ಸುದ್ದಿಲೈವ್/ಶಿವಮೊಗ್ಗ
ರಾಜ್ಯದಲ್ಲಿ ಕಾಂಗ್ರೆಸ್ ಹಿಂದೂ ವಿರೋಧಿ ಆಳ್ವಿಕೆ ನೀಡಲು ತೀರ್ಮಾನಿಸಿದ್ದಂತೆ ಇದೆ. ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ನಿರ್ಮಿಸುವ ಭರವಸೆ ಇತ್ತು. ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಗೋಶಾಲೆ ನಿರ್ಮಿಸಲು ತೀರ್ಮಾನಿಸಿಲ್ಲ ಎಂದು ಸರ್ಕಾರ ತೀರ್ಮಾನಿಸಿರುವುದು ಹಿಂದೂ ವಿರೋಧಿ ನೀತಿಯ ಮುನ್ನುಡಿ ಎಂದು ಮಾಜಿಸಚಿವ ಈಶ್ವರಪ್ಪ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಶಾಲೆಗಳಿಗೆ ಗೋವುಗಳು ಬರ್ತಾಯಿಲ್ಲ ಎಂಬ ಕಾರಣಕ್ಕೆ ಗೋಶಾಲೆ ನಿರ್ಮಿಸುತ್ತಿಲ್ಲ ಎಂದು ಕಾನೂನು ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದು, ಬೇರೆಯವರಿಗೂ ಗೋಶಾಲೆ ನಿರ್ಮಿಸಲು ಅವಕಾಶ ಇಲ್ಲ ಎಂದಿದ್ದಾರೆ.
ಅನೇಕ ಮದರಸಾಗಳಲ್ಲಿ ಮಕ್ಕಳಿಲ್ಲ. ಅದನ್ನ ಮುಚ್ಚುತ್ತೀರಾ? ಎಂದು ಪ್ರಶ್ನಿಸಿದ ಈಶ್ವರಪ್ಪ, ಹಿಂದೂ ಸಮಾಜವನ್ನ ಕಾಂಗ್ರೆಸ್ ಹಗೂರವಾಗಿ ತೆಗೆದುಕೊಂಡಿದೆ. ಸಚಿವ ಸಂಪುಟದ ತೀರ್ಮಾನ ಹಿಂಪಡೆಯಬೇಕು. ಗೋಶಾಲೆ ನಿರ್ಮಾಣ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಗೋಶಾಲೆ ನಿರ್ಮಾಣ ಕುರಿತು ಮುಖ್ಯಮಂತ್ರಿಗಳು ಗಮನಿಸಬೇಕು. ಇಲ್ಲವಾದಲ್ಲಿ ಅನಾಹುತಗಳು ಆದರೆ ರಾಜ್ಯ ಸರ್ಕಾರವೇಕಾರಣ ಎಂದ ಮಾಜಿ ಡಿಸಿಎಂ ಕರುವಿನ ಮೃತ ದೇಹ ಮತ್ತು ಗೋವಿನ ಮೃತ ದೇಹ ಚಾರ್ಮುಡಿ ಘಾಟಿನಲ್ಲಿ 11 ಗೋಚೀಲದಲ್ಲಿ ಬಿಸಾಡಿರುವುದು ಪತ್ತೆಯಾಗಿರುವುದು ಪತ್ರಿಕೆಯಲ್ಲಿ ವರದಿಯಾಗಿದೆ.
ಈ ಗೋತ್ಯಾಜ್ಯಗಳು ನೇತ್ರಾವತಿ ನದಿಗೆ ಸೇರಲಿದ್ದು, ಧರ್ಮಸ್ಥಳದಲ್ಲಿ ಹಿಂದೂಗಳು ಪವಿತ್ರತೆ ಎಂದು ಸ್ನಾನ ಮಾಡುವುದನ್ನ ಅಪವಿತ್ರಗೊಳಿಸುವ ಹುನ್ನಾರ ಇದಾಗಿದೆ. ಗೋಹತ್ತೆ ನಿಷೇಧ ಕಾಯ್ದೆ ಜಾರಿಗೆ ತಂದರೂ ರಾಜ್ಯ ಸರ್ಕಾರ ಸುಮ್ಮನಿದೆ. ಮುಸ್ಲೀಂರಿಗೆ ಅಪಮಾನವಾಗಿದ್ದರೆ ರಾಜ್ಯ ಸರ್ಕಾರ ಏನು ಮಾಡ್ತಾ ಇತ್ತು ಎಂದು ಪ್ರಶ್ನಿಸಿದರು.
ಇನ್ನೂ ಏನೇನು ಹೆಚ್ಚಾಗಲಿದೆ ಕಾದು ನೋಡುವೆ
ಹಾಗಾಗಿ ಗೋಹತ್ಯೆ ನಿಷೇಧ ಜಾರಿಯಿರುವುದರಿಂದ ಕಾನೂನು ಕ್ರಮ ಕೈಗೊಳ್ಳಬೇಕು. ಕೆಎಸ್ಆರ್ ಟಿಸಿ ಪ್ರಯಾಣದರ ಹೆಚ್ಚಾಗಿದೆ. ಇದರ ಬಗ್ಗೆ ಇನ್ನೂ ಕಾಯುತ್ತೇನೆ. ಏನೇನು ಹೆಚ್ಚಾಗಲಿದೆ ಎಂದು ಕಾದು ನೋಡಬೇಕಿದೆ. ಪ್ರಯಾಣ ದರ15% ಹೆಚ್ಚಿಗೆಯನ್ನ ಹೇಳಲಾಗಿದೆ. ಸಾಲ ಮಾಡ್ಕೊಂಡು ಗ್ಯಾರೆಂಟಿ ತಂದಿದ್ದರ ಪರಿಣಾಮ ಇದಾಗಿದೆ ಎಂದು ದೂರಿದರು.
ದೇವರಿದ್ದಾನೆ
ಸಚಿವ ಪ್ರಿಯಾಂಕ್ ಖರ್ಗೆ ಆತ್ಮೀಯರಿಂದ ಆತ್ಮಹತ್ಯೆಯಾಗಿದೆ. ಸಚಿವರು ನನ್ನ ಹೆಸರು ಡೆತ್ ನೋಟಿನಲ್ಲಿ ಹೆಸರಿಲ್ಲ ಎಂದಿದ್ದಾರೆ. ಬಿಜೆಪಿ ರಾಜೀನಾಮೆಗೆ ಒತ್ತಾಯಿಸಲಾಗಿದೆ. ನನ್ನ ಮೇಲೆ ಆರೋಪ ಬಂದಾಗ ರಾಜೀನಾಮೆ ನೀಡಿದೆ. ನಂತರ ನಿರ್ದೋಷಿ ಎನ್ನಲಾಯಿತು. ನನಗೆ ತೊಂದರೆ ಕೊಟ್ಟವರು ಇವತ್ತು ಅನುಭವಿಸುತ್ತಿದ್ದಾರೆ. ಭಗವಂತ ಇದ್ದಾನೆ ಆತನ ಮೇಲೆ ಬಿಡುವೆ ಎಂದರು.
ನನ್ನನ್ನ ರಾಜಕಾರಣದಿಂದಲೆ ಮುಗಿಸುವ ಹುನ್ನರ ನಡೆಸಲಾಯಿತು. ನಾನು ದೇವರನ್ನನಂಬಿ ಬದುಕುತ್ತಿರುವೆ. ದೇವರು ಇದ್ದಾನೆ ಎಂದು ಯೋಚಿಸಿ ಸಂವಂಧ ಪಟ್ಟವರು ಮುಂದುವರೆಯಲಿ ಎಂದು ಸಲಹೆ ನೀಡಿದರು.