ಬಿಯರ್ ದರ ಹೆಚ್ಚಳಕ್ಕೆ ಸರ್ಕಾರದ ಚಿಂತನೆ

 


ಸುದ್ದಿಲೈವ್

ಮತ್ತೆ ರಾಜ್ಯದಲ್ಲಿ ಬಿಯರ್ ದರ ಹೆಚ್ಚಳದ ಸುದ್ದಿ ಹರಿದಾಡುತ್ತಿದೆ. ಜ.20 ರ ನಂತರ ಬಿಯರ್ ನ ಪರಿಷ್ಕೃತ ದರ ಹೊರಬೀಳುವ ಸಾಧ್ಯತೆ ಇದೆ. ಬಜೆಟ್ ಮುನ್ನವೇ ಹೊಸ ದರ ಬರುವ ನಿರೀಕ್ಷೆ ಇದೆ.

ಈಗಾಗಲೇ 6 ತಿಂಗಳ ಹಿಂದೆ ಬಿಯರ್ ಗಳನ್ನೂ ಸೇರಿದಂತೆ ಮದ್ಯದ ತೆರಿಗೆ ಹೆಚ್ಚಿಸಿದ್ದ ರಾಜ್ಯ ಸರ್ಕಾರ ಈಗ ಬಜೆಟ್ ಗೂ ಮುನ್ನ ಮತ್ತೆ ಬಿಯರ್ ಗಳ ತೆರಿಗೆ ಹೆಚ್ಚಿಸಿ ಆ ಮೂಲಕ ಬೊಕ್ಕಸ ತುಂಬಿಸಿಕೊಳ್ಳಲು ಕೈಹಾಕಿದೆ.

ಜ.20 ರ ನಂತರ 10 ರಿಂದ 40 ರೂ.ಗಳವರೆಗೆ ಹೆಚ್ಚಿಸಲು ಚಿಂತಿಸಿರುವ ಸರ್ಕಾರ ಈಗಾಗಲೇ ನೋಟಿಫಿಕೇಷನ್ ಸಹ ಹೊರಡಿಸಿದೆ. 100 ರೂ.ವಿನಿಂದ 150 ರೂ. ವರೆಗೆ ಇರುವ ಬಿಯರ್ ಗಳಿಗೆ 10 ರೂ. 150 ರೂ.ನಿಂದ 200 ರೂ. ವರೆಗಿನ ಬಿಯರ್ ಗಳು 20 ರೂ. 200 ರೂ.ಗಳಿಂದ 250 ರೂ.ಗಳಿಗೆ 30ರೂ. 250 ರಿಂದ 300 ರೂ.ಗೆ 40 ರೂ. ಹೆಚ್ಚಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಈಹಿಂದೆ 99 ರೂ. ಇದ್ದ ಬಿಯರ್ ಗಳು 120 ರೂ.ವರೆಗೆ ತೆರಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. 150 ರೂ. ಗೆ ಮಾರಾಟವಾಗುತ್ತಿದ್ದ ಬಿಯರ್ ಗಳಿಗೆ 35 ರೂ. ತೆರಿಗೆ ವಿಧಿಸಿ 185 ರೂ. ನಿಗದಿ ಪಡಿಸಿ ಆದೇಶಿಸಿದ ಸರ್ಕಾರ ಒಂದು ವರ್ಷದ ಒಳಗೆ ಇದರ ದರವನ್ನ ಹೆಚ್ಚಿಸಲು ಮುಂದಾಗಿದೆ.

ಕೆಎಸ್ಆರ್ ಟಿಸಿ ಬಸ್ ಗಳ ದರ ಹೆಚ್ಚಿಸಿ ಆದೇಶಿಸಿದ ಸರ್ಕಾರ ಮದ್ಯದ ಮೇಲೆ ಕಣ್ಣು ಹಾಕಿದೆ. ಈಗಾಗಲೇ ಮದ್ಯ ದರ ಹೆಚ್ಚಿಸಿದ್ದರಿಂದ 10-15% ಮಾರಾಟದ ಮೇಲೆ ಹೊಡೆತ ಬಿದ್ದಿತ್ತು. ಬೇಸಿಗೆ ಹತ್ತಿರವಿರುವುದರಿಂದ ಬಿಯರ್ ಗೆ ಬೇಡಿಕೆ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಸರ್ಕಾರ ಬಜೆಟ್ ಗೂ ಮುನ್ನ ದರ ಹೆಚ್ಚಳಕ್ಕೆ ಕೈಹಾಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close