ಸುದ್ದಿಲೈವ್/ಶಿವಮೊಗ್ಗ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನ ಹರಿಬಿಟ್ಟು ಆತ್ಮಹತ್ಯೆಯೇ ದಾರಿ ಎಂದು ವಿಷದ ಬಾಟೆಲ್ ವೊಂದನ್ನ ತೋರಿಸಿ ಪೌರಕಾರ್ಮಿಕನ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.
ಮಧ್ಯಾಹ್ನದ ಹೊತ್ತಿಗೆ ಪವರಕಾರ್ಮಿಕ ಮೇಸ್ತ್ರಿ ಮೂರ್ತಿ ಸಾಮಾಜಿಕ ಜಾಲತಾಣದಲ್ಲಿ ಕೈಮುಗಿದು ಧನ್ಯನ ಸ್ಥಿತಿಯಲ್ಲಿ ಬೇಡಿಕೊಂಡು ಹೆಲ್ತ್ ಇನ್ ಸ್ಪೆಕ್ಟರ್ ಹೇಳಿದಂತೆ ಮಾಡುವ ಕೆಲಸ ನನ್ನದು. ಮೋರಿ ಸ್ವಚ್ಛ ಮಾಡುತ್ತಿದ್ದ ನನಗೆ ಬಡ್ತಿ ದೊರೆತಿ ಮೇಸ್ತ್ರಿ ಆಗಿರುವೆ. ಇದಕ್ಕೂ ಕಲ್ಲು ಹಾಕಿದರೆ ನನಗೆ ವಿಷದ ಬಾಟೆಲ್ ಗತಿ ಎಂದು ವಿಡಿಯೋ ವೊಂದನ್ನ ವಾಟ್ಸಪ್ ನಲ್ಲಿ ಹರಿಬಿಟ್ಟು ನಾಪತ್ತೆಯಾಗಿದ್ದರು.
ಈಗ ಭದ್ರಾವತಿ ತಾಲೂಕು ಹುಣಸೆಕಟ್ಟೆ ಜಂಕ್ಷನ್ ನಲ್ಲಿ ಮೂರ್ತಿ ಪತ್ತೆಯಾಗಿದ್ದು ಪೌರಕಾರ್ಮಿಕ ಸಂಘದ ಗೋವಿಂದರವರ ಪರಿಶ್ರಮದಿಂದ ಸುಖಾಸಂತ್ಯ ಕಂಡಿದೆ. ಸುಖಾಂತ್ಯ ಕಂಡರೂ ಯಾರ ಮೇಲೆ ದೂರು ದಾಖಲಾಗಲಿದೆ ಎಂದಬುದು ಕುತೂಹಲ ಮೂಡಿಸಿದೆ.
ನಮಸ್ಕಾರ ಪ್ರಭು ಅಣ್ಣ ಎಂದಿದ್ದು ಯಾರು? ಯಾರು ಈ ಪೌರಕಾರ್ಮಿಕನಿಗೆ ತೊಂದರೆ ಕೊಟ್ಟಿದ್ದು? ದಯಾನಿಯ ಸ್ಥಿತಿಗೆ ತಂದವರು ಯಾರು? ಎಂಬುದು ದೂರಾಗುತ್ತಾ ಅಥವಾ ಇದೂ ಸಹ ತಿಪ್ಪೇಸಾರುವ ಹಾಗೆ ಆಗುತ್ತಾ ಕಾದು ನೋಡಬೇಕಿದೆ.