ಫಾರ್ಚ್ಯೂನರ್ ಕಾರು ಕೊಡಿಸುವುದಾಗಿ ಸರ್ಕಾರಿ ನೌಕರ ಮಹಿಳೆಗೆ ವಂಚನೆ, ಕೇಳಲು ಹೋದ ಮಹಿಳೆಗೆ ಜೀವಬೆದರಿಕೆ

ಸಾಂಧರ್ಭಿಕ ಚಿತ್ರ

Lakhs of Rs. A complaint has been registered at the Doddapet police station in Shimoga about the cheating incident.

ಸುದ್ದಿಲೈವ್/ಶಿವಮೊಗ್ಗ

ಸರ್ಕಾರಿ ಮಹಿಳಾ ನೌಕರರೊಬ್ಬರಿಗೆ ಸೆಕೆಂಡ್ ಹ್ಯಾಂಡ್ ಫಾರ್ಚುನರ್ ಕಾರು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಘಟನೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಶಿವಮೊಗ್ಗದ ಪಿಡಬ್ಲೂಡಿ ನೌಕರಸ್ಥರೊಬ್ಬರು ತಮ್ಮ ಕೆಎ 14 ಎನ್ 9097 ಎಲಾಟ್ರಾ ಕಾರನು ಮಾರಾಟಕ್ಕೆ ಇಟ್ಟಿದ್ದು, ಕಾರನು ಕೊಳ್ಳಲು ಆದಿಲ್, ಫಾಜಿಲ್ ಎಂಬುವರು ಬಂದು ಕಾರನ್ನು ನೋಡಿ 2024 ರ ಸಾಲಿನ ಜುಲೈ ತಿಂಗಳಲ್ಲಿ ಬಂದು 6,00,000/- ರೂಪಾಯಿಗೆ ಮಾತುಕತೆ ನಡೆಸಿ ಕಾರನ್ನು ತೆಗೆದುಕೊಂಡಿದ್ದರು.  

ಮತ್ತು ಫಾರ್ಚ್ಯೂನರ್ ಕಾರನ್ನ 7.30 ಲಕ್ಷಕ್ಕೆ ಕೊಡಿಸುವುದಾಗಿ ಭರವಸೆ ನೀಡಿದ ಬೆನ್ನಲ್ಲೇ ಮಹಿಳೆ 1.50 ಲಕ್ಷರೂ.ನ್ನ ಫಾಜಿಲ್ ಗೆ  ಹಣ ನೀಡಿದ್ದರು.  ಫಾರ್ಚೂನರ್ ಕಾರು ತಂದು ಕೊಡುವುದಾಗಿ ಆಗ್ರಿಮೆಂಟ್ ಕೂಡ ಮಾಡಿಕೊಡಲಾಗಿತ್ತು. ಸುಮಾರು 06 ತಿಂಗಳಿನಿಂದ ಹಣ ಪಡೆದು ಹೋದ ಫಾಜಿಲ್ ನಾಪತ್ತೆಯಾಗಿದ್ದ. 

ಇದುವರೆಗೂ ಕಾರನ್ನಾಗಲಿ ಮತ್ತು ಹಣವನ್ನಾಗಲಿ ಹಾಗೂ ಮಾತುಕತೆ ನಡೆಸಿದಂತೆ ಫಾರ್ಚೂನರ್ ಕಾರನಾಗಲಿ ತಂದು ಕೊಡದೆ ಮೋಸ ಮಾಡಿದ್ದಾರೆ.  ಈ ಬಗ್ಗೆ ಫಾಜಿಲ್ ಮನೆಯ ಹತ್ತಿರ ಕೇಳಲು ಹೋದಾಗ ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ಕಾರು ಆಗಲಿ ನೀಡಿದ ಹಣವಾಗಲಿ ಕೇಳಲು ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುವುದಾಗಿ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.‌

ಹಣ ಪಡೆದು ಹಾಗೂ ಫಾರ್ಚೂನರ್ ಕಾರು ಕೊಡಿಸುವುದಾಗಿ ಭರವಸೆ ನೀಡಿ ಮೋಸ ಮಾಡಿದ ಆದಿಲ್, ಫಾಜಿಲ್ ನವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಹಿಳೆ ದೂರು ನೀಡಿದ್ದಾರೆ.‌


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close