Ramesh Hegde accused Sahakar Bharati that polling is unethical. |
ಸುದ್ದಿಲೈವ್/ಶಿವಮೊಗ್ಗ
ಸಹಕಾರ ಭಾರತಿಗೆ ಮತಯಾಚನೆಗೆ ನೈತಿಕತೆಯಿಲ್ಲ ಎಂದು ರಮೇಶ್ ಹೆಗಡೆ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ.04 ರಂದು ಮ್ಯಾಮ್ ಕೋಸ್ ಚುನಾವಣೆಯಿದೆ. ಈ ಮ್ಯಾಕೋಸ್ ಚುನಾವಣೆಯಲ್ಲಿ ಮತಯಾಚನೆಗೆ ನೈತಿಕತೆಯಿಲ್ಲ. ಸಹಕಾರ ಭಾರತಿ ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂಬುದನ್ನ ಹೋಗಲಾಡಿಸಿ ಭಾರತೀಯ ಸಂಸ್ಕೃತಿಗೆ ಗೌರವ ತಂದುಕೊಡುವಲ್ಲಿ ವಿಫಲವಾಗಿದೆ ಎಂದರು.
ಆರೋಗ್ಯ ಖಾತೆ ರಾಜ್ಯಸಭೆ ಸಚಿವರೆ ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂದು ಹೇಳಿದ್ದಾರೆ. ಮೊನ್ನೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸಾಗರಕ್ಕೆ ಭೇಟಿ ನೀಡಿರುವುದು ಮ್ಯಾಮ್ ಕೋಸ್ ಚುನಾವಣೆ ಹಿನ್ನಲೆಯಲ್ಲಿ ಭೇಟಿ ನೀಡಲಾಗಿದೆ ಎಂದು ದೂರಿದರು.
ನರೆಗಾದಲ್ಲಿ ಅಡಿಕೆ ತೋಟದಲ್ಲಿ ಉದ್ಯೋಗ ನೀಡುವುದು ಬೇಡ ಎಂದು ವಿಧಾನ ಸಭೆಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ದಾಖಲೆ ಮಾಡಿದ್ದಾರೆ. ಈ ಬಗ್ಗೆ ಸಹಕಾರ ಭಾರತಿ ಸ್ಪಷ್ಟಪಡಿಸಬೇಕು. ತಂಬಾಕು ಮಂಡಳಿ, ತೆಂಗು ಬೆಳೆ ಮಂಡಳಿ ರಚಿಸಲಾಗಿದ್ದು ಅಡಿಕೆ ಮಂಡಳಿ ರಚಿಸಲು ಸಹಕಾರ ಭಾರತಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿ ನಿರಂಜನ್, ಜಿ.ಡಿ.ಮಂಜುನಾಥ್, ವಿಜಯಕುಮಾರ್, ದಯಾನಂದ್, ಇಕ್ಕೇರಿ ರಮೇಶ್, ಕುಶಾಲ್ ಪಟೇಲ್ ಮೊದಲಾದವರು ಉಪಸದಥಿತರಿದ್ದರು.