ಸುದ್ದಿಲೈವ್/ಶಿವಮೊಗ್ಗ
ರೈತರ ಬೆಳೆ ನಾಶ ಮಾಡುತ್ತಿರುವ ಆನೆಗಳನ್ನ ಸ್ಥಳಾಂತರಗೊಳಿಸಬೇಕೆಂದು ಆಗ್ರಹಿಸಿ ಸಾಗರ ಶಿವಮೊಗ್ಗ ಹಾಗೂ ಹೊಸನಗರ ತಾಲೂಕಿನ ರೈತರ ಮತ್ತು ಮಾಜಿ ಸಚಿವ ಹರತಾಳ ಹಾಲಪ್ಪನವರ ನೇತೃತ್ವದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ರೈತರ ಹೋರಾಟಕ್ಕೆ ಜಯವಾಗಲಿ, ಕಾಡು ಪ್ರಾಣಿಗಳಿಂದರ ರೈತರನ್ನ ರಕ್ಷಿಸಿ, ನಿರ್ಲಜ್ಯ ರಾಜ್ಯ ಸರ್ಕಾರಕ್ಕೆ ದಿಕ್ಕಾರ, ನಿರ್ಲಕ್ಷ ಅರಣ್ಯ ಸಚಿವರ ವಿರುದ್ಧ ಮತ್ತು ಜಿಲ್ಲಾ ಉಸ್ತಿವಾರಿ ಸಚಿವರ ವಿರುದ್ಧ ಭರ್ಜರಿ ಘೋಷಣೆ ಕೂಗಲಾಯಿತು.
ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಪ್ರತಿನಿತ್ಯ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡುತ್ತಿವೆ. ಹೊಸನಗರ ತಾಲೂಕಿನ ಬಸವಾಪುರ ರೈತ ತಿಮ್ಮಪ್ಪನ ಪ್ರಾಣವನ್ನ ಆನೆಗಳು ಬಲಿಪಡೆದಿವೆ. ಪ್ರತಿದಿನ ರೈತರು ಭಯದಿಂದ ಬದುಕುವಂತಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತಿಮ್ಮಪ್ಪನವರ ಪರಿಹಾರ ನೀಡುವಲ್ಲಿಯೂ ಶಾಸಕರೊಬ್ವರು ಟೂರ್ ಹೋಗಿರುವುದರಿಂದ ಎರಡು ತಿಂಗಳ ವಿಳಂಬ ನೀತಿ ಅನುಸರಿಸಲಾಯಿತು. ಕಣ್ಣಿದ್ದರೂ ಕಾಣದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ತಕ್ಷಣವೇ ಮಲೆನಾಡ ಭಾಗದ ಆನೆಗಳನ್ನ ಸ್ಥಳಾಂತರಿಸಬೇಕು. ಕಾಡು ಪ್ರಾಣಿಗಳ ಬಗ್ಗೆ ಸ್ಪಷ್ಟನಿರ್ಧಾರ ಕೈಗೊಳ್ಳುವ ವರೆಗೂ ಅನಿರ್ಧಿಷ್ಠಾವಧಿ ಪ್ರತಿಭಟನೆ ನಡೆಸುವುದಾಗಿ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮಾಜಿ ಶಾಸಕ ಮನನ ರಾದ ಕೆ.ಬಿ.ಅಶೋಕ್ ನಾಯ್ಕ್, ಸ್ವಾಮಿರಾವ್, ದತ್ತಾತ್ರಿ, ರಾಜು, ಹರಿಕೃಷ್ಣ, ದಿವಾಕರ್ ಬೆಳ್ಳೂರು, ಹುನುಗೋಡು ರತ್ನಾಕರ್ ಮೊದಲಾದವರು ಉಪಸ್ಥಿತ