The incident of a young man from Baise village of Nagar Hobali in Hosnagar taluk took place this evening after consuming poison and committed suicide by making a video on WhatsApp status. |
ಸುದ್ದಿಲೈವ್/ನಗರ
ಹೊಸನಗರ ತಾಲೂಕು ನಗರ ಹೋಬಳಿಯ ಬೈಸೆ ಗ್ರಾಮದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಸಂಜೆ ನಡೆದಿದ್ದು, ವಿಷ ಸೇವನೆಯ ವಿಡಿಯೋ ಮಾಡಿ ವಾಟ್ಸಪ್ ಸ್ಟೇಟಸ್ ಗೆ ಹಾಕಿಕೊಂಡಿರುವ ಯುವಕನ ಸ್ಥಿತಿ ಚಿಂತಾಜನಕವಾಗಿದೆ.
ರಾಕೇಶ ಜೋಗಿ ಎಂಬ 27 ವರ್ಷದ ಯುವಕ ವಿಷ ಸೇವನೆ ಮಾಡಿರುವ ವಿಡಿಯೋ ಮಾಡಿಕೊಂಡು ವಾಟ್ಸಪ್ ಸ್ಟೇಟಸ್ ಗೆ ಹಾಕಿಕೊಂಡಿದ್ದಾನೆ. ಆತನನ್ನ ಮೊದಲು ಹೊಸನಗರ ಆಸ್ಪತ್ರೆಗೆ ಸೇರಿಸಲಾಗಿದ್ದು ನಂತರ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿಂದೆ ರಾಕೇಶ ಜೋಗಿ ವಿರುದ್ಧ ಪೋಸ್ಕೋ ಪ್ರಕರಣವೊಂದು ದಾಖಲಾಗಿತ್ತು. ನಂತರ ಆತ ಜಾಮೀನು ಪಡೆದು ಹೊರಗೆ ಬಂದಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎವಿಡೆನ್ಸ್ ವಿಚಾರಣೆ ನ್ಯಾಯಾಲಯದಲ್ಲಿ ಶೀಘ್ರದಲ್ಲಿಯೇ ನಡೆಯಲಿತ್ತು.
ಈ ನಡುವೆ ಇಬ್ಬರು ವ್ಯಕ್ತಿಗಳು ಪೊಲೀಸ್ ಠಾಣೆಯನ್ನ ದುರ್ಬಳಕೆ ಮಾಡಿಕೊಂಡು ಆತನ ವಿರುದ್ಧ ದೂರು ದಾಖಲಿಸುವ ಮೂಲಕ ಜಾಮೀನು ರದ್ದುಪಡಿಸುವ ಯತ್ನ ನಡೆಸುತ್ತಿರುವ ಆರೋಪ ಸಹ ಕೇಳಿ ಬಂದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯಾಂಶ ಹೊರಬೀಳಬೇಕಿದೆ. ನೇರವಾಗಿ ವಿಷದ ಬಾಟೆಲ್ ಹಿಡಿದು ಸೇವಿಸಿರುವ ವಿಡಿಯೋ ತಲ್ಲಣ ಮೂಡಿಸಿದೆ. ಸಧ್ಯಕ್ಕೆ ಪ್ರಕರಣ ಹೆಚ್ ಎಂ ಆರ್ ಆಗಿದೆ.