ಮಾಜಿ ಕಾರ್ಪರೇಟರ್ ಪ್ರಭು ವಿರುದ್ಧ ಅಟ್ರಾಸಿಟಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲು



ಸುದ್ದಿಲೈವ್/ಶಿವಮೊಗ್ಗ

ಮಾಜಿ ಕಾರ್ಪರೇಟರ್ ಪ್ರಭಾಕರ್ ಯಾನೆ ಪ್ರಭು ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ನಿನ್ನೆ ಪೌರಕಾರ್ಮಿಕನಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಪೌರಕಾರ್ಮಿಕ ಮೂರ್ತಿ ಅವರಿಗೆ ಪ್ರಭು ಪ್ರತಿದಿನ ಮನೆಗೆ ಹೋಗುವುದು ನನಗೆ ತಿಳಿಸಿ ಹೋಗಬೇಕು. ಕೆಲಸಕ್ಕೆ ಬಂದಾಗಲೂ ನನಗೆ ತಿಳಿಸಬೇಕು. ರಜೆ ಹೋಗುವುದನ್ನ ನನಗೆ ತಿಳಿಸಬೇಕು ಎಂದು ಕಿರಿಕಿರಿ ಮಾಡುತ್ತಿದ್ದರು ಎಂದು ದೂರಲಾಗಿದೆ. ಸಂಜೆ 7-30 ರಿಂದ 8 ಗಂಟೆಗೆ ಮೂರ್ತಿ ಮನೆಯಲ್ಲಿದ್ದರೆ ಕರೆ ಮಾಡಿ ನನಗೆ ಹೇಳದೆ ಮನೆಗೆ ಹೋಗಿದ್ದೇಕೆ ಎಂದು  ಪ್ರಭು ಅವಮಾನಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಮೊನ್ನೆ ಬೆಳಿಗ್ಗೆ 6 ಗಂಟೆಗೆ ಕೋಟೆ ಚಂಡಿಕಾ ಪರಮೇಶ್ವರಿ ದೇವಾಲಯದ ಬಳಿ ನಿಂತಿದ್ದ ಮೂರ್ತಿಗೆ ಪ್ರಭು 'ನೀನು ನಿನ್ನೆ ದಿನ ಯಾರನ್ನ ಕೇಳಿ ರಜೆ ಹೋಗಿದ್ದೆ.‌ ನೀನು ಮೇಸ್ತ್ರಿ ಕೆಲಸಕ್ಕೆ ಲಾಯಕ್ಕಿಲ್ಲ. ಮೇಸ್ತ್ರಿ ಕೆಲಸದಿಂದ ತೆಗೆಸುತ್ತೇನೆ ಎಂದು ಹೆಲ್ತ್ ಇನ್ ಸ್ಪೆಕ್ಟರ್ ಅಮೋಘ್ ಗೆ ಕರೆಮಾಡಿ ಪ್ರಭು ಮೂರ್ತಿಯನ್ನ‌ಕೆಲಸದಿಂದ ತೆಗೆಯುವಂತೆ ಹೇಳಿದ್ದಾನೆ‌. ಅಮೋಘ್ ಸಹ ಪ್ರಭುರಾಜ್ ಗೆ ಕರೆಮಾಡಿ ಕೆಲಸದಿಂದ ತೆಗೆಯಲು ತಿಳಿಸಿದ್ದಾರೆ. 

ಪ್ರಭು ಅಲ್ಲಿಂದ ಹೋಗುವಾಗ ನಿಮ್ಮ‌ಜಾತಿಯವರು ಕಸ ಬಾಚಲಿಕ್ಕೆ ಮಾತ್ರ ಲಾಯಕ್ಕು ಎಂದು ನಿಂದಿಸಿ ಸರ್ಕಾರಿ ಕೆಲಸದಲ್ಲಿದ್ದ ಮೂರ್ತಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಇದರಿಂದ ಮನನೊಂದ ಮೂರ್ತಿ ಬಿ.ಹೆಚ್ ರಸ್ತೆಯಲ್ಲಿರುವ ಗಣೇಶ್ ಪ್ರಸಾದ್ ಹೋಟೆಲ್ ಬಳಿಯಿರುವ ಔಷಧದ ಅಂಗಡಿಯಲ್ಲಿ ಹುಳಕ್ಕೆ ಔಷಧ ಹೊಡೆಯುವ ಬಾಟೆಲ್ ಖರೀದಿಸಿ ಸೈನ್ಸ್ ಮೈದಾನದ ಮರದ ಬಳಿ ವಿಡಿಯೋ ಮಾಡಿ ಬಿಆರ್ ಪಿ ಕಡೆ ಹೋಗಿದ್ದಾರೆ. 

ಬಿಆರ್ ಪಿಗೆ ಹೋಗುವ ಮೊದಲು ವಿಡಿಯೋವನ್ನ ಮಾಜಿ ಪಾಲಿಕೆ ಸದಸ್ಯ ಪ್ರಭು ಮತ್ತು ಹೆಲ್ತ್ ಇನ್ಸ್ ಸ್ಪೆಕ್ಟರ್ ಪ್ರಭುರಾಜ್ ಗೆ ಕಳುಹಿಸಿದ್ದಾರೆ. ನಂತರ ಪಾಲಿಕೆ ಪೌರನೌಕರರ ಸಂಘದ ಅಧ್ಯಕ್ಷ ಗೋವಿಂದರಿಗೆ ಪ್ರಭುರಾಜ್ ವಿಷಯ ತಿಳಿಸಿದ್ದು, ಗೋವಿಂದರವರು ಮೂರ್ತಿಯ ಮನವೊಲಿಸಿ ವಾಪಾಸ್ ಕರೆದುಕೊಂಡು ಬಂದಿದ್ದಾರೆ. ಹೀಗೆ ಮೂರ್ತಿಯವರ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಸುಖಾಂತ್ಯಗೊಂಡಿತ್ತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close