Theft of gold jewelery while attending a wedding ceremony
ಸುದ್ದಿಲೈವ್/ಶಿವಮೊಗ್ಗ
ಮದುವೆ (wedding) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಚಿನ್ನಾಭರಣ(jewellery) ಕಳುವು (theft) ಪ್ರಕರಣಗಳು ಮುಂದುವರೆದಿದೆ. ಒಂದಿಷ್ಟು ದಿನಗಳಲ್ಲಿ ಬ್ರೇಕ್ ಬಿದ್ದಿದ್ದ ಪ್ರಕರಣ ಮತ್ತೆ ಮುಂದು ವರೆದಿದೆ. ಈ ಪ್ರಕರಣ ನವೆಂಬರ್ 2024 ರಂದು ನಡೆದಿದ್ದು ತಡವಾಗಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಈಡಿಗರ ಭವನದಲ್ಲಿ ನಡೆದಿದ್ದ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಕುಟುಂಬಕ್ಕೆ ಶಾಕ್ ಆಗಿವೆ. ಹೊಸಮನೆಯಲ್ಲಿ ಮನೆಯ ಎದುರುಗಡೆ ಮನೆಯವರ ಮದುವೆ ಕಾರ್ಯಕ್ರಮಕ್ಕೆ ಭಾಗಿಯಾದ ವೇಳೆ ಸುಮಾರು 9 ಗ್ರಾಂ 100 ಮೀಲಿ ತೂಕದ ಸುಮಾರು 55,000/ -ರೂ ಬೆಲೆಬಾಳುವ ಡಾಲರ್ ಸಹಿತ ಬಂಗಾರದ ಸರ ಕಳುವಾಗಿದೆ.
2024 ರಂದು ನವೆಂಬರ್ 25 ರಂದು ಈಡಿಗರ ಸಮುದಾಯ ಭವನದಲ್ಲಿ ಮದುವೆ ಇದ್ದುದರಿಂದ ಭಾಗಿಯಾಗಿದ್ದ ಕುಟುಂಬ ಕಾರ್ಯಕ್ರಮ ಮುಗಿಸಿ ಸುಮಾರು ಮದ್ಯಾಹ್ನ 02-10 ಗಂಟೆಗೆ ಊಟಕ್ಕೆ ಹೋಗಿದ್ದರು, ಆ ಸಮಯದಲ್ಲಿ ಶ್ರೀಧರ್ ಎಂಬುವರ ಮಗನ ಕೊರಳಿನಲ್ಲಿದ್ದ ಬಂಗಾರದ ಸರ ಕಳುವಾಗಿತ್ತು.
ತಕ್ಷಣ ಮದುವೆ ಮಂಟಪ, ಸಮುದಾಯ ಭವನದ ಎಲ್ಲಾ ಕಡೆ ಹುಡುಕಿದರೂ ಬಂಗಾರದ ಸರ ಸಿಕ್ಕಿರುವುದಿಲ್ಲ. ಶ್ರೀಧರ್ ಅವರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಆರ್ಯವೇದ ವಿಭಾಗದ ಕರ್ತವ್ಯ ನಿರ್ವಹಿಸುತ್ತಿದ್ದು, ಕೆಲಸದ ಮೇಲೆ ಹೊರಗಡೆ ಹೋಗಿದ್ದರಿಂದ ತಡವಾಗಿ ದೂರು ದಾಖಲಾಗಿದೆ.