ಲಕ್ಷಾಂತರ ರೂ ಮೌಲ್ಯದ ಸಾಗುವಾನಿ ಮರಗಳ ಅಕ್ರಮ ಕಡಿತಲೆ - ನಾಟ ವಶಕ್ಕೆ


SUDDILIVE|RIPPONPETE, JAN-4


ಅರಸಾಳು ವಲಯ ಅರಣ್ಯ ವ್ಯಾಪ್ತಿಯ ಅರಸಾಳು ಗ್ರಾಮದ ಸರ್ವೆ ನಂ.94 ರ ಅರಣ್ಯ ಪ್ರದೇಶದಲ್ಲಿ ಅಪರಿಚಿತ ಮರಗಳ್ಳರು ಅಕ್ರಮವಾಗಿ ಲಕ್ಷಾಂತರ ರೂ ಮೌಲ್ಯದ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿರುವ ಘಟನೆ ನಡೆದಿದೆ.

ಅರಸಾಳು ವ್ಯಾಪ್ತಿಯ ಮಾಣಿಕೆರೆ ಗ್ರಾಮದಲ್ಲಿ ಆನೆಗಳ ನಿಗ್ರಹಕ್ಕಾಗಿ ತೆಗೆದಿರುವ ಬೃಹದಾಕಾರದ ಟ್ರಂಚ್ ದಾಟಿ ದಟ್ಟಾರಣ್ಯದಲ್ಲಿ 70 ರಿಂದ 80 ವರ್ಷದ ಬೃಹದಾಕಾರದ 5 ಮರಗಳನ್ನು ಮರಗಳ್ಳರು ಕಡಿದಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಸಾಗುವಾನಿ ಮರಗಳನ್ನು ಕಡಿದಿರುವ ಮಾಹಿತಿ ಅರಿತ ಅರಣ್ಯಾಧಿಕಾರಿಗಳು ಮರ ಕಡಿದಿರುವ ಸ್ಥಳವನ್ನು ಪತ್ತೆಹಚ್ಚಿದಾಗ ಬೃಹದಾಕಾರದ ಒಟ್ಟು 05 ಸಾಗುವಾನಿ ಮರಗಳನ್ನು ಕಡಿದಿರುವುದು ಕಂಡುಬಂದಿದೆ. ಬೇರೆಡೆಗೆ ಸಾಗಿಸಲು ತಯಾರುಮಾಡಿಟ್ಟಿದ್ದ 18 ತುಂಡುಗಳನ್ನು ಅರಣ್ಯ ಇಲಾಖ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ. 80 ಅಡಿಗೂ ಅಧಿಕ ನಾಟವಿರುವುದಾಗಿ ಅಂದಾಜಿಸಲಾಗಿದ್ದು ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಲಾಗಿದೆ.

ಕಾರ್ಯಚರಣೆಯಲ್ಲಿ ಆರ್‌ಎಫ್‌ಓ ಶರಣಪ್ಪ, ಡಿ.ಆರ್.ಎಫ್.ಓ. ಮಹೇಶ್ ನಾಯ್ಕ, ಅರಣ್ಯ ರಕ್ಷಕ ಕುಮಾರ್ ಮಾಂಗ್, ಅನಿಲ, ಸಿಬ್ಬಂದಿಗಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close