ನವಜಾತ ಶಿಶು ಪತ್ತೆ

There is a newborn baby boy outside Shimoga. The baby was rescued by Dhanvantari Ambulance and handed over to the nursery where Megan is.


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಹೊರಭಾಗದಲ್ಲಿ ನವಜಾತ ಗಂಡು ಮಗುವೊಂದು ಪತ್ತೆಯಾಗಿದೆ.  ಧನ್ವಂತರಿ ಅಂಬ್ಯುಲೆನ್ಸ್ ಅವರಿಂದ ಮಗುವನ್ನ ರಕ್ಷಿಸಿ ಮೆಗ್ಗಾನ್ ನಲ್ಲಿರುವ ಶಿಶು ಆರೈಕೆ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ. 

ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಶ್ರೀ ರಾಮಪುರದ ಫ್ಲೈ ಓವರ್ ಬಳಿಯ ಬೋರ್ ವೆಲ್ ಬಳಿ ನವಜಾತ ಶಿಶು ಪತ್ತೆಯಾಗಿದೆ. ಸ್ಥಳೀಯರು ಸಹಾಯದಿಂದ ಇವಿಎಂ 112 ಗೆ ಮಾಹಿತಿ ಲಭಿಸಿದೆ.  ಧನ್ವಂತರಿ ಅಂಬ್ಯುಲೆನ್ಸ್ ನವರಿಗೆ ವಿಷಯ ಮುಟ್ಟಿಸಿದ್ದಾರೆ. 

ಧನ್ವಂತರಿ ಅಂಬ್ಯಲೆನ್ಸ್ ನವರ ಮೂಲಕ ಮೆಗ್ಗಾನ್ ಹೆರಿಗೆ ಮತ್ತು ಮಕ್ಕಳ ವಿಭಾಗದಲ್ಲಿರುವ ಶಿಶು ಆರೈಕೆ ನಡೆಯಲಿದೆ. ಮಗುವಿನ ಜನ್ಮ ಮುಚ್ಚಿಡಲು ಗಂಡು ನವಜಾತ ಶಿಶುವನ್ನ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಶಿವಮೊಗ್ಗ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಸಾಧ್ಯತೆಯಿದೆ. 

ಮಲ್ಲಿಕಮ್ಮರಿಂದ ಮೊದಲ ರಕ್ಷಣೆ

Child was secured by Mallikamma

ಶ್ರೀರಾಮ್ ಪುರ ಫ್ಲೈ ಓವರ್ ಬಳಿ ಪ್ಲಾಸ್ಟಿಕ್ ಚೀಲದಲ್ಲಿದ್ದ ನವಜಾತ ಶಿಶುವನ್ನ ಮಲ್ಲಿಕಮ್ಮ ಎಂಬ ವೃದ್ಧೆಗೆ ಕಾಣಿಸುತ್ತದೆ. ಮಲ್ಲಿಕ್ಕಮ್ಮ ಈ ಮಗುವನ್ನ ಶುಶ್ರುತ ಮಾಡಿ ಸ್ಥಳೀಯರ ಸಹಾಯದಿಂದ 112 ಇವಿಎಂ ಗೆ ಮಾಹಿತಿ ಕಳುಹಿಸಿದ್ದಾರೆ. ನಂತರ ಮಕ್ಕಳ ರಕ್ಷಣ ಸಮಿತಿಯ ಹೆಲ್ಪ್ ಲೈನ್ ಗೆ ಮಾಹಿತಿ ನೀಡಿದ 112 ಸ್ಥಳಕ್ಕೆ ಧಾವಿಸಿದ್ದಾರೆ. ನಂತರ ಧನ್ವಂತರಿ ಆಂಬ್ಯುಲೆನ್ಸ್ ನ ರವಿಯವರ ಮೂಲಕ ಮೆಗ್ಗಾನ್ ಶಿಶುವಿನ ಆರೈಕೆ ಕೇಂದ್ರದಲ್ಲಿ ದಾಖಲಿಸಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close