![]() |
SP Dinesh, the former president of the graduate cooperative association, said that this time the election of the graduate constituency has not been seen in my tenure. |
ಸುದ್ದಿಲೈವ್/ಶಿವಮೊಗ್ಗ
ಈ ಬಾರಿ ಪದವೀಧರ ಕ್ಷೇತ್ರದ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದು ನನ್ನ ಅವಧಿಯಲ್ಲಿ ನೋಡಿರಲಿಲ್ಲ ಎಂದು ಪದವೀಧರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಸ್ಪಿ ದಿನೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12 ಸ್ಥಾನದಲ್ಲಿ ನಮ್ಮ ತಂಡ 11 ಜನ ಗೆದ್ದಿದ್ದೇವೆ. ನಮ್ಮ ಹಳೇಯ ಆಡಳಿತ ಮಂಡಳಿಯಲ್ಲಿದ್ದ ಸುರೇಶ್ ಅವರು ಐದು ಮತಗಳಿಂದ ಸೋಲನ್ನ ಕಂಡು ಒಂದು ಸ್ಥಾನ ಕಳೆದುಕೊಳ್ಳ ಬೇಕಾಯಿತು ಎಂದರು.
ಸಾಮಾನ್ಯದಲ್ಲಿ 7 ಜನ ಗೆದ್ದಿದ್ದಾರೆ, ಮಹಿಳ ಕ್ಷೇತ್ರದಲ್ಲಿ ಇಬ್ಬರು, ಬಿಸಿಎಂ ಬಿ, ಬಿಸಿಎಂ ಎನಿಂದ ತಲಾ ಒಬ್ಬರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಿಂದ ತಲಾ ಒಬ್ಬೊಬ್ಬರು ಗೆದ್ದಿದ್ದಾರೆ. ಗೆದ್ದ ಪದವೀಧರ ಸಂಘದ ಎಲ್ಲಾ ಗೆದ್ದ ಗೌರವಾನ್ವಿತ ಸದಸ್ಯರಿಗೆ ಧನ್ಯವಾದಗಳು ಎಂದರು.
50 ವರ್ಷದ ಪೂರೈಸಿದ ನಮ್ಮ ಸಂಘದ ಸ್ವಂತ ಕಟ್ಟಡವನ್ನ ಹಮ್ಮಿಕೊಂಡಿದ್ದೇವೆ. ಐದಾರು ತಿಂಗಳಲ್ಲಿ ನೂತನ ಕಟ್ಟಡದ ಉದ್ಘಾಟನೆ ಮಾಡಲಿದ್ದೇವೆ. ಸಹಕಾರ ಸಂಘದಲ್ಲಿ ವ್ಯವಹಾರಗಳು ಗೊತ್ತಿರುವರು ಬಂದಿದ್ದರೆ ತೊಂದರೆಯಿರುತ್ತಿರಲಿಲ್ಲ. ಕೆಲ ರಾಜಕೀಯ ತಂಡದ ಪ್ರತಿಷ್ಠಿತ ನಾಯಕರು ನಮ್ಮನ್ನ ಸೋಲಿಸಲು ಪ್ರಯತ್ನಿಸಿದ್ದರು.
ನಮ್ಮ ತಂಡವನ್ನ ಮತದಾರರು ಕೈಬಿಡಲಿಲ್ಲ. ನೂತನ ನಮ್ಮ ಸದಸ್ಯರಿಗೆ 1500 ಲಾಕರ್ ನ್ನ ಸದಸ್ಯರು, ಶಾಖಾ ಕಚೇರಿ, ಮಿನಿ ಆಡಿಟೋರಿಯಂ ನಿರ್ಮಾಣ, ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಈ ಆಡಿಟೋರಿಯಂ ಅನುಕೂಲವಾಗಲಿದೆ