ಭದ್ರಾವತಿಯನ್ನ ರಿಪಬ್ಲಿಕ್ ಆಗಲು ಬಿಡೊಲ್ಲ-ಮಧು ಬಂಗಾರಪ್ಪ

Minister Madhu Bangarappa made it clear that Bhadravati will not be allowed to become a republic.


ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿ ರಿಪಬ್ಲಿಕ್ ಆಗಲು ಬಿಡಲ್ಲ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಭದ್ರಾವತಿ ರಿಪಬ್ಲಿಕ್ ಎಂದು ಮನನ ಅಧ್ಯಮದವರು ಕರೆಯಲಿ ಆದರೆ ರಿಪಬ್ಲಿಕ್ ಆಗಲು ಬಿಡೊಲ್ಲ. ಏನೆ ಕಾನೂನು ಬಾಹಿರವಾದರೂ ಸರಿಪಡಿಸಲಾಗುವುದು ಪೊಲೀಸರು ನಿಷ್ಕ್ರಿಯಗೊಳ್ಳಲು ಬಿಡೊಲ್ಲ ಎಂದು ಸ್ಪಷ್ಟಪಡಿಸಿದರು. 

ಭದ್ರಾವತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಾದ ಇಸ್ಪೀಟು, ಮರಳುಗಾರಿಕೆ, ಜೂಜಾಟಕ್ಕೆ ಕಡಿವಾಣ ಬೀಳದೆ ಯಥೇಚ್ಛವಾಗಿ ನಡೆಯುತ್ತಿದ್ದು ಅನುಮಾನಸ್ಪದ ಸಾವು, ಆತ್ಮಹತ್ಯೆ ಮತ್ತು ಮೊನ್ನೆ ನಡೆದ ಕೊಲೆ ಪ್ರಕರಣ ಈ ಎಲ್ಲಾ‌ಕಾನೂನು ಬಾಹಿರ ಚಟುವಟಿಕೆಗಳನ್ನ ಕಡಿವಾಣ ಹಾಕಲು ವಿಫಲವಾಗಿತ್ತು. ಇಂದು  ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಎಲ್ಲ ಕಾನೂನು ಚಟುವಟಿಕೆಗೆ ಬ್ರೇಕ್ ಹಾಕಲಾಗುವುದು ಎಂದರು. 

ಕುಪ್ಪಳ್ಳಿಯಲ್ಲಿ ಕುವೆಂಪು ಪ್ರತಿಷ್ಠಾನವು ಅದ್ದೂರಿ ಮದುವೆಗೆ ಅನುವು ಮಾಡಿಕೊಟ್ಟಿದೆ. ಅದು ಗಮನದಲ್ಲಿ ಇಲ್ಲ. ಇದನ್ನ ವಿಚಾರಿಸುವೆ. ಕ್ರಮ ಜರುಗಿಸಲಾಗುವುದು. ಚಙದ್ರಗುತ್ತಿಯಲ್ಲಿ ಪ್ರಾಧಿಕಾರ ಮತ್ತು ಗುಡವಿಯಲ್ಲಿ ಪ್ರವೋಸೋದ್ಯಮಕ್ಕೆ ಕ್ರಮ ಕೈಗೊಳ್ಳಕಾಗುತ್ತಿದೆ ಎಂದರು. 

ಅಲ್ಲಮಪ್ರಭದ ಜನ್ಮ ಸ್ಥಳ ಮತ್ತು ಅಲ್ಲಮ ಪ್ರಭುಫ್ರೀಡಂ ಪಾರ್ಕ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿವುದು. ಆನೆ ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. 

ಯಡಿಯೂರ್ಪನವರ ಚೋಟಾ ಸಹಿಯನ್ನ ಗಂಭೀರವಾಗಿ ಪರಿಗಣಿಸಲಾಗುವುದು. ಶ್ರೀರಾಮುಲು ಕಾಂಗ್ರೆಸ್ ಗೆ ಬರುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸಚಿವರು  ಯಾರಬೇಕದರೂ ಪಕ್ಷಕ್ಕರ ಬರಬಹುದು ಸಿದ್ದಾಂತವನ್ನ‌ ಒಪ್ಪಿ ಬರಬೇಕು ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close