ಸುದ್ದಿಲೈವ್/ಭದ್ರಾವತಿ
ತಾಲೂಕಿನ ಹುಣಸೇಕಟ್ಟೆ ಗ್ರಾಮಪಂಚಾಯಿತಿಯ ತಮ್ಮಡಿಹಳ್ಳಿಯಲ್ಲಿರುವ ಆಶ್ರಯ ಬಡಾವಣೆಯಲ್ಲಿ ರಾತ್ರೋರಾತ್ರಿ ನ್ಯೂ ಇಂಡಿಯನ್ ಚರ್ಚ್ ಆಫ್ ಗಾಡ್ ಯೇಸು ಪ್ರಾರ್ಥನಾ ಮಂದಿರ ಆರಂಭಿಸಲಾಗಿದ್ದು ಇವರು ಹಕ್ಕು ಪತ್ರ ಕಾನೂನನ್ನ ಉಲ್ಲಂಘಿಸಿರುವುದಾಗಿ ಆರೋಪಿಸಿ ತಮ್ಮಡಿಹಳ್ಳಿ ಗ್ರಾಮಸ್ಥರು ಗ್ರಾಪಂ ಎದುರು ದಿಡೀರ್ ಪ್ರತಿಭಟನೆ ನಡೆಸಿದರು.
ಆಶ್ರಯ ಯೋಜನೆಯ ಸೈಟ್ ನಂ.18ನ್ನ ಪೊನ್ನುಸ್ವಾಮಿ ಎಂಬುವರಿಗೆ ಹಂಚಲಾಗಿತ್ತು. ಈ ನಿವೇಶನವನ್ನ ಅವರ ಕುಟುಂಬ ಕೇರಳದ ಕೊಟ್ಟಾಯಂ ಪರವಾಗಿ ಮೈಸೂರಿನ ನಿರ್ದೇಶಕ ವಿನೋದ್ ಚಾಕೋರಿಗೆ 2017 ರಲ್ಲಿ ಮಾರಾಟ ಮಾಡಲಾಗಿದೆ.
ಈ ಆಶ್ರಯ ಬಡಾವಣೆಯ ಸೈಟ್ ನಂಬರ್ 18 ರಲ್ಲಿ ರಾತ್ರೋರಾತ್ರಿ ನ್ಯೂ ಇಂಡಿಯನ್ ಚರ್ಚ್ ಆಫ್ ಗಾಡ್ ಯೇಸು ಪ್ರಾರ್ಥನಾ ಮಂದಿರದ ನಾಮಫಲಕಹಾಕಿ ಪ್ರತಿ ಭಾನುವಾರ ಪ್ರಾರ್ಥಬೆ ಆರಂಭಿಸಲಾಯಿತು. ನಂತರ ಗ್ರಾಮಸ್ಥರನ್ನ ಕರೆಯಿಸಿ ಪ್ರಾರ್ಥನೆ ಮಾಡಿಸಲು ಆರಂಭಿಸಲಾಯಿತು ಎಂದು ಗ್ರಾಮಸ್ಥರು ದೂರಿನಲ್ಲಿ ದೂರಲಾಗಿದೆ.
2022 ರಲ್ಲಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ತೀರ್ಮಾನ ನಡೆಸಿ ತೆರವುಗೊಳಿಸುವ ತೀರ್ಮಾನ ಮಾಡಲಾಗಿದ್ದರೂ ತೆರವುಗೊಳಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಜಿಪಂ ಸಿಇಒಗೆ ಮನವಿ ನೀಡಲಾಗಿದ್ದು ಈಗ ಪಿಡಿಒ 10 ದಿನಗಳಲ್ಲಿ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿರುವುದು ಅಚ್ಚರಿ ನೀಡಿದ್ದಾರೆ.