Suddilive|Januvery 3
ಶಿಕಾರಿಪುರ ತಾಲೂಕಿನ ಜನಪ್ರಿಯ ರಾಜಕಾರಣಿ ನಿವೃತ್ತ ಕೆಎಎಸ್ ಅಧಿಕಾರಿ ಕರ್ನಾಟಕ ರಾಜ್ಯ ಉಗ್ರಣಾ ನಿಗಮದ ಮಾಜಿ ಅಧ್ಯಕ್ಷರಾದ ಹೆಚ್. ಟಿ ಬಳೆಗಾರ್ ರವರು (62) ಗುರುವಾರ ರಾತ್ರಿ ಹೃದಯಘಾತದಿಂದ ನಿಧನ ಹೊಂದಿದ್ದಾರೆ.
ಬಂಗಾರಪ್ಪನವರ ಶಿಷ್ಯರಾಗಿದ್ದ ಇವರು ಎಲ್ಲಾ ಪಕ್ಷದವರ ಜೊತೆಗೆ ಸ್ನೇಹಜೀವಿಯಾಗಿದ್ದರು. ಎಲ್ಲಾ ಪಕ್ಷದವರ ಜೊತೆ ಜಾತ್ಯಾತೀತವಾಗಿ ಅಪಾರ ಸ್ನೇಹ ಬಳಗ ಹೊಂದಿದ್ದ ಇವರು ನಂತರ ಜೆ.ಡಿ.ಎಸ್ ಪಕ್ಷದಲ್ಲಿ ಗುರುತಿಸಿಕೊಂಡು ಶಿಕಾರಿಪುರದಲ್ಲಿ ಮಾಜಿ ಸಿ.ಎಂ ಯಡಿಯೂರಪ್ಪನವರ ವಿರುದ್ಧ ಎರಡು ಬಾರಿ ಸ್ಪರ್ಧೆ ಮಾಡಿದ್ದರು.
ಶಿಕಾರಿಪುರ ತಾಲೂಕಿನ ಸಮಗ್ರ ಏತ ನೀರಾವರಿಗೆ ಶ್ರಮ ವಹಿಸಿದ್ದ ಇವರು ನಂತರ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಮೃತರಿಗೆ ಇಬ್ಬರು ಪುತ್ರಿಯರು ಇಬ್ಬರು ಮೊಮ್ಮಕ್ಕಳು ಇದ್ದು ತಾಲೂಕಿನ ಅವರ ಅಸಂಖ್ಯಾತ ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ ಇಂದು ಶುಕ್ರವಾರ ಸಂಜೆ ಮೃತರ ತೋಟದಲ್ಲಿ ಅಂತಕ್ರಿಯೆ ನೆರವೇರಲಿದೆ.
ಮೃತರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಂಸದ ಬಿ.ವೈ ರಾಘವೇಂದ್ರ ಹಾಗೂ ಶಾಸಕ ಬಿವೈ ವಿಜಯೇಂದ್ರ ಸಂತಾಪ ಸೂಚಿಸಿದ್ದಾರೆ.