ಆತಂಕ ಹೆಚ್ಚಿಸಿದ ಪೌರಕಾರ್ಮಿಕ ಮೂರ್ತಿಯ ವಿಡಿಯೋ



ಸುದ್ದಿಲೈವ್/ಶಿವಮೊಗ್ಗ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಶಿವಮೊಗ್ಗ ಮಹಾನಗರ ಪಾಲಿಕೆ ಪೌರಕಾರ್ಮಿಕರನ್ನ ಮತ್ತು ಅಧಿಕಾರಿಗಳನ್ನ ಗಡಗಡ ಅಲುಗಾಡಿಸಿದೆ. ಆತನ ಫೋನ್ ಸಹ ನಗರ ಮತ್ತು ಭದ್ರಾವತಿ ತಾಲೂಕಿನಲ್ಲಿ ತೋರಿಸುತ್ತಿರುವುದು ಆತಂಕ ಮೂಡಿಸಿದೆ. 


ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವರ ಹೆಸರು ಹೇಳಿ ಪೌರಕಾರ್ಮಿಕರೊಬ್ಬರು ವಿಷದ ಬಾಟೆಲ್ ತೋರಿಸಿ ಇದೇ ನನಗೆ ಗತಿ ಎಂದು ಹೇಳಿಕೆ ನೀಡಿರುವುದು ಆತಂಕ ಮೂಡಿಸಿದೆ. ಈ ಆತ್ಮಹತ್ಯೆ ಮಾಡಿಕೊಳ್ಳುವುದು ಬಿಟ್ಟರೆ ನನಗೆ ಬೇರೆ ಗತಿಯಿಲ್ಲ ಎಂದು ಹೇಳಿರುವುದು ತಲ್ಲಣಮೂಡಿಸಿದೆ. 

ಮೂರ್ತಿ ಎಂಬ ಪೌರಕಾರ್ಮಿಕ‌ ವಿಡಿಯೋವೊಂದನ್ನ ಹರಿಬಿಟ್ಟು ನಾಪತ್ತೆಯಾಗಿದ್ದಾರೆ. ಮೊದಲಿಗೆ ಎಂಆರ್ ಎಸ್ ನಲ್ಲಿರುವುದಾಗಿ ಮೊಬೈಲ್ ಟ್ರ್ಯಾಕ್ ಪತ್ತೆ ಮಾಡಿದೆ. ನಂತರ ಮತ್ತೆ ಭದ್ರಾವತಿಯ ಗೋಣಿ ಬೀಡುವಿನಲ್ಲಿ ಸೂಚಿಸುತ್ತಿದೆ. 

ಇವರ ಹುಡುಕಾಟದಲ್ಲಿ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಗೋವಿಂದರವರು ಎಡಬಿಡದೆ ಹುಟುಕಾಟ ನಡೆಸುತ್ತಿದ್ದಾರೆ. ಗೋಣಿಬೀಡುವಿನಲ್ಲಿ ಅವರು ತಂಗಿದ್ದಾರೆ. ಆದರೆ ಮುಂದಿನ ಬೆಳವಣಿಗೆ ತಿಳಿದು ಬರಬೇಕಿದೆ. ಮೂರ್ತಿಗಾಗಿ ಹುಡುಕಾಟ ಮುಂದು ವರೆದಿದೆ. 

ಪೌರಕಾರ್ಮಿಕ ಮೂರ್ತಿ ಅವರಿಗೆ ಮೋರಿ ಕೆಲಸಕ್ಕೆ ನೇಮಿಸುವುದಾಗಿ ಹೆದರಿಸಿದ್ದಕ್ಕೆ ಮೂರ್ತಿಯವರು ವಿಷದ ಬಾಟೆಲ್ ತೋರಿಸಿ ಇದೇ ಗತಿ ನಮಗೆ ಎಂದು ಹೇಳಿರುವುದು ಆತಂಕ ಹೆಚ್ಚಿಸಿದೆ. ಈಗ ಮೂರ್ತಿ ಅವರಿಗೆ ಮೇಸ್ತ್ರಿ ಕೆಲಸಕ್ಕೆ ಬಡ್ತಿ ಪಡೆದಿದ್ದಾರೆ. ಅವರನ್ನ ಮೋರಿ ಸ್ವಚ್ಛತೆಗೆ ಹಚ್ಚುವುದಾಗಿ ಹೇಳಿರುವುದು ಅವರಿಗೆ ತುಂಬಲಾಗದ ನೋವು ಉಂಟು ಮಾಡಿದೆ

ಬೆನ್ನು ನೋವಿನ ಕಾರಣ ಬಡ್ತಿ ಪಡೆದಿರುವ ಮೂರ್ತಿ ವಿಡಿಯೋದಲ್ಲಿ ಕೈಮುಗಿದು ಕೇಳಿಕೊಂಡಿರುವುದು ಅಮಾಯಕತೆಯನ್ನ ತೋರಿಸಿದೆ. ನಮಸ್ಕಾರ ಪ್ರಭುಣ್ಣ ಎಂದು ಅವರ ಮಾತು ಆರಂಭಿಸಿರುವುದು ಹಲವು ಅನುಮಾನವನ್ನ ಹೆಚ್ಚಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close