Incidents of cow udder harvesting, tail cutting and mutilation are happening in the district, there are piles of cow waste on the banks of Bhadra river in Bhadravati. |
ಸುದ್ದಿಲೈವ್/ಭದ್ರಾವತಿ
ಗೋವಿನ ಕೆಚ್ಚಲನ್ನ ಕೊಯ್ಯುವ, ಬಾಲವನ್ನ ಕತ್ತರಿಸಿ ವಿಕೃತ ಮೆರೆಯುತ್ತಿದ್ದ ಘಟನೆಗಳು ಜಿಲ್ಲೆಯ ಹಿರಗಡೆ ನಡೆಯುತ್ತಿದ್ದರೆ, ಭದ್ರಾವತಿಯ ಭದ್ರ ನದಿಯ ದಡದಲ್ಲಿ ರಾಶಿಗಟ್ಟಲೆ ಗೋತ್ಯಾಜ್ಯಗಳು ಪತ್ತೆಯಾಗಿದೆ.
ಗೋವಿನ ತಲೆಬುರುಡೆ, ಹಲ್ಲುಗಳನ್ನ ದಡದ ಮೇಲೆ ಟಾರ್ಪಲ್ ಕಟ್ಟಿ ಬಿಸಾಕಿರುವುದು ಕಂಡು ಬಂದಿದೆ. ಈ ವಿಡಿಯೋಗಳನ್ನ ಹಿಂದೂ ಸಂಘಟನೆಗಳು ಬಿಡುಗಡೆ ಮಾಡಿದ್ದು, ಈ ರೀತಿ ರಾಶಿ ರಾಶಿ ಗೋತ್ಯಾಜ್ಯ ಪತ್ತೆಯಾಗಿರುವುದಕ್ಕೆ ಗೋಹತ್ಯೆ ಕಾನೂನು ರಾಜ್ಯದಲ್ಲಿ ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿವೆ.
ಒಂದೆಡೆ ನದಿಯ ಒಡಲನ್ನ ಶುದ್ಧೀಕರಣ ನಡೆಸಬೇಕು ಎಂದು ಹರಸಾಹಸ ಪಡುತ್ತಿದ್ದರೆ. ಇನ್ನೊಂದೆಡೆ ಈ ರೀತಿಯ ಗೋತ್ಯಾಜ್ಯಗಳು ಮನುಕುಲವನ್ನೇ ತಲೆತಗ್ಗಿಸುವಂತೆ ಮಾಡಿದೆ. ಈ ಘಟನೆ ಸೀಗೆಬಾಗಿಯ ಭದ್ರ ನದಿ ದಡದಲ್ಲಿ ಪತ್ತೆಯಾಗಿರುವುದಾಗಿ ಹಿಂದೂ ಸಂಘಟನೆ ತಿಳಿಸಿದೆ.
Tags:
Cow