂ ಸಮಾಜದವರು ಏನಾದರೂ ಎಚ್ಚೆತ್ತುಕೊಂಡು ಗೋಮುಖ ವ್ಯಾಘ್ರ ಕೆ ಎಸ್ ರಾಜಕೀಯ ಹೇಳಿಕೆಗಳನ್ನು ಖಂಡಿತ ಇವರು ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ಪದೇಪದೇ ಗೋವುಗಳ ವಿಚಾರ, ಹಿಂದುಗಳ ಹಾಗೂ ಹಿಂದುತ್ವದ ವಿಚಾರವಾಗಿ ಅನಾವಶ್ಯಕ ಪತ್ರಿಕಾ ಹೇಳಿಕೆಗಳನ್ನು ನೀಡುತ್ತಾ, ತಮ್ಮನ್ನು ತಾವು ಹಿಂದುತ್ವದ ಪ್ರತಿವಾದಿ ಹಾಗೂ ರಾಜಕೀಯವಾಗಿ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಹೊರತು ಬೇರೆ ಯಾವ ಉದ್ದೇಶವು ಕಾಣುತ್ತಿಲ್ಲ.
ಇನ್ನು ಮುಂದಾದರು ಈಶ್ವರಪ್ಪನವರಿಗೆ ದೇವ ಸೀತಾರಾಮ ಹಾಗೂ ಗೋಮಾತೆಯು ಸದ್ಬುದ್ದಿ ನೀಡಲೆಂದು ಸಮಸ್ತ ಹಿಂದುಗಳ ಪರವಾಗಿ ಪ್ರಾರ್ಥಿಸಿಕೊಳ್ಳುತ್ತೇವೆ ಎಂದು ಶಿವಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.