ರಸ್ತೆ ಅಪಘಾತದ ಕುರಿತು ಕೇಂದ್ರ ಸಚಿವರ ಮಹತ್ವದ ಘೋಷಣೆ

Union Road Transport and Highways Minister Nitin Gadkari announced a new plan on road accidents.  Minister Gadkari made these announcements after a meeting with Transport Ministers of States and Union Territories


SUDDILIVE||NewDelhi

ರಸ್ತೆ ಅಪಘಾತ ಕುರಿತು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೊಸ ಯೋಜನೆಯನ್ನ (new plan) ಘೋಷಿಸಿದ್ದಾರೆ.  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಸಚಿವರ ಜೊತೆಗಿನ ಸಭೆಯ ಬಳಿಕ ಸಚಿವ ಗಡ್ಕರಿ ಈ ಘೋಷಣೆಗಳನ್ನು ಮಾಡಿದ್ದಾರೆ.

ಗಾಯಗೊಂಡವರಿಗೆ 'ನಗದು ರಹಿತ ಚಿಕಿತ್ಸೆ'ಯೋಜನೆ (cashless treatment), ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮೃತಪಟ್ಟವರಿಗೆ 2 ಲಕ್ಷ ರೂ. ಪರಿಹಾರ, ಶಾಲಾ ಬಸ್‌ ಮತ್ತು ಆಟೋಗಳಿಗೂ ನಿಯಮ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ 7 ದಿನಗಳ ಕಾಲ ₹1.5 ಲಕ್ಷದವರೆಗೆ ನಗದು ರಹಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಅಪಘಾತ ಸಂಭವಿಸಿದ 24 ಗಂಟೆಗಳೊಳಗಾಗಿ ಪೊಲೀಸರು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಿದಲ್ಲಿ  ಎಂದಿದ್ದಾರೆ.

'ಅಪಘಾತ ಸಂಭವಿಸಿದ 24 ಗಂಟೆಗಳೊಳಗೆ ಗಾಯಾಳುಗಳ ಚಿಕಿತ್ಸೆಗೆ ನಾವು ನಗದು ರಹಿತ ಚಿಕಿತ್ಸೆಯ ಹೊಸ ಯೋಜನೆ ಆರಂಭಿಸಿದ್ದೇವೆ. ಪೊಲೀಸರಿಂದ ಮಾಹಿತಿ ಬಂದ ಕೂಡಲೇ ₹1.6 ಲಕ್ಷದವರೆಗೆ ನಾವು 7 ದಿನಗಳ ಚಿಕಿತ್ಸೆಗೆ ಹಣ ಒದಗಿಸಲಿದ್ದೇವೆ. ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮೃತಪಟ್ಟವರ ಕುಟುಂಬಕ್ಕೂ ತಲಾ ₹2 ಲಕ್ಷ ಪರಿಹಾರ ನೀಡುತ್ತೇವೆ' ಎಂದು ಗಡ್ಕರಿ ಹೇಳಿದ್ದಾರೆ.

'ರಸ್ತೆ ಸುರಕ್ಷತೆಯು ಸರ್ಕಾರದ ಅತ್ಯುನ್ನತ ಆದ್ಯತೆಯಾಗಿದೆ. 2024ರಲ್ಲಿ 1.84 ಲಕ್ಷ ಮಂದಿ ಜೀವ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ಅಂಕಿ ಅಂಶ ಉಲ್ಲೇಖಿಸಿದ ಅವರು, 30,000 ಮಂದಿ ಹೆಲ್ಕೆಟ್ ಧರಿಸದೇ ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾಗಿವವರಲ್ಲಿ ಶೇ 66ರಷ್ಟು ಮಂದಿ 18ರಿಂದ 34 ವರ್ಷ ವಯಸ್ಸಿನವರು' ಎಂದರು.

ಶಾಲೆ ಮತ್ತು ಕಾಲೇಜುಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ 10,000 ಮಕ್ಕಳು ಮೃತಪಟ್ಟಿದ್ದಾರೆ ಎಂದು ಗಡ್ಕರಿ ಹೇಳಿದರು. ಶಾಲಾ ಬಸ್‌ ಮತ್ತು ಆಟೋಗಳಿಗೂ ನಿಯಮ ರೂಪಿಸಲಾಗಿದೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close