ಸುದ್ದಿಲೈವ್/ಶಿವಮೊಗ್ಗ
ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಪೊನ್ನುರಾಜ್ ಮತ್ತು ಉಸ್ತುವಾರಿ ರಾಧಾ ಮೋಹನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷರ ಬಗ್ಗೆ 80 ರಷ್ಟು ಜನ ಉತ್ತಮ ಕೆಲಸ ಮಾಡುತ್ತಿರುವುದಾಗಿ ಹೊಗಳಿರುವುದಾಗಿ ಬಿಜೆಇ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ತಿಳಿಸಿದರು.
ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಮಾಧ್ಯಮದವರೂ ಸಹ ಅರ್ಥ ಮಾಡಿಕೊಳ್ಳಬೇಕು ಯಾರೋ ಬೆರಳೆಣಿಕೆಯಷ್ಟು ಜನ ನನ್ನನ್ನ ವಿರೋಧಿಸುತ್ತಿದ್ದಾರೆ. ಅದೂ ಸಹ ನನ್ನನ್ನ ದ್ವೇಷಿಸುತ್ತಿಲ್ಲ. ರಾಜ್ಯಾಧ್ಯಕ್ಷ ಸ್ಥಾನವನ್ನ ವಿರೋಧಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ 55 ಜನ ಸಂಸದರು, ಶಾಸಕರು ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು. ಶೇಖಡ 80 ರಷ್ಟು ಜನಪ್ರತಿನಿಧಿಗಳು ರಾಜ್ಯಾಧ್ಯಕ್ಷರ ಕಾರ್ಯವನ್ನ ಹೊಗಳಿದ್ದಾರೆ. ಎಲ್ಲಾ ಕಾರ್ಯಕರ್ತರು ನನ್ನ ಕಾರ್ಯವೈಖರಿಯನ್ನ ಮೆಚ್ಚಿದ್ದಾರೆ. ಕೆಲವರು ನನ್ನ ರಾಜ್ಯಾಧ್ಯಕ್ಷ ಸ್ಥಾನವನ್ನ ವಿರೋಧಿಸಿದ್ದಾರೆ ವಿನಃ ನನ್ನನ್ನ ಅಲ್ಲ. ಮತ್ತೊಮ್ಮೆ ಬಿವೈ ವಿಜಯೇಂದ್ರ ಅವರನ್ನೇ ಮುಂದುವರಿಸಿ ಅಂದಿದ್ದಾರೆ ಎಂದರು.
ಮಾಧ್ಯಮದಲ್ಲಿ ವರದಿ ಆದಂತೆ ಲೋಕಾಯುಕ್ತ ಸಂಸ್ಥೆ ಕ್ಲೀನ್ ಚಿಟ್ ಕೊಟ್ರೆ ಬಿಜೆಪಿಯಿಂದ ಹೋರಾಟ ನಡೆಸುವುದಾಗಿ ಎಚ್ಚರಿಸಿದ ರಾಜ್ಯಾಧ್ಯಕ್ಷರು, ಈ ಹಿಂದೆ ತನಿಖೆ ಸರಿಯಾಗಿಲ್ಲ ಅಂತ ಆರೋಪ ಮಾಡಿದ್ವಿ, ಕ್ಲೀನ್ ಚಿಟ್ ಕೊಟ್ಟರೆ ನಮ್ಮ ಆರೋಪ ಸತ್ಯ ಆದಂತೆ ಆಗುತ್ತದೆ ಎಂದರು.
ರಾಜಕೀಯ ಒತ್ತಡಕ್ಕೆ ಅಧಿಕಾರಿಗಳು ಮಣಿದಿದ್ದಾರೆ ಅಂತ ಇದು ನಿರೂಪಣೆಯಾಗಲಿದೆ. ಇಡಿ ಅಧಿಕಾರಿಗಳು ಪ್ರೇಸ್ ನೋಟ್ ಬಿಡುಗಡೆ ಮಾಡಿದ್ದಾರೆ ಮೂಡಾ ಹಗರಣ ದಲ್ಲಿ ಎಷ್ಟು ಹಗರಣ ಆಗಿದೆ ಅಂತ ತಿಳಿಸಿದ್ದಾರೆ. ಹೈಕೋರ್ಟ್ ಕೂಡ ಹಗರಣ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಮಾಹಿತಿ ಸಂಗ್ರಹಿಸಿದೆ.ರಾಜ್ಯಪಾಲರನ್ನು ನಿಂಧಿಸುವ ಕೆಲಸ ರಾಜ್ಯ ಸರ್ಕಾರ ಮಾಡಿದೆ ಎಂದರು.
ಇದರ ನಡುವೆ ಹೈ ಕೋರ್ಟ ನಲ್ಲಿ ತಿರ್ಪು ಬರುವ ಮುನ್ನವೇ ಲೋಕಾಯುಕ್ತ ವರದಿ ನೀಡಿದೆ.ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಕ್ಲೀನ್ ಚಿಟ್ ಕೊಡುವ ಕೆಲಸ ಆಗಿದೆ. ವರದಿ ಸತ್ಯಾ ಆದರೆ ಇದರ ವಿರುದ್ಧ ವಾಗಿ ನಾವು ಹೋರಾಟ ಮಾಡ್ತೇವೆ. ತನಿಖೆ ನಡೆಯುವಾಗ ಆಧಾರ ರಹಿತ ವರದಿ ನೀಡಲು ಸಾಧ್ಯವಿಲ್ಲ. ಆತುರ ಆತುರವಾಗಿ ಕ್ಲೀನ್ ಚೀಟ್ ಪಡೆಯುವ ಕೆಲಸ ಸಿಎಂ ಮಾಡಿದ್ದಾರೆ.
ಅಸಮಾಧಾನ ಇರೋದು ಕೆಲವರಿಗೆ ಮಾತ್ರ, ಎಲ್ಲಾ ಗೊಂದಲಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ. ಬೆಳವಣಿಗೆ ಗಳು ನನಗೂ ಬೇಸರ ತರಿಸಿವೆ, ಈ ವಿಚಾರ ಸಂತೋಷ ತಂದಿಲ್ಲ, ಕಾರ್ಯಕರ್ತರಿಗೂ ಬೇಸರ ಇದೆ. ನನ್ನ ಅಧ್ಯಕ್ಷಗಿರಿಯ ಬಗ್ಗೆ ಕಾರ್ಯಕರ್ತರಿಗೂ ಸಮಾಧಾನ ಇದೆ. ಬಣ ಬೆಳವಣಿಗೆಗಳ ಬಗ್ಗೆ ಕಾರ್ಯಕರ್ತರಿಗೆ ಅಸಮಾಧಾನ ಇದೆ. ಎಲ್ಲಾ ವಿಚಾರಗಳು ಸರಿ ಆಗಬೇಕಿದೆ ಎಂದರು.
ಇದರ ಬಗ್ಗೆ ಗಮನ ಹರಿಸುವ ಅವಶ್ಯಕತೆ ಇದೆ. ಯಡಿಯೂರಪ್ಪನವರ ಬಗ್ಗೆ ಅಪಮಾನ ಆಗುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದರಿಂದ ಕಾರ್ಯಕರ್ತರು ಸಹ ನೊಂದಿದ್ದಾರೆ. ಈ ವಿಚಾರವಾಗಿ ನಾನು ಹೈ ಕಮಾಂಡ್ ಜೊತೆ ಮಾತಾಡಿದ್ದೇನೆ ಎಂದರು.
ಶ್ರೀರಾಮಲು ಚೆರ್ಚೆ ವಿಚಾರ
ಶ್ರೀರಾಮಲು ವಿಚಾರ ಕೋರ್ ಕಮಿಟಿ ಸಭೆಯಲ್ಲಿಚರ್ಚೆ ಆಗಿವೆ ಶ್ರೀರಾಮಲು ಬಗ್ಗೆ ನನಗೆ ಗೌರವ ಇದೆ.ಎಲ್ಲರೂ ಒಗ್ಗಟ್ಟು ಆಗಬೇಕು ಅಂತಾ ರಾಧಾ ಮೋಹನ್ ದಾಸ್ ತಿಳಿಸಿದ್ದಾರೆ. ರಾಜ್ಯದಲ್ಲಿ ಬಹುಮತದೊಂದೊಂದಿಗೆ ಪಕ್ಷ ಅಧಿಕಾರಕ್ಕೆ ತರಲು ಚರ್ಚೆ ಆಗಿದೆ. ಎಲ್ಲಾ ಅಂಶಗಳನ್ನು ಹೊರಗಡೆ ಹೆಳಲ್ಲ.
ಶ್ರೀರಾಮಲುಗೆ ವಿನಂತಿ ಮಾಡುತ್ತೇನೆ ಅಪಾರ್ಥಕ್ಕೆ ಅವಕಾಶ ಮಾಡಿಕೊಡಬಾರದು ಎಲ್ಲರೂ ಒಟ್ಟಾಗಿ ಹೋಗಬೇಕಿದೆ ಎಂದು ತಿಳಿಸಿದರು.