ಸುದ್ದಿಲೈವ್/ಶಿವಮೊಗ್ಗ
ವೈದ್ಯರೊಬ್ಬರನ್ನ ಮದುವೆಯಾಗಿದ್ದ ಗೃಹಿಣಿಯೊಬ್ಬಳನ್ನ ಗರ್ಭಿಣಿ ಎಂಬುನ್ನೂ ಲೆಕ್ಕಿಸದೆ ಥಳಿಸಿ ಕೊಲೆಗೆ ಯತ್ನಿಸಿರುವ ಘಟನೆ ಶಿವಮೊಗ್ಗ ದೊಡ್ಡ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನ ನಿವಾಸಿ ಡಾ.ದೀಪಕ್ ಎಂಬುವರನ್ನ ಶಿವಮೊಗ್ಗದ 33 ವರ್ಷದ ಮಹಿಳೆ 2019 ರಲ್ಲಿ ಮದುವೆಯಾಗಿದ್ದರು. ಇವರಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ಇತ್ತೀಚೆಗೆ ದೀಪಕ್ ಮದ್ಯ ವ್ಯಸನಿಯಾಗಿದ್ದು, ರಾತ್ರಿಯಿಡಿ ಹೆಂಡತಿಯೊಂದಿಗೆ ಜಗಳ ಆಡಲು ಶುರುವಾಗಿದೆ.
ಇದರ ನಡುವೆ ವೈದ್ಯರಿಗೆ ಪರ ಸ್ತ್ರೀಯಳ ಸಂಗಡವೂ ಶುರುವಾಗಿತ್ತು. ಇದನ್ನ ಪ್ರಶ್ನಿಸಿದ ಗೃಹಿಣಿಗೆ ಥಳಿಸಿದ್ದಾರೆ. ಗೃಹಣಿ ಗರ್ಭಿಣಿ ಎಂಬುದನ್ನೂ ಲೆಕ್ಕಿಸದೆ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.
ಶಿವಮೊಗ್ಗದ ಅಶೋಕ ನಗರದ ನಿವಾಸಿಯಾಗಿದ್ದ ಇವರ ತಾಳಿ ಕಸಿದುಕೊಂಡು ಮೊಬೈಲ್ ನ್ನ ಚರಂಡಿಗೆ ಬಿಸಾಕಿರುವ ವೈದ್ಯ ಅನುಮಾನ ಪಡ್ತೀಯ ಎಂದು ಆರೋಪಿಸಿ ಚಾಕುವಿನಿಂದ ಕೊಲ್ಲಲು ಯತ್ನಿಸಿರುವುದಾಗಿ ಮಹಿಳೆ ದೂರು ದಾಖಲಿಸಿದ್ದಾರೆ.