ಸುದ್ದಿಲೈವ್/ಹೊಳೆಹೊನ್ನೂರು
ಶಿವಮೊಗ್ಗದಲ್ಲಿ ಪೇಪರ್ ಉಂಡೆ ಗ್ಯಾಂಗ್ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿದೆ. ಕಳೆದ ವರ್ಷ ಬಹುತೇಕ ನಿಲ್ ಆಗಿದ್ದ ಪೇಪರ್ ಉಂಡೆ ಗ್ಯಾಂಗ್ ಈ ವರ್ಷದ ಆರಂಭದಲ್ಲೇ ಆಕ್ಟಿವ್ ಆಗಿದೆ.
2022-23 ರ ಸಾಲಿನಲ್ಲಿ ಶಿವಮೊಗ್ಗ ಗ್ರಾಮಾಂತರ ಮತ್ತು ನಗರದಲ್ಲಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಈ ಪೇಪರ್ ಉಂಡೆ ಗ್ಯಾಂಗ್ ವಿರುದ್ಧ 2025 ರಲ್ಲಿ ಆರಂಭದಲ್ಲೇ ಪ್ರಕರಣ ದಾಖಲಾಗಿದೆ.
ಗ್ರಹಪಯೋಗಿ ವಸ್ತುಗಳನ್ನು ಕೊಂಡುಕೊಳ್ಳಲು ತನ್ನ ಗಂಡನೊಂದಿಗೆ ನಿನ್ನೆ ಮಧ್ಯಾಹ್ನ 02-00 ಗಂಟೆಗೆ ಮಹಿಳೆಯೊಬ್ಬರು ಹೊಳೆಹೊನ್ನೂರು ಪೇಟೆ ಬೀದಿಗೆ ತೆರಳಿ ವಾಪಾಸ್ ಬರುವಾಗ ಪ್ರತ್ಯಾಕ್ಷವಾದ ಇಬ್ಬರು ಅಪರಿಚಿತರು ನಾವುಗಳು ಪೊಲೀಸರು ಎಂದಿದ್ದಾರೆ.
ನಿನ್ನೆ ದಿನ ಈ ಬೀದಿಯಲ್ಲಿ ಹೆಂಗಸರಿಗೆ ಚಾಕು ತೋರಿಸಿ, ಸರಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ನೀವು ಹೀಗೆ ಚಿನ್ನದ ಮಾಂಗಲ್ಯ ಸರ ಹಾಕಿಕೊಂಡು ಹೋದರೆ ನಿಮಗೆ ಅಪಾಯವೆಂದು ಹೇಳಿ ಮಾಂಗಲ್ಯ ಸರ ಬಿಚ್ಚಿಕೊಡಿ ಜೋಪಾನ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ.
ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ಮಾಂಗ್ಯದ ಚೈನ್ ಸರವನ್ನು ಮಹಿಳೆ ಪೊಲೀಸರು ಎಂದು ಪ್ರತ್ಯಕ್ಷರಾದ ಅಪರಿಚಿತರಿಗೆ ಬಿಚ್ಚಿ ಕೊಟ್ಟಿದ್ದು, ಆಗ ಅಪರಿಚಿತರು ಪೇಪರ್ ನಲ್ಲಿ ಹಾಕಿ ಪೇಪರನ್ನು ದುಂಡುಗೆ ಮಾಡಿ ಸೀರೆಯ ಸೆರಗಿಗೆ ಕಟ್ಟಿಕೊಳ್ಳಲು ತಿಳಿಸಿದ್ದಾರೆ.
ಮಹಿಳೆ ಮನೆಗೆ ಹೋಗಿ ನೋಡಿದಾಗ ಪೇಪರ್ ನಲ್ಲಿದ್ದಿದ್ದು ಮಾಂಗಲ್ಯ ಸರದ ಬದಲು ಕಲ್ಲುಗಳಿದ್ದು, ಸುಮಾರು ಎರಡು ಲಕ್ಷದ ರೂ. ಮೌಲ್ಯದ ಸರ ಕಳುವಾಗಿರುವುದಾಗಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.