ಚಲುವಾದಿ ನಾರಾಯಣ ಸ್ವಾಮಿ ಹಠಾವ್ ಪ್ರತಿಭಟನೆಯ ಎಚ್ಚರಿಕೆ

 


ಸುದ್ದಿಲೈವ್/ಶಿವಮೊಗ್ಗ

ಗುತ್ತಿಗೆದಾರ ಸಚಿನ್ ಪಂಚನಾಳ್ ಆತ್ಮಹತ್ಯೆ ವಿಚಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಕಾರಣ ಎಂದು ಬಹಳ ಜೆಪಿ ನಾಯಕರು ಹೇಳುತ್ತಿರುವುದು ಸತ್ಯಕ್ಕೆ ದೂರವೆಂದು  ಅಭಿಮಾನಿ ಬಳಗದ ಅಧ್ಯಕ್ಷ  ವಿನೋದ್ ವಿ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಚಲವಾದಿ ನಾರಾಯಣ ಸ್ವಾಮಿ ರಾಜಕೀಯ ಅಸ್ಥಿತ್ವ ಕಾಣದ ದಿನಗಳಲ್ಲಿ ಖರ್ಗೆ ಅವರೆ ಕಾರಣ ಅವರ ವಿರುದ್ಧ ಬೇರೆ ಪಕ್ಷದಲ್ಲಿದ್ದು ಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ದಲಿತರ ವಿರುದ್ಧ ದಲಿತರನ್ನೇ ಎತ್ತಿಕಟ್ಟಿ ಖರ್ಗೆ ವಿರುದ್ಧ ಷಡ್ಯಂತರ ನಡೆಸಯುತ್ತಿದೆ ಎಂದರು. 

ಒಂದು ವೇಳೆ ನಾಳೆ ಕಲ್ಬುರ್ಗಿಯಲ್ಲಿ ಪ್ರತಿಭಟನೆ ನಡೆಸಿದರೆ ನಾವು ಸಹ ಚಲುವಾದಿ ನಾರಾಯಣ ಸ್ವಾಮಿ ವಿರುದ್ಧ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು. ಪ್ರಾಥಮಿಕ ವರದಿಯಲ್ಲಿ ಸಚಿವರ ಹೆಸರೆ ಇಲ್ಲ. ಹೆಸರಿಲ್ಲದೆ ಪ್ರಿಯಾಂಕ್ ಖರ್ಗೆ ಯಾಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಚಲುವಾದಿ ನಾರಾಯಣ ಸ್ವಾಮಿ ಹಠಾವೋ ಪ್ರತಿಭಟನೆ ನಡೆಸಿದರೂ ಬಡೆಸಲಾಗುವುದು ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close