ಪಟಾಕಿ ಸಿಡಿದು ಮಗುವಿಗೆ ಗಾಯ

A child was injured by firecrackers


ಸುದ್ದಿಲೈವ್/ತೀರ್ಥಹಳ್ಳಿ 

ತುಂಗಾ ತೀರದಲ್ಲಿ ನಡೆದ ಸಿಡಿಮದ್ದು(crackers) ಪ್ರದರ್ಶನಕ್ಕೆ ಬಳಸಿದ ಅರ್ಧ ಸುಟ್ಟ ಸಿಡಿಮದ್ದುಗಳನ್ನು ಸಿಡಿಸಲು ಹೋಗಿ ಕುರುವಳ್ಳಿಯ 9 ವರ್ಷದ ಬಾಲಕನಿಗೆ ಗಂಭೀರ ಗಾಯಗಳಾಗಿವೆ (woonded). ಜೆಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಎಳ್ಳಮಾವಾಸ್ಯೆ ಜಾತ್ರೆಯ ಪ್ರಯುಕ್ತ ಜನವರಿ 1ರ ರಾತ್ರಿ ತೆಪ್ಪೋತ್ಸವ ಆಚರಣ(celebration) ಸಮಿತಿ ವತಿಯಿಂದ ತುಂಗಾ ನದಿಯ(river) ದಡದಲ್ಲಿ ಸಿಡಿಮದ್ದು ಪ್ರದರ್ಶನ ನಡೆದಿದೆ. ಸಿಡಿಮದ್ದು ಪ್ರದರ್ಶನದ ನಂತರ ಸಿಡಿಮದ್ದು ತ್ಯಾಜ್ಯವನ್ನು ಸ್ವಚ್ಚಗೊಳಿಸಿರಲಿಲ್ಲ. ಜನವರಿ 5ರ ಭಾನುವಾರ ಸಂಜೆ 4 ಗಂಟೆಗೆ ತುಂಗಾ ದಡದಲ್ಲಿ ಆಡುತ್ತಿದ್ದ ಮೂವರು ಬಾಲಕರಿಗೆ ಪಟಾಕಿ ತ್ಯಾಜ್ಯ ಒಟ್ಟುಗೂಡಿಸುವ ವೇಳೆ ಪಟಾಕಿ ಸಿಡಿದು ಅಪಘಾತ ಸಂಭವಿಸಿದೆ. ಇಬ್ಬರು ಬಾಲಕರಿಗೆ ಸಣ್ಣ ಗಾಯಗಳಾಗಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close