ಸುದ್ದಿಲೈವ್/ಶಿವಮೊಗ್ಗ
ನಗರದ ಸಹ್ಯಾದ್ರಿ ಕಾಲೇಜಿನ ಎದುರು ಸ್ಥಾಪಿತಗೊಂಡಿರುವ ದೂರದರ್ಶನದ ಟಿವಿ ಟವರ್ ನಲ್ಲಿ ಕೆನೆಡಾದಿಂದ ತರಲಾಗಿರುವ 10 ಕಿಲೋ ವ್ಯಾಟ್ಸ್ ಸಾಮರ್ಥದ ಟ್ರಾನ್ಸ್ ಫಾರಂ ಉದ್ಘಾಟನೆ ಕಾರ್ಯಕ್ರಮ ನಡೆದಿದೆ.
ಕಾರ್ಯಕ್ರಮವನ್ನ ಕೇಂದ್ರದ ಕೇಂದ್ರ ರಾಜ್ಯ ಖಾತೆ ಮಾಹಿತಿ ಮತ್ತು ಪ್ರಸಾರ ಭಾರತಿ ಸಚಿವ ಡಾ. ಎಲ್ ಮುರುಗನ್ ಉದ್ಘಾಟಿಸಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಕೆಲ ಗುಡ್ಡಗಾಡಿನಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ರೇಡಿಯೋ ಕೇಳುವ ಪರಿಸ್ಥಿತಿ ಇಂದೂ ಸಹ ಇದೆ.
ಕಷ್ಟದ ಕಾಲದಲ್ಲಿ ರೇಡಿಯೋ ಪ್ರಸಾರ ಭಾರತಿಯಲ್ಲಿ ಉತ್ತಮ ಸೇವೆ ನೀಡಿದೆ. ಬಿಬಿಸಿ ಮಾದರಿಯಲ್ಲಿ ಬಾಂಬೆ ಮತ್ತು ಕಲ್ಕತ್ತದಿಂದ ಬಾನುಲಿ ಪ್ರಸಾರ ಮಾಡಲಾಯಿತು. ನಂತರ ಆಕಾಶವಾಣಿ ಮತ್ತು ದೂರದರ್ಶನ್ ಬೆಳದು ಬಂದಿದೆ ಎಂದರು.
10 ಕೋಟಿ ಬೆಲೆಬಾಳುವ ಟ್ರಾನ್ಸ್ ಫಾರಂ ನ್ನ ಮೂರು ತಿಂಗಳ ಹಿಂದೆ ಕೆನೆಡಾದಿಂದ ಆರ್ಡರ್ ಮಾಡಲಾಗಿತ್ತು. ಇಂದು ಶಿವಮೊಗ್ಗಕ್ಜೆ ಬಂದಿದೆ. ಆಕಾಶವಾಣಿಯಲ್ಲಿ ಎಫ್ ಎಂ ಆಗಿ ಪರಿವರ್ತನೆ ಆಗುತ್ತಿದೆ. 1 ಕಿಲೋ ಸಾಮರ್ಥ್ಯದ ರೇಡಿಯೋ ಟ್ರಾನ್ಸ್ ಫಾರ್ಮರ್ 10 ಕಿಲೋವ್ಯಾಟ್ ಗೆ ಏರಿಸಲಾಗಿದೆ.
ಯಾವುದೇ ಸಾಧನೆಯಿಲ್ಲದೆ ಮೊಬೈಲ್ ನಲ್ಲಿಯೇ ರೇಡಿಯೋ ಕೇಳುವ ವ್ಯವಸ್ಥೆ ನಿರ್ಮಾಣವಾಗಿದೆ ಎಂದರು.ಕೇಂದ್ರ ಸಚಿವ ಮುರುಗನ್ ಮಾತನಾಡಿ, ಸಂಸದರನ್ನ ಹೊಗಳಿದ್ದಾರೆ. ತಮ್ಮ ಜೀವನವನ್ನ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಸ್ಟ್ಯೂಡಿಯೋ ಬೇಕಾಗಿದೆ ಎಂದಾಗ ಅವರ ಬೇಡಿಕೆಯನ್ನ ಈಡೇರಿಸಲಾಗಿದೆ. ಶೀಘ್ರದಲ್ಲಿಯೇ ಈ ಟ್ರಾನ್ಸ್ ಫಾರಂ ಕೆಲಸ ಆರಂಭಿಸಲಿದೆ ಎಂದರು.
ಡಿಡಿ ಚಂದನವನ್ನ ತಂತ್ರಜ್ಞಾನದಲ್ಲಿ ಅಪ್ ಗ್ರೇಡ್ ಮಾಡಲಿದ್ದೇವೆ.ಮೂಲಸೌಕರ್ಯಕ್ಜೆ ಪ್ರಧಾನಿ ಒತ್ತು ನೀಡುತ್ತಿದ್ದು, ಪ್ರಸಾರ ಭಾರತಿಯ ಮೂಲಸೌಕಾರ್ಯಕ್ಕೆ ರಾಜ್ಯಕ್ಕೆ 2000 ಕೋಟಿ ವೆಚ್ಚ ಮಾಡಲಾಗುತ್ತಿದೆ . ಉಡುಪಿ, ರಾಣೇಬೆನ್ಬೂರು ಕೋಲಾರ, ಶಿವಮೊಗ್ಗದಲ್ಲಿ ಪ್ರಸಾರ. ಭಾರತಿ ಮೂಲಸೌಕರ್ಯವನ್ನ ಅಭಿವರದ್ದಿ ಪಡಿಸಲಿದೆ ಎಂದರು.
ಆಕಾಶವಾಣಿ ಎಂದರೆ ಸರ್ಕಾರದ ಮತ್ತು ನಮ್ಮ ಸ್ಥಳೀಯ ಸಂಸ್ಕೃತಿಯನ್ನ ಸಾರ್ವಜನಿಕರಿಗೆ ತಲುಪುವ ಕಾರ್ಯ ಮಾಡುತ್ತಿದೆ. ತಾಂತ್ರಿಕವಾಗಿ ಅಪ್ ಗ್ರೇಡ್ ಮಾಡಲಾಗುತ್ತಿದ್ದು ಮೊಬೈಲ್ ನಲ್ಲಿಯೇ ರೇಡಿಯೊ ಕೇಳಲು ಅವಕಾಶ ನೀಡಲಾಗುತ್ತಿದೆ.