ಸುದ್ದಿಲೈವ್/ರಿಪ್ಪನ್‌ಪೇಟೆ
ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕ ಉದ್ದೇಶಕ್ಕಾಗಿ ನಿರ್ಮಿಸಿದ ರಸ್ತೆಯನ್ನು ಅಕ್ರಮಿಸಿ ಮಣ್ಣಿನ(Mudd) ತಡೆಗೋಡೆ ನಿರ್ಮಿಸಿ ಸಾರ್ವಜನಿಕರಿಗೆ ತೊಂದರೆ ನೀಡುವುದರ ಜೊತೆಗೆ ಪ್ರಶ್ನಿಸಲು ತೆರಳಿದ ಗ್ರಾಮಸ್ಥರ ಮೇಲೆ ಹಲ್ಲೆಗೆ ಯತ್ನಿಸಿರುವವರ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳುವಂತೆ ಗ್ರಾಮಸ್ಥರು ಪಟ್ಟಣದ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಳೂರು ಗ್ರಾಮ ಪಂಚಾಯತ್‍ನ ಕಾಳೇಶ್ವರ ಗ್ರಾಮದಲ್ಲಿ ನಡೆದಿದೆ.
ಕಾಳೇಶ್ವರ ಗ್ರಾಮದಲ್ಲಿ ಸುಮಾರು 9 ಕ್ಕೂ ಅಧಿಕ ಕುಟುಂಬಗಳು ಜೀವನ ನಡೆಸುತ್ತಿದೆ. ಇಲ್ಲಿನ ನಿವಾಸಿಗಳಿಗೆ ತಮ್ಮ ಮನೆಗಳಿಗೆ ತೆರಳಲು ಗ್ರಾಮ ಪಂಚಾಯತ್ ನ ಮಣ್ಣು ರಸ್ತೆ ಸಂಪರ್ಕವಿದ್ದು, ಈ ರಸ್ತೆಯನ್ನೇ ಅನೇಕ ವರ್ಷಗಳಿಂದ ಸಂಪರ್ಕ ರಸ್ತೆಯಾಗಿ ನಿವಾಸಿಗಳು ಉಪಯೋಗಿಸುತ್ತಿದ್ದಾರೆ. ಅಲ್ಲದೆ ಈ ರಸ್ತೆಯ ಕಾಮಗಾರಿಗಾಗಿಅNREG ಯೋಜನೆಯಡಿ 2018ನೇ ಸಾಲಿನಲ್ಲಿ ಸುಮಾರು 97000 ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಲಾಗಿತ್ತು.
ಪ್ರಸ್ತುತ ಈ ರಸ್ತೆಯನ್ನು ಜ25 ರಂದು ಕಾಳೇಶ್ವರ ಗ್ರಾಮದ ವ್ಯಕ್ತಿಗಳಾದ ಮೀನಾಕ್ಷಪ್ಪ ಹಾಗೂ ಕುಟುಂಬಸ್ಥರು ಏಕಾಏಕಿ ಅಕ್ರಮವಾಗಿ ಸರ್ಕಾರಿ ಸ್ಥಳದಲ್ಲಿ ಹಾದು ಹೋಗಿರುವ ಗ್ರಾಮಪಂಚಾಯತ್ ನ ಅನುದಾನಿತ ರಸ್ತೆಯಲ್ಲಿ ಟಿಪ್ಪರ್ ಮೂಲಕ ಅಲ್ಲಲ್ಲಿ ಅಕ್ರಮವಾಗಿ ತಂದ ಮಣ್ಣನ್ನು ಗುಡ್ಡೆ ಹಾಕುವ ಮೂಲಕ ರಸ್ತೆಯನ್ನು ಸಂಪೂರ್ಣ ಮುಚ್ಚಿದ್ದು. ಅಲ್ಲದೆ ಸರ್ಕಾರಿ ಸ್ಥಳವನ್ನು ಅಕ್ರಮವಾಗಿ ಭೂ ಸ್ವಾಧೀನ ಮಾಡಿಕೊಂಡು ಈ ರಸ್ತೆಯಲ್ಲಿ ತಿರುಗಾಡದಂತೆ ಮಾಡಿದ್ದಾರೆ ಈ ಬಗ್ಗೆ ವಿಚಾರಿಸಲು ಹೋದ ನಮ್ಮ ಮೇಲೆ ದೊಣ್ಣೆ ಹಾಗೂ ರಾಡ್ ನಿಂದ ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.