ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ನಗರದಲ್ಲಿ ಕಳೆದ ಎರಡು ಏವರ್ಷಗಳಿಂದ ಹೊಸವರ್ಷಾಚರಣೆ ವೇಳೆ ಎರಡು ಬಲಿಯಾಗಿವೆ. ಎರಡೂ ಘಟನೆಗಳು ಮಾತ್ರ ಸಾರ್ವಜನಿಜರನ್ನ ಎಚ್ಚರಿಸದಿರುವುದು ಮಾತ್ರ ದುರಂತ.
ಈ ಎರಡು ಘಟನೆಗಳು ಸಾರ್ವಜನಿಕರಲ್ಲಿ ಎಚ್ಚರಿಕೆ ಮೂಡಿಸುವುದಕ್ಕಿಂತ ಮುಂದಿನ ವರ್ಷ ಮತ್ತೊಂದಿಷ್ಟು ಹೊಸ ಯುವ ಸಮೂಹವನ್ನ ವರ್ಷಾಚರಣೆಯ ಕುಡುಕರನ್ನಾಗಿ ರೂಪಿಸಿ ಬಿಡಲಿದೆ ಹೊರತು ಹೊಸರ್ವದ ಜವಬ್ದಾರಿಗಳನ್ನ ಮರೆಸಿಬಿಡುತ್ತವೆ.
ನಿನ್ನೆ ಹೆಚ್ ಸಿದ್ದಯ್ಯ ರಸ್ತೆಯಲ್ಲಿ ಅಪಘಾತವೆನ್ನಲಾದ ಘಟನೆ ಯುವಕನೋರ್ವನನ್ನ ಬಲಿಪಡೆದುಕೊಂಡಿದೆ. ಮತ್ತೋರ್ವನ ಸ್ಥಿತಿ ಚಿಂತಾಜನಕ ವೆನ್ನಲಾಗಿದೆ. ಇಲ್ಲಿ ಯಾರದ್ದು ತಪ್ಪು, ಯಾರದ್ದು ಸರಿ ಎಂಬ ಚರ್ಚೆಗಿಂತ ವರ್ಷಾಚರಣೆಗಳು ಮನುಷ್ಯನ ಬದುಕಿನಲ್ಲಿ ಹೊಸಚಿಗುರನ್ನ ತರುವ ಬದಲು ಮನೆಮಂದಿಗೆಲ್ಲಾ ಕಣ್ಣೀರು ಸುರಿಸುವಂತೆ ಮಾಡಿದೆ. ಇದಕ್ಕೆ ಜವಬ್ದಾರಿಯಿಲ್ಲದ ಬದುಕು ಸಹ ಕಾರಣವೆನ್ನಬಹುದು.
2022 ನೇ ಇಸವಿ ಡಿ.31 ರಂದು ವಿದ್ಯಾನಗರದ ನಾಲ್ಕನೇ ತಿರುವಿನಲ್ಲಿರುವ ಮನೆಯೊಂದರಲ್ಲಿ ಹೊಸವರ್ಷಾಚರಣೆಯ ವೇಳೆ ನಾಡಬಂದೂಕಿನಿಂದ ಸಿಡಿದ ಗುಂಡೊಂದು ಯುವಕನ ಬದುಕನ್ನೇ ಕಸಿದುಕೊಂಡು ಬಿಟ್ಟಿತ್ತು. ಈ ಎರಡು ಘಟನೆಗಳು ನಮ್ಮ ಬದುಕಿನ ಎಚ್ಚರಿಸುವ ಘಟನೆಗಳಾಗದೆ ಬಲಿಪಡೆಯುವ ಜವರಾಯನಂತೆ ರೂಪುಗೊಂಡಿವೆ.
ಹೊಸವರ್ಷಾಚರಣೆ ಎಂದ ತಕ್ಷಣ ಕುಡಿದು ಕುಪ್ಪಳಿಸಿ ವಾಟ್ಸಪ್ ಗಳಲ್ಲಿ ವಿಶ್ ಕಳುಹಿಸಿ ಬಿಡುವುದೆ ಸಂಭ್ರಮ ಎನ್ನುವ ಸ್ಥಿತಿಗೆ ಯುವ ಸಮೂಹ ಬಂದು ನಿಂತಿದೆ. ಇದಕ್ಕೆ ನಾವು, ನೀವು, ಈ ವ್ಯವಸ್ಥೆಯೂ ಕಾರಣವಾಗಿದೆ.
ಸಾರ್ವಜನಿಕರು ಕುಡಿತವೇ ಹೊಸವರ್ಷಾಚರಣೆಯನ್ನ ಸ್ವಾಗತಿಸಲು ಮತ್ತು ಬೀಳ್ಕೊಡಲಿಕ್ಕೆ ಇರುವ ಸಾಧನ ಎಂಬ ತಪ್ಪು ನಿರ್ಧಾರಕ್ಕೆ ಬಂದಂತಿದೆ. ಇದರಿಂದ ಎಚ್ಚತ್ತುಕೊಳ್ಳದ ಹೊರದು ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಹೊಸವರ್ಷಾಚರಣೆಗಳು ಜವರಾಯನಂತೆ ರೂಪುಗೊಂಡಿರುವುದಕ್ಕೂ ಅಮಲಿನಲ್ಲಿ ತೇಲಾಡುವುದೇ ಕಾರಣವೆನ್ನ ಬಹುದು.
2022 ರಂದು ಡಿ.31 ರಂದು ನಡೆದ ಘಟನೆಯಿಂದ ಎಚ್ಚೆತ್ತುಕೊಳ್ಳದ ಕಾರಣ 2025 ರ ಹೊಸವರ್ಷಾಚರಣೆಯಲ್ಲಿ ಅನಾಹುತವು ವಿಭಿನ್ನವಾಗಿ ಮರುಕಳುಹಿಸಿದೆ. ವಿದ್ಯಾನಗರದಲ್ಲಿ ನಾಡಬಂದೂಕಿನಿಂದ ಹಾರಿದ ಗುಂಡು 34 ವರ್ಷದ ವಿನಯ್ ಎಂಬ ಯುವಕನ ಪ್ರಾಣವನ್ನೇ ಕಸಿದುಕೊಂಡಿತ್ತು. ನಿನ್ನೆ ಹೆಚ್ ಸಿದ್ದಯ್ಯರಸ್ತೆಯಲ್ಲಿ ನಡೆದ ಘಟನೆ ಧನುಶ್ ಎಂಬ 19 ವರ್ಷದ ಯುವಕನ ಜೀವವನ್ನ ಕಸಿದುಕೊಂಡಿದೆ. ಮತ್ತೋರ್ವನ ಸ್ಥಿತಿ ಚಿಂತಾಜನಕ ಎಂಬಂತೆ ಮಾಡಿದೆ.
ಮತ್ತೋರ್ವರ ಲಕ್ಷಾಂತರ ರೂ. ಮೌಲ್ಯದ ಕಾರು ಹಾನಿಯಾಗಿದೆ. ಅಂದರೆ ವಿನಯ್ ನ ಸಾವು ನಮ್ಮನ್ನ ಹೊಸವರ್ಷಾಚರಣೆಯಿಂದ ಎಚ್ಚರಿಸಲೇ ಇಲ್ಲವೆಂಬುದು ಸಾಬೀತಾಗಿದೆ. ಮತ್ತೊಂದು ವರ್ಷಾಚರಣೆಯ ವೇಳೆ ಕುಡಿತದ ಅಮಲಿನಲ್ಲಿ ಅನಾಹುತ ನಡೆದರೆ ವಿನಯ್ ಮತ್ತು ಧನುಶ್ ನ ಸಾವನ್ನ ಮರೆತು ಮತ್ತೊಂದು ರೂಪದಲ್ಲಿ ಬಲಿ ಪಡೆಯುತ್ತೇವೆ ಬಿಟ್ಟರೆ ಪಾಠವನ್ನಂತು ಕಲಿಯಲ್ಲವೆಂಬುದು ಸತ್ಯ.
ಕಾರಣ ಇಷ್ಟೆ,.. ಸಾವನ್ಬಪ್ಪಿದ ಇವರಿಬ್ಬರೂ ನಮಗೆ ಅಪರಿಚಿತರು. ನಮ್ಮ ನೆನಪಿನ ಪಟದಲ್ಲಿ ಇವರ ನೆನಪು ಅಲ್ಪಾವಧಿಕಾಲ ಮಾತ್ರ, ನಮ್ಮ ಮನೆಯ ಮಕ್ಕಳೂ ಅಲ್ಲದ ಕಾರಣ ಮತ್ತೊಂದು ಬಲಿ ಪಡೆಯಲು ನಿಂತುಬಿಡುತ್ತೇವೆ. ನಮಗೆ ಬಲಿಪಡೆಯುವ ಹವ್ಯಾಸವೇ ಹೊರತು ಎಚ್ಚತ್ತುಕೊಳ್ಳದ ಸಮೂಹ ಸನ್ನಿಗಳಲ್ಲ.