ಮನೆಗಳ್ಳರ ಬಂಧನ



ಸುದ್ದಿಲೈವ್/ಹೊಳೆಹೊನ್ನೂರು

2023 ನೇ ಇಸವಿಯಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನ ಪ್ರಕರಣವನ್ನ‌ ಪೊಲೀಸರು ಬೇಧಿಸಿದ್ದು, ಮೂವರು ಆರೋಪಿಗಳನ್ನ ಬಂಧಿಸಲಾಗಿದೆ.  ಸುಮಾರು 26,50,000/- ರೂ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಅಭರಣಗಳನ್ನ  ಸೀಜ್ ಮಾಡಲಾಗಿದೆ. 

ಅರಬಿಳಚಿ ಗ್ರಾಮದ ನಿವಾಸಿ ಹೆಚ್ ಎಮ್ ಜಯಣ್ಣ  ದಿನಾಂಕ:-11.05.2023 ರಂದು ಮನೆಗೆ ಬೀಗ ಹಾಕಿಕೊಂಡು ತಿರುಪತಿ ದೇವಸ್ಥಾನಕ್ಕೆ ಹೋಗಿ, ವಾಪಾಸ್ಸು ಬಂದು ಬೆಂಗಳೂರಿನಲ್ಲಿರುವ ಮಗನ ಮನೆಯಲ್ಲಿರುವಾಗ ಅರೆಬಿಳಚಿ ಗ್ರಾಮದಲ್ಲಿನ ಮನೆಯಲ್ಲಿ ಕಳ್ಳತನವಾಗಿತ್ತು.  

ಮನೆಯ ಮುಂಬಾಗಿಲನ್ನು ಒಡೆದು ಮನೆಯಲ್ಲಿದ್ದ ಕಬ್ಬಿಣದ ಲಾಕರ್ ಸಮೇತ ಒಟ್ಟು ಸುಮಾರು -599 ಗ್ರಾಂ ಬಂಗಾರದ ಆಭರಣಗಳು ಅಂದಾಜು ಬೆಲೆ 1700000/- ಹಾಗೂ ಸುಮಾರು 3 ಕೆಜಿ 80 ಗ್ರಾಂ ಬೆಳ್ಳಿಯ ಆಭರಣಗಳು, ಅಂದಾಜು ಬೆಲೆ 150100/- ಹಾಗೂ ಒಂದು ಲಕ್ಷ ನಗದು ಹಣ. ಸೇರಿ ಒಟ್ಟು ಅಂದಾಜು ಮೊತ್ತ ಸುಮಾರು- 1980100/- (ಹತ್ತೋಂಬತ್ತು ಲಕ್ಷದ ಎಂಬತ್ತು ಸಾವಿರದ ನೂರು ರೂಪಾಯಿ) ಕಳುವಾಗಿತ್ತು. ಠಾಣೆಯಲ್ಲಿ ದೂರು ದಾಖಲಾಗಿತ್ತು.  

ಎಸ್ಪಿ ಮಿಥುನ್ ಕುಮಾರ. ಅಡಿಷನಲ್ ಎಸ್ಪಿ ಎಸ್.ಭೂಮರೆಡ್ಡಿ, ಎ.ಜಿ ಕಾರಿಯಪ್ಪ ರವರ ಮಾರ್ಗದರ್ಶನದಲ್ಲಿ ಹಾಗೂ ಭದ್ರಾವತಿ ಡಿವೈಎಸ್ಪಿ  ನಾಗರಾಜ್ ಕೆ ಅರ್ ರವರ ಮೇಲ್ವಿಚಾರಣೆಯಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯ ಪಿಐ ಲಕ್ಷ್ಮೀಪತಿ ಆರ್.ಎಲ್ ರವರ ನೇತೃತ್ವದಲ್ಲಿ ಪಿಎಸ್‌ಐರವರುಗಳಾದ ರಮೇಶ್', ಕೃಷ್ಣನಾಯ್ಕ ಹಾಗೂ ಸಿಬ್ಬಂದಿಗಳಾದ ಹೆಚ್‌ಸಿ 71 ಅಣ್ಣಪ್ಪ, ಹೆಚ್‌ಸಿ 462 ಪ್ರಕಾಶ ನಾಯ್ಕ ಹೆಚ್ ಸಿ 312 ಮಂಜುನಾಥ, ಹೆಚ್‌ಸಿ 72 ಪ್ರಸನ್ನ, ಪಿಸಿ 1125 ವಿಶ್ವನಾಥ. ರವರುಗಳನ್ನು ಒಳಗೊಂಡ ತಂಡವನ್ನ ರಚಿಸಿ ಆರೋಪಿಗಳನ್ನ ಪತ್ತೆ ಮಾಡಲಾಗಿದೆ.  

ಡಿ28, 2024 ರಂದು ಭದ್ರಾವತಿಯ ತಿಮ್ಲಾಪುರ ಕೊರಚರ ಹಟ್ಟಿ ಗ್ರಾಮದ ನಿವಾಸಿ ಎಂ.ದರ್ಶನ್ ತಂದೆ ಚಂದ್ರಪ್ಪ (21) ರವರನ್ನು ಬಂಧಿಸಿ ಪೊಲೀಸ್ ವಶಕ್ಕೆ ಪಡೆದು ಇನ್ನೂ ಇಬ್ಬರೂ ಅರೋಪಿಗಳಾದ ಎ2- ಧನಂಜಯ ತಂದೆ ಚಂದ್ರಪ್ಪ 24  ಎ3- ರವಿ ತಂದೆ ಶಿವಲಿಂಗಪ್ಪ ಇವರನ್ನ‌ಪತ್ತೆ ಮಾಡಲಾಯಿತು.   ಪ್ರಕರಣದಲ್ಲಿ ಒಟ್ಟು 350 ಗ್ರಾಂ ಬಂಗಾರ ಹಾಗೂ 2 ಕೆ.ಜಿ 500ಗ್ರಾಂ ತೂಕದ ಬೆಳ್ಳಿಯ ಅಭರಣಗಳನ್ನು ಅಂದಾಜು ಮೌಲ್ಯ 26,50,000/- ರೂ ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close