SUDDILIVE||SHIVAMOGGA- JAN-4
ಗ್ರಾಮೀಣ ಕೈಗಾರಿಕಾ ಇಲಾಖೆಯ ಟೆಂಡರ್ ನಲ್ಲಿ ಗೋಲ್ಮಾಲ್ ಶಂಕೆ ವ್ಯಕ್ತವಾಗಿದೆ. ತಾರಾತುರಿಯಲ್ಲಿ ಟೆಂಡರ್ ಕರೆದಿರಿವ ಆರೋಪ ಕೇಳಿಬಂದಿದೆ. ಗ್ರಾಮೀಣ ಕರಕುಶಲ ಕರ್ಮಿಗಳಿಗೆ ಕಿಟ್ ಪೂರೈಕೆ ಸಂಬಂಧ ಕರೆದಿರುವ ಟೆಂಡರ್ ನಲ್ಲಿ ಗೋಲ್ಮಾಲ್ ಆಗಿರುವ ಆರೊಪ ಕೇಳಿ ಬಂದಿದೆ ಎಂಬ ಸುದ್ದಿಲೈವ್ ವರದಿಗೆ ಬಿಗ್ ಇಂಪ್ಯಾಕ್ಟ್ ಆಗಿದೆ.
39 ಲಕ್ಷ ಮೊತ್ತದ ಟೆಂಡರ್ ಕರೆದಿರುವ ಇಲಾಖೆಯು, ಕಿಟ್ ಸ್ಯಾಂಪಲ್ ಗೆ ಸಲ್ಲಿಕೆಯ ಅವಧಿಯನ್ನು ಟೆಂಡರ್ ಸಲ್ಲಿಕೆಯ ಅವಧಿಗೂ ಮೊದಲೇ ಮುಗಿಸುತ್ತಿರುವುದು ಉದ್ದೇಶಪೂರಕವಾಗಿದೆ ಎಂದು ಆರೋಪ ಕೇಳಿಬಂದಿದ್ದು, ಸಾಲು ಸಾಲು ಸರ್ಕಾರಿ ರಜೆಗಳ ನಡೆವೆಯು ಇಲಾಖೆ ಅಲ್ಪಾವಧಿಯ ಟೆಂಡರ್ ಕರೆಯಲಾಗಿದೆ ಎಂಬ ವರದಿ ಬಿತ್ತರವಾದ ಬೆನ್ನಲ್ಲೇ ಟೆಂಡರ್ ನ ಅವಧಿ ವಿಸ್ತರಣೆಗೊಂಡಿದೆ.
ನಿಯಮಗಳ ಪ್ರಕಾರವೇ ಈ ಟೆಂಡರ್ ಕರೆದು ಸಾಕಷ್ಟು ಸಮಯ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅರ್ಹರಿಗೆ ಟೆಂಡರ್ ನಲ್ಲಿ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿರುವ ಅಧಿಕಾರಿಗಳು ಟೆಂಡರ್ ನಲ್ಲಿ ಯಾವುದೇ ಗೋಲ್ಮಾಲ್ ಆಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು.
ಆದರೆ ಮಾದರಿ ಉಪಕರಣ ಕಚೇರಿಗೆ ಸಲ್ಲಿಸುವ ಟೆಂಡರ್ ಡಿ.31 ಸಂಜೆ 5-30 ರ ಒಳಗೆ ಪೂರೈಸಲು ಸೂಚಿಸಲಾಗಿತ್ತು. ಇದನ್ನ ಜ.8 ಕ್ಕೆ ವಿಸ್ತರಿಸಲಾಗಿದೆ. ಭರ್ತಿ ಮಾಡಿದ ಟೆಂಡರ್ ಅರ್ಜಿಯನ್ನ ಜ.4 ರಂದು ಎಂದು ನಿಗದಿ ಪಡಿಸಲಾಗಿತ್ತು. ಇದನ್ನ ಜ.8 ಕ್ಕೆ ವಿಸ್ತರಿಸಲಾಗಿದೆ. ತಾಂತ್ರಿಕ ಬಿಡ್ ಕರೆಯುವ ದಿನಾಂಕವನ್ನ ಜ.08 ರಂದು ಎಂದು ನಿಗದಿಪಡಿಸಲಾಗಿತ್ತು. ಅದನ್ನ ಜ.15 ರಂದು ಬೆಳಿಗ್ಗೆ 11 ರಿಂದ ಎಂದು ವಿಸ್ತರಿಸಲಾಗಿದೆ.