ಸುದ್ದಿಲೈವ್/ಶಿವಮೊಗ್ಗ
ಗಣರಾಜ್ಯೋತ್ಸವ ಅಂಗ ವಾಗಿ ವಿವಿಧ ಸಂಘ ಸಂಸ್ಥೆಗಳ ಸಹಯೋಗ ದೊಂದಿಗೆ ಜಿಲ್ಲಾ ಪಂಚಾಯತ್ ವತಿ ಯಿಂದ ನಗರದ ಅಲ್ಲಮ ಪ್ರಭು ಉದ್ಯಾ ವನದಲ್ಲಿ ಆಯೋಜಿಸಿರುವ ಬೃಹತ್ ಫಲಪುಷ್ಪ ಪ್ರದರ್ಶನ ಮತ್ತು ಕರಕುಶಲ ಉತ್ಸವಕ್ಕೆ ಇಂದು ಅಧಿಕೃತ ಚಾಲನೆ ದೊರೆತಿದ್ದು, ವೈವಿಧ್ಯಮಯ ಫಲಪುಷ್ಪ ಪ್ರದರ್ಶನ ನೋಡುಗರ ಮನಸೂರೆಗೊಂಡಿದೆ.
ರಾಷ್ಟ್ರಕವಿ ಕುವೆಂಪು ಅವರ ಕವಿಶೈಲದ ಮನೆ ಮಾದರಿ, ಕುವೆಂಪು ಪುತ್ಥಳಿ, ಬೃಹತ್ ಗಾತ್ರದ ಪುಷ್ಪಾಲಂಕೃತ ನವಿಲು, ಚಂದ್ರಗುತ್ತಿ ರೇಣುಕಾಂಬ ದೇವಾಲಯ, ಐ ಲವ್ ಯು ಶಿವಮೊಗ್ಗ ಕಲಾಕೃತಿ, ಬಿದಿರಿನ ಬುಟ್ಟಿಗಳು, ಮಣ್ಣಿನ ವಿವಿಧ ಕಲಾಕೃತಿಗಳು, ವಿವಿಧ ಬೆಗೆಯ ಫಲ ಪುಷ್ಪಗಳು, ತರಕಾರಿಗಳು, ಮೀನಿನ ಅಕ್ಕೇರಿಯಂ, ವಿವಿಧ ತಳಿಯ ತರಕಾರಿ, ಹೂವಿನ ಬೀಜಗಳು, ಸಹಕಾರಿ ಸಂಘಗಳಿಂದ ನೂರಾರು ಮಳಿಗೆಗಳಲ್ಲಿ ತಿಂಡಿ ತಿನಿಸುಗಳ ಪ್ರದರ್ಶನ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅದರಲ್ಲೂ ತರಕಾರಿ, ಹಣ್ಣು, ಹೂವುಗಳನ್ನು ಬಳಸಿ ವಿವಿಧ ಕಲಾಕೃತಿ ರಚಿಸಿದ್ದು, ಮಕ್ಕಳು ಹಾಗೂ ನೋಡುಗರನ್ನು ಸೆಳೆದಿವೆ. ಆಕರ್ಷಕ ವೈವಿಧ್ಯಮಯ ರಂಗೋಲಿಗಳು ಕೂಡ ನೋಡುಗರನ್ನು ಸೆಳೆದಿವೆ. ಹಸೆ ಚಿತ್ತಾರ, ಟೆರಾಕೊಟ್ಟ (ಸುಡಾವೆಮಣ್ಣು)
ಶಿಲ್ಪಕಲಾ ಉತ್ಪನ್ನಗಳು, ಗುಡಿ ಕೈಗಾರಿಕೆ ಮತ್ತು ವೈಯರ್ ಬ್ಯಾಗ್ ಗಳು, ಗೃಹ ಅಲಂಕಾರಿಕಾ ವಸ್ತುಗಳು, ಹೀಗೆ ಹತ್ತು ಹಲವು ಬಗೆಯ ವಸ್ತುಗಳನ್ನು ಪ್ರದರ್ಶನದಲ್ಲಿವೆ. ಸ್ವಸಹಾಯ ಸಂಘದ ಸದಸ್ಯರಿಗೆ ವಿವಿಧ ಯೋಜನೆಗಳಡಿಯಲ್ಲಿ ಅವಕಾಶ ನೀಡಲಾಗಿದೆ.
ಶುಕ್ರವಾರ ಬೆಳಗ್ಗೆ ಬೃಹತ್ ಫಲಪುಷ್ಪ ಪ್ರದರ್ಶನ ಮತ್ತು ಕರಕುಶಲ ಉತ್ಸ ವಕ್ಕೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಚಾಲನೆ ನೀಡಿ ಮಾತನಾಡಿದರು. ವೈವಿಧ್ಯ ಮಯ ಕರಕುಶಲ ಮತ್ತು ಫಲಪುಷ್ಪಗಳ ಜಗತ್ತು ಇಲ್ಲಿ ಸೃಷ್ಟಿಯಾಗಿದೆ. ಕರಕುಶಲ ಕಲಾವಿ ದರಿಗೆ ಶಾಶ್ವತವಾಗಿ ಮಾರುಕಟ್ಟೆ ಒದಗಿಸಲು ಮಾಲ್‌ನ್ನು ನಿರ್ಮಿಸಿ ದರೆ ಅನುಕೂಲವಾಗುತ್ತದೆ. ಇದಕ್ಕೆ ನಮ್ಮ ಸಹಕಾರ ಸಹ ಇದೆ ಎಂದರು.
ಜಿ.ಪಂ. ಸಿಇಒ ಹೇಮಂತ್ ಅವರ ಮಲೆನಾಡ ಕರಕುಶಲ ಉತ್ಸ ವದ ಕನಸು ಇಂದು ನನಸಾಗಿದೆ. ಕರಕುಶಲ ಮತ್ತು ಫಲ ಪುಷ್ಪ ಇವೆರಡು ವರ್ತಮಾನದಲ್ಲಿ ಅಗತ್ಯವಾಗಿದೆ. ಕಲಾವಿದರು ತಮ್ಮ ಕಲೆಯ ಮೂಲಕ ನಮ್ಮ ಸಂಸ್ಕೃತಿಯ ಅನಾವರಣ ಮಾಡಿದ್ದಾರೆ. ಶಾಲಾ ಮಕ್ಕಳು ಕೂಡ ಬಂದು ಕಲಾಕೃತಿಗಳನ್ನು ನೋಡಿ ಸಂತಸ ಪಡುತ್ತಿದ್ದಾರೆ. ಮೂರು ದಿನಗಳ ಕಾಲ ನಾಗರೀಕರು ಇಂತಹ ಪ್ರದರ್ಶನದ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಈ ಉತ್ಸ ವ 3 ದಿನಗಳ ಕಾಲ ಯಶಸ್ವಿಯಾಗಿ ನಡೆಯಲಿ ಎಂದ ಅವರು, ಇಂತಹ ಕಾರ್ಯಕ ಮು ಗಳು ಯಶಸ್ವಿಯಾಗಬೇಕು. ನಾವೆಲ್ಲ ಇಲ್ಲಿನ ಉತ್ಪನ್ನಗಳನ್ನು ಕೊಂಡಕೊಳ್ಳುವುದರ ಮೂಲಕ ಇವರೆಲ್ಲರನ್ನು ಸಹಕರಿಸೊಣ ಎಂದರು.