ಸುದ್ದಿಲೈವ್/ಶಿವಮೊಗ್ಗ
ಮ್ಯಾಮ್ ಕೋಸ್ ಚುನಾವಣೆಗೆ ಬಿಜೆಪಿಯ ಸಹಕಾರ ಭಾರತಿಯ 19 ಜನ ಇಂದು ನಾಮ ಪತ್ರ ಸಲ್ಲಿಸಿದ್ದಾರೆ. ಕಳೆದ 15 ವರ್ಷಗಳಿಂದ ಸಹಕಾರ ಭಾರತಿಯ ಸದಸ್ಯರೇ ರಾಜ್ಯಭಾರ ಆಳುತ್ತಿದ್ದು, ಮತ್ತೆ ಮುಂದಿನ ಐದು ವರ್ಷಕ್ಕೆ 19 ಜನರ ತಂಡ ಪುನರ್ ಆಯ್ಕೆಯನ್ನಬಯಸಿ ನಾಮ ಪತ್ರ ಸಲ್ಲಿಸಿದ್ದಾರೆ.
ಫೆ.4 ರಂದು ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಒಳಗೊಂಡಿರುವ "ಮಾಮ್ಕೋಸ್ ಚುನಾವಣೆ" ಗೆ ಸಂಬಂಧಿಸಿದಂತೆ ಸಹಕಾರ ಭಾರತಿ ಯ ಎಲ್ಲಾ 19 ಅಭ್ಯರ್ಥಿಗಳು ಇಂದು ಬೆಳಗ್ಗೆ ಶಿವಮೊಗ್ಗ ರವೀಂದ್ರ ನಗರದ ಬಲಮುರಿ ಗಣಪತಿ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿ ನಂತರ ಮಾಮ್ಕೋಸ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಆದರೆ ಮ್ಯಾಮಕೋಸ್ ಚುನಾವಣೆಗೆ ಕಾಂಗ್ರೆಸ್ ನ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸುವ ನಿರೀಕ್ಷೆ ಇದ್ದು, ಅವರ ತಯಾರಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವಲ್ಲಿ ವಿಳಂಭ ನೀತಿ ಅನುಸರಿಸುತ್ತಿದೆ ಅಂತನೇ ಹೇಳಬಹುದು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ, ಪ್ರಾಂತ ಸಹಕಾರ್ಯವಾಹ ಪಟ್ಟಾಭಿ ರಾಮ್ ರವರು,
ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ ವಿಭಾಗ ಪ್ರಭಾರಿ ಗಳಾದ ಗಿರೀಶ್ ಪಟೇಲ್ಅವರು, ಪ್ರಕೋಷ್ಠಗಳ ರಾಜ್ಯ ಸಂಯೋಜಕರಾದ ದತ್ತಾತ್ರಿ ರವರು, ವಿಧಾನ ಪರಿಷತ್ ಮಾಜಿ ಶಾಸಕರಾದ ಆರ್ ಕೆ ಸಿದ್ದರಾಮಣ್ಣ ಕೆ ಜಿ ಕುಮಾರಸ್ವಾಮಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸುರೇಶ್ ಸಿಂಗನಹಳ್ಳಿ ರವರು, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ವಿನ್ಸೆಂಟ್ ರೋಡ್ರಿಗಸ್ ರವರು, ನಿಕಟಪೂರ್ವ ಮಂಡಲ ಅಧ್ಯಕ್ಷರಾದ ಪಿ ರತ್ನಾಕರ ಶೆಣೈರವರು, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ ಪಿಳ್ಳಂಗೆರೆರವರು, ಸಹಕಾರ ಭಾರತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಂದೀಶ್ ರವರು, ಕಸಬಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಹೆಚ್ ವಿ ಅರುಣ್ ರವರು, ಬಿಜೆಪಿ ನಾಯಕರಾದ ಟಿ ಬಿ ಜಗದೀಶ್ ರವರು, ಮಾಮ್ಕೋಸ್ ಹಾಲಿ ಸದಸ್ಯರು ಮತ್ತು ಸಹಕಾರ ಭಾರತಿಯ ಅಭ್ಯರ್ಥಿಗಳಾದ ಜಿ ಈ ವಿರುಪಾಕ್ಷಪ್ಪ ರವರು , ಸತೀಶ್ ರಾಮಿನಕೊಪ್ಪ ರವರು ಸೇರಿದಂತೆ ಸಹಕಾರಿ ಭಾರತಿಯ ಎಲ್ಲಾ ಅಭ್ಯರ್ಥಿಗಳು ಮತ್ತು ಬಿಜೆಪಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.