ಕೈಮುಗಿದ ನಂತರ ಕೈಕೊಟ್ಟ ಶಾಸಕರು

MLA Chennabasappa did not shake hands with Minister Madhuppa because they stood side by side. In between, Munisu was unveiled.

ಸುದ್ದಿಲೈವ್/ಶಿವಮೊಗ್ಗ

ಅಕ್ಕಪಕ್ಕ ನಿಂತರು ಸಚಿವ ಮಧು ಬಂಗಾರಪ್ಪನವರಿಗೆ ಶಾಸಕ ಚೆನ್ನಬಸಪ್ಪ ಕೈಕುಲಕದಿದ್ದ ಕಾರಣ ಇಬ್ಬರ. ನಡುವೆ ಮುನಿಸು ಅನಾವರಣಗೊಂಡಿದೆ. 

ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪಾರ್ಕ್ ನ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ವೇಳೆ ಕಾರ್ಯಕ್ರಮದಲ್ಲಿ ಶಾಸಕರು ಮತ್ತು ಸಚಿವರು ಭಾಗಿಯಾಗಿದ್ದರು. 

ಭೂಮಿ ಪೂಜೆ ನಡೆಯುವ ವೇಳೆ ಶಾಸಕ ಚೆನ್ನಬಸಪ್ಪರಿಗೆ  ಶೇಕ್ ಹ್ಯಾಂಡ್ ಮಾಡಲು ಮುಂದಾದ ಸಚಿವ ಮಧು ಬಂಗಾರಪ್ಪನವರಿಗೆ ಮುನಿಸಿಗೊಂಡ ಶಾಸಕ ಚೆನ್ನಬಸಪ್ಪ ಕೈಕುಲಕಲು ನಿರಾಕರಿಸಿದ್ದಾರೆ. 

ನಂತರ ಇಬ್ಬರನ್ನೂ ಸಮಾಧಾನ ಪಡಿಸಿದ ಪರಿಷತ್ ಸದಸ್ಯೆ ಬಲ್ಕಿಸ್ ಭಾನು ಇಬ್ಬರ ಕೈ ಹಿಡಿದು ಹ್ಯಾಂಡ್ ಶೇಕ್ ಮಾಡಿಸಿದ್ದಾರೆ. ಇದರಿಂದ ಆಶ್ರಯ ಬಡಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಮುನಿಸು ಮುಂದುವರೆದಿದೆ. 

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ ಶಾಸಕರು ನಾವು ಚೆನ್ನಾಗಿದ್ದೀವಿ. ಆಶ್ತಯ ಬಡಾವಣೆಯ ವಿಷಯದಲ್ಲಿ ಶಾಸಕರಿಗೆ ಮುನಿಸಿದೆ. ಅವರು ಹೇಳಿದತೆ ಕೇಳಲಾಗಲ್ಲ. ಆಶ್ರಯ ಮನೆಯನ್ನ ಸಂಪೂರ್ಣಗೊಳಿಸಿ ಲೋಕಾರ್ಪಣೆ ಮಾಡಬೇಕು ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close