ವಿದ್ಯಾನಗರದಲ್ಲಿ ಕುಡಿಯುವ ನೀರಿಗೆ ಆಹಾಕಾರ, ಯಮುನಾ ರಂಗೇಗೌಡರಿಂದ ಆಯುಕ್ತರಿಗೆ ಮನವಿ



ಸುದ್ದಿಲೈವ್/ಶಿವಮೊಗ್ಗ

ನಗರದಲ್ಲಿ ವಿದ್ಯಾನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ 24×7 ಕುಡಿಯುವ ನೀರು  ಸಮರ್ಪಕವಾಗಿ ಹಂಚಿಕೆಯಾಗುತ್ತಿಲ್ಲವೆಂದು ಆರೋಪಿಸಿ ಮಾಜಿ ನಗರ ಸಭೆ ಸದಸ್ಯೆ ಯಮುನಾರಂಗೇಗೌಡರ ನೇತೃತ್ವದಲ್ಲಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. 

ವಾರ್ಡ್ ನಂಬರ್ 14,  ವಿದ್ಯಾನಗರದಲ್ಲಿ, ಸಮರ್ಪಕವಾಗಿ ತಪಾಸಣೆ ನಡೆಸಿ ನೀರು ಬಿಡದ ಕಾರಣ 24×7 ನ ಕುಡಿಯುವ  ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಹಳೆ ಪೈಪ್ ಲೈನ್ ನಲ್ಲೂ ನೀರು ಬಾರದೆ  ಸಮಸ್ಯೆ ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ

ಈ ಬಗ್ಗೆ ಸಮರ್ಪಕವಾಗಿ ತಪಾಸಣೆ ನಡೆಸಿ 24×7 ಅಥವಾ ಹಳೆಯ ಪೈಪ್ ಲೈನ್ ನಲ್ಲಿ ಸಮರ್ಪಕ ನೀರು ಸರಬರಾಜು ಮಾಡಬೇಕು. ವಿದ್ಯಾನಗರದಲ್ಲಿ ಕಳೆದ ನಾಲ್ಕು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆವೆಂದು ಮನವಿಯಲ್ಲಿ ದೂರಲಾಗಿದೆ. ಮನವಿ ನೀಡುವ ಸಂದರ್ಭದಲ್ಲಿ ರಙಗೇಗೌಡರು ಮತ್ತು ಇತರರು ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close