ನಟ ಯಶ್ ಹುಟ್ಟುಹಬ್ಬವನ್ನ ಶಿವಮೊಗ್ಗದ ಅಭಿಮಾನಿಗಳ ತಂಡ ಆಚರಿಸಿದ್ದೇಗೆ?

 

Shimoga's fans also celebrated Yash's birthday in a big way. Fan's released a video today for his birthday and his fans are in awe of it.

ಸುದ್ದಿಲೈವ್/ಶಿವಮೊಗ್ಗ

ನಟ ಯಶ್ ಅವರು ಇಂದು ತಮ್ಮ 39 ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಯಶ್ (Hash) ಅವರು ‘ಟಾಕ್ಸಿಕ್’ ಸಿನಿಮಾದ(cinema) ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಗೋವಾದ ಕಡಲ ಕಿನಾರೆಯಲ್ಲಿ ಪತ್ನಿ ರಾಧಿಕಾ, ಮಕ್ಕಳು ಹಾಗೂ ‘ಟಾಕ್ಸಿಕ್’ ಚಿತ್ರತಂಡದ ಜೊತೆಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.


ಯಶ್ ಹುಟ್ಟುಹಬ್ಬದಂದು ನಡೆದ ಅವಘಡದಲ್ಲಿ ಅವರ ಅಭಿಮಾನಿಗಳು ನಿಧನ ಹೊಂದಿದ್ದರು. ಅದಾದ ಬಳಿಕ ಯಶ್ ಅವರು ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದನ್ನೇ ಅವರು ನಿಲ್ಲಿಸಿದ್ದಾರೆ. ಹುಟ್ಟುಹಬ್ಬದಂದು ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಫ್ಯಾನ್ಸ್ ಗಳಿಗೂ ಉತ್ತಮ ಸಂದೇಶ ರವಾನಿಸಿದ್ದಾರೆ.


ಯಶ್ ಬರ್ತ್ ಡೇ ಗೆ ಶಿವಮೊಗ್ಗದ ಅಭಿಮಾನಿ ಬಳಗವೂ ಸಹ ಭರ್ಜರಿಯಾಗಿ ಆಚರಿಸಿದ್ದಾರೆ. ಯಶ್ ಹುಟ್ಟುಹಬ್ಬಕ್ಕೆ ಇಂದು ವಿಡಿಯೋವೊಂದನ್ನ‌ ಬಿಡುಗಡೆ ಮಾಡಿ ಅಭಿಮಾನಿಗಳು ಅಭಿಮಾನ ಮೆರೆದಿದ್ದಾರೆ.

ದ್ರಾಕ್ಷಿ ಹಣ್ಣುಗಳನ್ನ ಜೋಡಿಸುವ ಮೂಲಕ ಯಶ್‌ರವರ ಭಾವಚಿತ್ರ ಬಿಡಿಸಿದ್ದಾರೆ. ಭಾನುವಾರ ಶಿವಮೊಗ್ಗದ ಫ್ರೀಡಂಪಾರ್ಕ್ ನಲ್ಲಿ ಡ್ರೋಣ್ ಮೂಲಕ ಚಿತ್ರೀಕರಣ ಮಾಡಿ ಹುಟ್ಟು ಹಬ್ಬದಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. 600 ಕೆಜಿ ಬ್ಲಾಕ್ ದ್ರಾಕ್ಷಿ ಮೂಲಕ ಭಾವಚಿತ್ರ ಬಿಡಿಸಲಾಗಿದ್ದು, ಚಿತ್ರೀಕರಣದ ನಂತರವೂ ಯಶ್ ಅಭಿಮಾನಿಗಳು ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಚಿತ್ರೀಕರಣದ ನಂತರ ಯಶ್ ಭಾವ ಚಿತ್ರ ರಚಿಸಲು ಬೇಕಾದ ದ್ರಾಕ್ಷಿ ಹಣ್ಣನ್ನ ಗೋಶಾಲೆಗೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close