Earlier, Venkatesh, who was a witness in the case of former Mahanagara Palika member Satyanarayan Raju Yane Motte Satish's land, has been attracity and threatened with murder. |
ಸುದ್ದಿಲೈವ್/ಶಿವಮೊಗ್ಗ
ಈ ಹಿಂದೆ ಮಾಜಿ ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಸತ್ಯನಾರಾಯಣ ರಾಜು ಯಾನೆ ಮೊಟ್ಟೆ ಸತೀಶ್ ಅವರ ಜಮೀನು ವಿಚಾರದಲ್ಲಿ ಸಾಕ್ಷಿಯಾಗಿದ್ದ ವೆಂಕಟೇಶ್ ಅವರಿಗೆ ಜಾತಿನಿಂದನೆ, ಕೊಲೆಬೆದರಿಕೆ ಹಾಕಲಾಗಿದೆ.
ಸಾಕ್ಷಿ ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಹಲ್ಲೆ ನಡೆಸಲಾಗಿದೆ. 6 ಜನರ ವಿರುದ್ಧ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಸತ್ಯನಾರಾಯಣ ರಾಜು
ಆ.15 ರಂದು ರಾತ್ರಿ 12-30 ರಿಂದ 1-00 ಘಂಟೆ ಸಮಯದಲ್ಲಿ ಸತ್ಯನಾರಾಯಣ ರಾಜು ಅವರ ಮನೆಗೆ ರಾಮ್ ಬಾಬು, ನಾಗರಾಜ್ ನಾಯ್ಕ ಮತ್ತು ಕೆಲವರು ಸೇರಿಕೊಂಡು ದೊಣ್ಣೆಗಳಿಂದ ಕಾರ್ ನ್ನ ಜಖಂಗೊಳಿಸಿ ಹಾಗೂ ಮೊಟ್ಟೆ ಸತೀಶ್ ಮೇಲೆ ದಾಳಿ ನಡೆಸಿದ್ದರು ಎಂದು ಸತ್ಯನಾರಾಯಣ ರಾಜು ಅವರೇ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದರು.
ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ. ಜಮೀನು ವಿಷಯಕ್ಕೆ ಬಂದರೆ ಹಾಗೂ ನಮ್ಮ ಮೇಲೆ ಪೋಲಿಸ್ ಠಾಣೆ ಗಳಲ್ಲಿ ದೂರು ನೀಡಿದರೆ, ನಿನ್ನ ಹಾಗೂ ನಿನ್ನ ಕುಟುಂಬವನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಮೊಟ್ಟೆ ಸತೀಶ್ ರಿಗೆ ಬೆದರಿಸಿರುವುದಾಗಿ ಆರೋಪಿಸಿದ್ದರು.
ಆರ ಎಸ್ ಸತ್ಯನಾರಾಯಣ್ ರಾಜ್ ಮಾಜಿ ರೌಡಿ ಶೀಟರ್, ಒಂದು ಪತ್ರಿಕೆಯ ಸಂಪಾದಕ, ಗ್ರಾಮ ಪಂಚಾಯತಿ ಸೇರಿ, ಪಾಲಿಕೆಯ ಚುನಾವಣೆಗಳಲ್ಲಿ ಸ್ಪರ್ಧಿಸಿ, ಪಾಲಿಕೆಯ ಸದಸ್ಯನಾಗಿರುತ್ತಾರೆ. ಹಲ್ಲೆಗೆ ಮುಖ್ಯ ಕಾರಣ ಇವರ ಅಜ್ಜ 1962ರಲ್ಲಿ ಶುಗರ್ ಫ್ಯಾಕ್ಟರಿ ಜಮೀನು ಖರೀದಿಸಿದ್ದರು.
ನ್ಯಾಯಾಲಯದ ಆದೇಶ ಮತ್ತು ಪಾಣಿಯಲ್ಲಿ ಇವರ ಹೆಸರು ಈಗಲೂ ಚಾಲ್ತಿಯಲ್ಲಿದೆ. ವಾಮ ಮಾರ್ಗದಿಂದ ಇವರ ದೂರದ ಸಂಬಂಧಿ ಆ ಜಮೀನನ್ನು ಯಾವುದೇ ದಾಖಲೆ ಇಲ್ಲದೆ ಬೇರೆಯರಿಗೆ ಉಳಿಮೆ ಮಾಡಲು ನೀಡಿದ್ದು, ಇದರ ವಿರುದ್ಧ ಧ್ವನಿ ಎತ್ತಿ ನ್ಯಾಯಕ್ಕಾಗಿ ಕಾನೂನು ರೀತಿಯ ಹೋರಾಟ ಮಾಡಲು ಮುಂದಾದಾಗ ಈ ಸಮಸ್ಯೆಗಳು ಕಿರುಕುಳ ನೀಡುವುದು. ಸುಳ್ಳು ದೂರು ನೀಡಿ ಮಾನಹಾನಿ ಮಾಡುವುದು ಮಾಡುತ್ತಿದ್ದು ಪ್ರಸ್ತುತ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ಇಂಜೆಕ್ಷನ್ ಆರ್ಡರ್ ಸಿಕ್ಕಿರುತ್ತದೆ ಎಂದು ಮೊಟ್ಟೆ ಸತೀಶ್ ವಿವರಿಸಿದ್ದರು.
ಸಾಕ್ಷಿ ನಾಶಕ್ಕೆ ಯತ್ನ
ಈ ಪ್ರಕರಣ ಈಗ ಮತ್ತೊಂದು ತಿರುವು ಪಡೆದಿದೆ. ಇವರ ಪರವಾಗಿ ಸಾಕ್ಷಿ ಹೇಳಿದ್ದ ವೆಂಕಟೇಶ್ ಎಂಬುವರಿಗೆ ರಾಮ ಬಾಬು ಯಾನೆ ಸಂಜಯ್ ಕುಮಾರ್, ಕೃಷ್ಣ, ಪರಮೇಶ್, ಶಿವು, ಬಸವರಾಜ್, ಸತ್ಯ ಎಂಬುವರು ಅಡ್ಡಕಟ್ಟಿ, ಜಾತಿ ನಿಂದನೆ ಮಾಡಿ ಕೋರ್ಟ್ ನಲ್ಲಿ ನಮ್ಮ ವಿರುದ್ಧ ಸಾಕ್ಷಿ ಹೇಳಲು ಬಂದರೆ ಜೀವ ಸಹಿತ ಬಿಡೊದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.ಹಲ್ಲೆಗೊಳಗಾದ ವೆಂಕಟೇಶ್, ಮತ್ತು ಸತ್ಯನಾರಾಯಣ ಅವರ ಗೋಶಾಲೆ
ವೆಂಕಟೇಶ್ ಸತ್ಯನಾರಾಯಣ ರಾಜು ಯಾನೆ ಮೊಟ್ಟೆ ಸತೀಶ್ ಅವರು ಯರಗನಾಳ್ ನಮಗ್ರಾಮದಲ್ಲಿರುವ ಗೋಶಾಲೆಗೆ ವರ್ಷಕ್ಕೆ ಎರಡು ಬಾರಿ ಮೇವು ತಂದು ಹಾಕುತ್ತಾರೆ. ಜ.21 ರಂದು ಮೇವು ತರುವಾಗ ಈ 6 ಜನ ಅಡ್ಡಕಟ್ಟಿ ವೆಂಕಟೇಶ್ ವಿರುದ್ಧ ಮುಗಿಬಿದ್ದಿದ್ದಾರೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರಿಂದ ಸಾಕ್ಷಿ ನಾಶಕ್ಕೆಯತ್ನಿಸಿರುವ ಪ್ರಕರಣ ದಾಖಲಾಗಿದೆ.