Nut is called Supari in Hindi. I am looking after a small boy from Sufarian. Union Agriculture Minister Shivraj Singh Chouhan has established that people worship it in every house.
ಸುದ್ದಿಲೈವ್/ಶಿವಮೊಗ್ಗ
ಅಡಿಕೆಗೆ ಹಿಂದಿಯಲ್ಲಿ ಸುಪಾರಿ ಎನ್ನುತ್ತಾರೆ. ಸುಫಾರಿಯನ್ನ ಸಣ್ಣ ಹುಡುಗನಿಂದ ನೋಡಿಕೊಂಡು ಬರುತ್ತಿದ್ದೇನೆ. ಜನ ಪ್ರತಿಮನೆಯಲ್ಲಿ ಅದನ್ನ ಪೂಜಿಸುತ್ತಾರೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು.
ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ, ಆಪ್ಸಕೋಸ್ ಮತ್ತು ತೋಟಗಾರ್ಸ್ ಅವರ ಸಹಯೋಗದಲ್ಲಿ ಸಾಗರದ ಸಂತೆ ಮೈದಾನದಲ್ಲಿ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸುಫಾರಿಗೆ ತೊಂದರೆ ಬಂದಿದೆ. ಆದರೆ ಅದನ್ನ ನಿಭಾಯಿಸುವುದು ನಮ್ಮ ಜವಬ್ದಾರಿಯಾಗಿದೆ. ಇಂದು ಬೆಂಗಳೂರಿನಲ್ಲಿ ಮೂರು ಸಚಿವರ ಜೊತೆ ಸಭೆ ನಡೆಸಿದ್ದೇನೆ. ಕರ್ನಾಟಕದಲ್ಲಿ ಮನೆಯಿಲ್ಲದವರಿಗೆ ಮನೆ ಕೊಡುವುದು ನಮ್ಮ ಮೋದಿ ಸರ್ಕಾರ ಬದ್ದವಾಗಿದೆ. ಕೃಷಿ, ಕೈಗಾರಿಕೆಗೆ ಮೋದಿ ಸರ್ಕಾರ ರಾಜ್ಯಕ್ಕೆ ಕೋಟಿಗಟ್ಟಲೆ ಹಣ ನೀಡಿದೆ. ಉತ್ಪಾದನ ಹೆಚ್ಚಿಸುವುದು. ಬೆಳೆಗೆ ಉತ್ತಮ ಬೆಲೆ, ನಷ್ಟವಾದರೆ ಪರಿಹಾರ, ಮೊದಲಾದ ಗುರಿಗಳನ್ನ ಮೋದಿ ಸರ್ಕಾರ ಹೊಂದಿದೆ. ಕೃಷಿಕರ ಕೈ ಬಲಪಡಿಸಲು ಮೋದಿ ಸರ್ಕಾರ ಬದ್ದವಾಗಿದೆ. ಅಡಿಕೆ ಬೆಳೆಯಲ್ಲಿ ಕರ್ನಾಟಕ ಅಗ್ರಸ್ತಾನ ಪಡೆದಿದೆ ಎಂದರು.
ದೇಶದಲ್ಲಿ 60 ಲಕ್ಷ ಸುಪಾರಿ ಬೆಳೆಗಾರರಿಗಿದ್ದಾರೆ. ಇದಕ್ಕೆ ಸೂಕ್ತ ದರ ಕೊಡಿಸಲು ನಾವು ಬದ್ದವಾಗಿದೆ. ಕನಿಷ್ಠ ಬೆಲೆಯಲ್ಲಿ ಅಡಿಕೆ ಸಾಗಾಣಿಕೆಯ ಗುರಿ ಹೊಂದಲಾಗಿದೆ. ಅಡಿಕೆಯನ್ನ ಆಮದು ಮಾಡಿಕೊಂಡರೆ ಅದಕ್ಕೆ 100 ರಷ್ಟು ತೆರಿಗೆ ವಿಧಿಸಲಾಗುವುದು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಗತ್ಯ ನೆರವು ನೀಡುಲಾಗುತ್ತಿದೆ. ಅದಕ್ಕಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಿಸಿದಂತೆ 6 ಅಂಶಗಳತ್ತ ಗಮನ ಹರಿಸಿದೆ. ರೈತ ಉತ್ಪಾದಕ ಸಂಘಗಳು ಬಲಿಷ್ಠವಾಗಬೇಕಿದೆ. ಅಡಿಕೆ ಬೆಳೆ ಕರ್ನಾಟಕದ ಪ್ರಮುಖ ಬೆಳೆಯಾಗಿದೆ. ಅಡಿಕೆ ಬೆಳೆಗಾರರಿಗೆ ಸರಿಯಾದ ಬೆಲೆ ಸಿಗಬೇಕಿದೆ. ಅದಕ್ಕಾಗಿ ಅಡಿಕೆ ಆಮದು ದರವನ್ನು 250 ರೂಪಾಯಿಯಿಂದ 300 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದರು.
ಅಧಿಕ ಮಳೆಯಿಂದ ಬೆಳೆಗಾರರಿಗೆ ನಷ್ಟವುಂಟಾಗಿದೆ. ಯಾವುದಕ್ಕೆ ಸಂಶೋಧನೆ ಬೇಕು ಮಾಡುವೆ. ಸಂಶೋಧನ ಆರಂಭಿಸುವ ಬಗ್ಗೆ ಗುಣಾತ್ಮಕ ಕ್ರಮಕೈಗೊಳ್ಳುವೆ. ಅಡಿಕೆ ಹಾನಿಕಾರಕ ಎಂಬುದು ಆಶ್ಚರ್ಯ ಮೂಡಿಸಿದೆ ಅನೇಕ ವರ್ಷಗಳಿಂದ ಜನ ಅಡಿಕೆ ಸ್ವೀಕರಿಸುತ್ತಿದ್ದಾರೆ. ಹಾಗಾಗಿ IIsc ಗೆ ಈಗಾಗಲೇ ವರದಿ ನೀಡಲು ಸೂಚಿಸಿರುವೆ ಎಂದರು.
ಅಡಿಕೆಯನ್ನ ಮಾತ್ರ ಸಂಶೋಧನ ಮಾಡಲು ಸೂಚಿಸಲಾಗಿದೆ. ಎಲ್ಲಾ ಬೆಳೆಗಳ ಎಂಎಸ್ ಪಿ ದರ ನಿಗದಿಪಡಿಸಲಾಗುವುದು. ಎಂಎಸ್ ಪಿನಿಗದಿ ನನ್ನಇಲಾಖೆಯಲ್ಲಿ ಇಲ್ಲ ಆದರೂ ಎಂಎಸ್ ಪಿ ಕುರಿತು ಖಂಡಿತ ಕ್ರಮಕೈಗೊಳ್ಳುವೆ. ಬಡಮುಕ್ತ ಹಳ್ಳಿ ನಿರ್ಮಿಸುವುದು ನಮ್ಮಮುಖ್ಯ ಗುರಿಯಾಗಿದೆ. ಇದನ್ನಮುಂದಿನ ದಿನಗಳಲ್ಲಿ ಮಾತನಾಡುವೆ ಎಂದರು.
ವೇದಿಕೆ ಮೇಲೆ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರನ್ನ ನೆನಪಿಸಿಕೊಂಡ ಕೇಂದ್ರ ಸಚಿವ ಮೊದಲ ಬಾರಿಗೆ ಬಿಎಸ್ ವೈ ಕೃಷಿ ಬಜೆಟ್ ಆರಂಭಿಸಿದವರು. ನನ್ನ ಸಚಿವಾಲಯ ಕರ್ನಾಟಕದವರಿಗೆ ಸದಾ ತೆರೆದಿರುತ್ತದೆ ಎಂದು ತಿಳಿಸಿದರು.
ಅಗತ್ಯಬಿದ್ದರೆ ಇದನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಕಳ್ಳ ಮಾರ್ಗದ ಮೂಲಕ ಅಡಕೆ ತಡೆಯಲು ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಅಡಕೆಗೆ ತಗಲುವ ರೋಗಗಳ ಪತ್ತೆಗೆ ಅಗತ್ಯ ಸಂಶೋಧನೆಗೆ ಹೆಚ್ಚಿನ ಗಮನ ಹರಿಸಲಾಗುವುದು. ರೋಗ ತಡೆಯಲು ನೀಡಲಾಗಿರುವ ಸಲಹೆ-ಸೂಚನೆ ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ತನ್ನ ಪಾಲಿನ ನೆರವು ನೀಡಲಾಗುವುದು. ಅಡಕೆ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ಡಬ್ಲ್ಯೂಎಚ್ಒ ವರದಿ ಕುರಿತು ಇನ್ನಷ್ಟು ಸಂಶೋಧನೆಯ ಅಗತ್ಯವಿದೆ ಎಂದರು.
ಇದರ ಬಗ್ಗೆ ಸಂಶೋಧನೆ ಮಾಡಿ ಸೂಕ್ತ ವರದಿ ನೀಡುವಂತೆ ವಿವಿಧ 16 ಸಂಸ್ಥೆಗಳಿಗೆ ಸೂಚಿಸಲಾಗಿದೆ. ಇದರ ವರದಿಯಿಂದ ಅಡಕೆ ಬಗ್ಗೆ ಇರುವ ಮಿಥ್ಯೆಯನ್ನು ನಿವಾರಿಸಬಹುದಾಗಿದೆ. ತೊಗರಿ, ಉದ್ದು ಸೇರಿದಂತೆ ದ್ವಿದಳ ಧಾನ್ಯಗಳನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಲಾಗುವುದು. ವಿಕಸಿತ ಭಾರತ ಮೋದಿ ಅವರ ಕನಸಾಗಿದೆ. ಹಾಗೆಯೇ ಗ್ರಾಮೀಣ ಭಾರತ ಬಲಿಷ್ಠವಾಗಬೇಕು ಎಂಬುದಾಗಿದೆ. ಈ ಮೂಲಕ ಬಲಿಷ್ಠ ಭಾರತ ನಿರ್ಮಾಣವಾಗಬೇಕಿದೆ ಎಂದು ತಿಳಿಸಿದರು.