ಅರ್ಥಶಾಸ್ತ್ರವನ್ನ ಕಲಿಯಲು ವಿದ್ಯಾರ್ಥಿಗಳ ವಿನೂತನ ಪ್ರಯತ್ನ!

Innovative effort of students to learn economics!


ಭದ್ರಾವತಿ/ಶಿವಮೊಗ್ಗ

ಅರ್ಥಶಾಸ್ತ್ರವನ್ನು (Economics) ಅರ್ಥ ಮಾಡಿಕೊಳ್ಳಲು ವಿದ್ಯಾರ್ಥಿಗಳಿಂದ ವಿನೂತನ ಕ್ರಮ ಅನುಸರಿಸಲಾಗಿದೆ. ರಂಗೋಲಿ  ಮೂಲಕ ರೇಖಾಚಿತ್ರ (Drawing) ಮತ್ತು ನಕ್ಷೆಗಳ ಮೂಲಕ ಅರಿತುಕೊಳ್ಳುವ ಯತ್ನ ನಡೆಸಲಾಗಿದೆ. 

ಭದ್ರಾವತಿ ನಗರದ ನ್ಯೂ ಟೌನ ನ ಸರ್ಕಾರಿ ಬಾಲಕಿಯರ ಪದವಿ ಪೂರ್ವ  ಕಾಲೇಜಿನಲ್ಲಿ ವಿನೂತನ ಪ್ರಯತ್ನ ನಡೆದಿದೆ. ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿನೂತನ ಪ್ರಯತ್ನಕ್ಕೆ  ವಿದ್ಯಾರ್ಥಿನಿಯರು ಮುಂದಾಗಿದ್ದಾರೆ. 


ಉಪನ್ಯಾಸಕ ಎಂ ಆರ್ ತಿಪ್ಪೇಸ್ವಾಮಿ ಅವರ ಮಾರ್ಗದರ್ಶನದಲ್ಲಿ ರಂಗೋಲಿಯಿಂದ ಅರ್ಥಶಾಸ್ತ್ರದ ನಕ್ಷೆಗಳನ್ನು ವಿದ್ಯಾರ್ಥಿನಿಯರು ಬಿಡಿಸಿರುವುದು ಗಮನ ಸೆಳೆದಿದೆ. ಅರ್ಥಶಾಸ್ತ್ರದ ಪಠ್ಯದಲ್ಲಿ ಬರುವ ವಿವಿಧ ವಿಷಯಗಳನ್ನು ನಕ್ಷೆ ಮತ್ತು ರೇಖಾಚಿತ್ರದ ಮೂಲಕ  ವಿದ್ಯಾರ್ಥಿನಿಯರು ಅರ್ಥಮಾಡಿಕೊ್ಳುವ ಯತ್ನ ನಡೆಸಿದ್ದಾರೆ. 

ವಿದ್ಯಾರ್ಥಿನಿಯರ ಪ್ರಯತ್ನಕ್ಕೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇಂದು ನಡೆದ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಗಮನ ಸೆಳೆದ ವಿದ್ಯಾರ್ಥಿನಿಯರ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ವಿವಿಧ ಬಣ್ಣಗಳಿಂದ  ರೇಖಾಚಿತ್ರ ಹಾಗೂ ನಕ್ಷೆಗಳು ಕಂಗೊಳಿಸುತ್ತಿದೆ. 

ಸುಮಾರು 70ಕ್ಕೂ ಹೆಚ್ಚು ನಕ್ಷೆ ಹಾಗೂ ವಿನ್ಯಾಸಗಳನ್ನು ರಚಿಸಿ ವಿದ್ಯಾರ್ಥಿನಿಯರು ಗಮನಸೆಳೆದಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close