ಟೆಂಡರ್ ನಲ್ಲಿ ಗೋಲ್ಮಾಲ್ ಆರೋಪ, ಎಲ್ಲಾ ಸರಿಯಿದೆ ಎಂದ್ರು ಅಧಿಕಾರಿಗಳು



ಸುದ್ದಿಲೈವ್/ಶಿವಮೊಗ್ಗ

ಗ್ರಾಮೀಣ ಕೈಗಾರಿಕಾ ಇಲಾಖೆಯ ಟೆಂಡರ್ ನಲ್ಲಿ ಗೋಲ್ಮಾಲ್ ಶಂಕೆ ವ್ಯಕ್ತವಾಗಿದೆ. ತಾರಾತುರಿಯಲ್ಲಿ ಟೆಂಡರ್ ಕರೆದಿರಿವ ಆರೋಪ ಕೇಳಿಬಂದಿದೆ. ಗ್ರಾಮೀಣ ಕರಕುಶಲ ಕರ್ಮಿಗಳಿಗೆ ಕಿಟ್ ಪೂರೈಕೆ ಸಂಬಂಧ ಕರೆದಿರುವ ಟೆಂಡರ್ ನಲ್ಲಿ ಗೋಲ್ಮಾಲ್ ಆಗಿರುವುದಾಗಿ ಆರೊಪ ಕೇಳಿ ಬಂದಿದೆ. 

39 ಲಕ್ಷ ಮೊತ್ತದ ಟೆಂಡರ್ ಕರೆದಿರುವ ಇಲಾಖೆಯು, ಕಿಟ್ ಸ್ಯಾಂಪಲ್ ಗೆ ಸಲ್ಲಿಕೆಯ ಅವಧಿಯನ್ನು ಅವಧಿಯನ್ನು ಟೆಂಡರ್ ಸಲ್ಲಿಕೆಯ ಅವಧಿಗೂ ಮೊದಲೇ ಮುಗಿಸುತ್ತಿರುವುದು ಉದ್ದೇಶಪೂರಕವಾಗಿದೆ ಎಂದು ಆರೋಪ ಮಾಡಲಾಗಿದೆ. ಸಾಲು ಸಾಲು ಸರ್ಕಾರಿ ರಜೆಗಳ ನಡೆವೆಯು ಇಲಾಖೆ ಅಲ್ಪಾವಧಿಯ ಟೆಂಡರ್ ಕರೆಯಲಾಗಿದೆ. 

ಇಲಾಖೆಯ ಅಧಿಕಾರಿಗಳು ಕೆಲ ಗುತ್ತಿಗೆದಾರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಟೆಂಡರ್ ಹಾಕಲು ಅವಕಾಶ ನೀಡುತ್ತಿಲ್ಲ ಎಂದು ಟೆಂಡರ್ ವಂಚಿತರು ಆರೋಪಿಸಿದ್ದಾರೆ. 

ಕಳೆದ ಅನೇಕ ವರ್ಷಗಳಿಂದ ಒಬ್ಬರಿಗೆ ಟೆಂಡರ್ ನೀಡಲಾಗುತ್ತಿದೆ. ಟೆಂಡರ್ ವಂಚಿತರು ಅಧಿಕಾರಿಗಳು ಟೆಂಡರ್ ಗೋಲ್ಮಾಲ್ ನಲ್ಲಿ ಶಾಮೀಲ್ ಆಗಿದ್ದಾರೆ ಎಂದು ಟೆಂಡರ್ ವಂಚಿತರು ಆರೋಪಿಸುತ್ತಿದ್ದಾರೆ.  ಅಧಿಕಾರಿಗಳು ಟೆಂಡರ್ ವಂಚಿತರ ಆರೋಪಗಳನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. 

ನಿಯಮಗಳ ಪ್ರಕಾರವೇ ಈ ಟೆಂಡರ್ ಕರೆದು ಸಾಕಷ್ಟು ಸಮಯ ನೀಡಲಾಗುತ್ತಿದೆ ಎಂದು  ಅಧಿಕಾರಿಗಳು ಹೇಳಿದ್ದಾರೆ. ಅರ್ಹರಿಗೆ ಟೆಂಡರ್ ನಲ್ಲಿ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿರುವ ಅಧಿಕಾರಿಗಳು ಟೆಂಡರ್ ನಲ್ಲಿ ಯಾವುದೇ ಗೋಲ್ಮಾಲ್ ಆಗಿಲ್ಲ ಎಂದು  ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close