ಬಿಆರ್ ಪಿ ಸೆಕ್ಷನ್ ಆಫೀಸರ್ ಮತ್ತು ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತರ ಬಲೆಗೆ


ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿ ತಾಲ್ಲೂಕಿನ ಗೋಂಧಿ ಬಲದಂಡೆ ನಾಲೆಯಲ್ಲಿ ಶಿಲ್ಟ್ ತಗೆಯಲು ಇ-ಟೆಂಡರ್ ವಿಚಾರದಲ್ಲಿ ಬಾಕಿ ಹಣ ಕೊಡುವಂತೆ ಗುತ್ತಿಗೆದಾರನಿಂದ ಹಣ ಪಡೆಯುವಾಗ ಕಂಪ್ಯೂಟರ್ ಆಪರೇಟರ್ ಮತ್ತು ಸೆಕ್ಷನ್ ಆಫೀಸರ್ ಕೊಟ್ರಪ್ಪ.ಟಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 

ಬಳ್ಳಾರಿಯ ಕಾಕರ್ಲ ತೋಟದ ಶೆಟ್ಟಿ ಅಂಗಡಿ ನಿವಾಸಿ ಹಾಗೂ ಪಿಡಬ್ಲ್ಯೂಡಿ ಕ್ಲಾಸ್-02, ಕಾಂಟ್ರ್ಯಾಕ್ಟರ್ ಆದ  ವಿ.ರವಿ. ಬಿನ್ ನಾಗರಾಜ.ವಿ. (32)   ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತ, ಬಿಆರ್‌ಪಿ ವ್ಯಾಪ್ತಿಯ ಭದ್ರಾವತಿ ತಾಲ್ಲೂಕಿನ ಗೋಂಧಿ ಬಲದಂಡೆ ನಾಲೆಯಲ್ಲಿ ಶಿಲ್ಟ್ ತಗೆಯಲು ಇ-ಟೆಂಡರ್ ಕರೆದಿದ್ದು, ಅದರಂತೆ ಪಿರ್ಯಾದಿಗೆ 2023ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ಇ-ಟೆಂಡ‌ರ್ ಆಗಿರುತ್ತದೆ. ಈ  ಕಾಮಗಾರಿಗಳ ಒಟ್ಟು ಮೊತ್ತ ಜಿಎಸ್‌ಟಿ ಸೇರಿ 9,16,999/-ರೂಗಳಾಗಿದ್ದು, 2023 ನೇ ಡಿಸೆಂಬರ್ ತಿಂಗಳಲ್ಲಿ ಕೆಲಸ ಪ್ರಾರಂಭಿಸಿ, 2024 ನೇ ಜನವರಿ ತಿಂಗಳಲ್ಲಿ ಶಿಲ್ಟ್ ತಗೆಯುವ ಕಾಮಗಾರಿಯನ್ನು ಮುಕ್ತಾಯ ಮಾಡಿದ್ದರು. 

ಕಾಮಗಾರಿಯ ಬಿಲ್ ಅನ್ನು ಮಂಜೂರು ಮಾಡುವಂತೆ  ಕಚೇರಿಗೆ ಹಲವಾರು ಬಾರಿ ಹೋಗಿ ಕೇಳಿದ್ದಾರೆ. ಆದರೆ ಟೆಂಡರ್ ಹಣ ಬಿಡುಗಡೆ ಆಗಿರುವುದಿಲ್ಲ. ಡಿ.27 ರಂದು ವಿ.ರವಿ ಡಿ.ಬಿ ಹಳ್ಳಿಯ ಕರ್ನಾಟಕ ನೀರಾವರಿ ನಿಮಗ ನಿಯಮಿತ ಕಛೇರಿಗೆ ಹೋಗಿ, ಕಛೇರಿಯಲ್ಲಿದ್ದ ಸೆಕ್ಷನ್ ಆಫೀಸರ್ ಕೊಟ್ರಪ್ಪ.ಟಿ. ರವರನ್ನು ಭೇಟಿ ಮಾಡಿ, ತನ್ನ ಕಾಮಗಾರಿಯ ಬಿಲ್ ಅನ್ನು ಮಂಜೂರು ಮಾಡುವಂತೆ ಕೇಳಿಕೊಂಡಾಗ ಕೊಟ್ರಪ್ಪರವರು ನಿಮ್ಮ ಬಿಲ್ ಮಂಜೂರು ಮಾಡಬೇಕಾದರೆ ಇನ್ನು 1.20,000/-ರೂಗಳನ್ನು ಕೊಟ್ಟರೆ ಮಾತ್ರ ಮಾಡುತ್ತೇವೆಂದು ತಿಳಿಸಿದ್ದಾರೆ.  

ಇಲ್ಲದಿದ್ದರೆ  ಕಾಮಗಾರಿಯ ಬಿಲ್ ಹಣವನ್ನು ಬಿಡುಗಡೆ ಮಾಡುವುದಿಲ್ಲವೆಂದು ಕೊಟ್ರಪ್ಪ ಹೇಳಿದ್ದು ಅವರು ಮಾತನಾಡಿದ  ಬಗ್ಗೆ ಮೊಬೈಲ್ ನಲ್ಲಿ ವಾಯ್ಸ್ ರೆಕಾರ್ಡ್ ಮಾಡಿಕೊಂಡಿರುತ್ತಾರೆ. ರವಿಯವರಿಗೆ ಲಂಚದ ಹಣವನ್ನು ನೀಡಲು ಇಷ್ಟವಿಲ್ಲದ ಕಾರಣ ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತ, ಬಿಆರ್‌ಪಿ ವ್ಯಾಪ್ತಿಯ ಡಿ.ಬಿ. ಹಳ್ಳಿಯ ಸೆಕ್ಷನ್ ಅಫೀಸರ್ ಕೊಟ್ರಪ್ಪ ರವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಲೋಕಾಯುಕ್ತದಲ್ಲಿ ದೂರು ನೀಡಿದ್ದರು. 

ಇಂದು ಸಂಜೆ 04:30 ಕ್ಕೆ ಸೆಕ್ಷನ್ ಆಫೀಸರ್ ಕೊಟ್ರಪ್ಪ  (ಪ್ರಬಾರ ಎ.ಇ.ಇ) ಮತ್ತು ಅವರ ಕಛೇರಿಯ ಕಂಪ್ಯೂಟರ್ ಆಪರೇಟರ್ ಅರವಿಂದ್ ರವರು  ರೂ 1,20,000/-ಲಂಚದ ಹಣವನ್ನು ಕಚೇರಿಯಲ್ಲಿ ಸ್ವೀಕರಿಸಿದ್ದು,  ಲಂಚದ ಹಣ ಪಡೆಯುವಾಗ ಲೋಕಾಯುಕ್ತ ದಾಳಿಯಾಗಿದೆ.‌   ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್ ವೀರಬಸಪ್ಪ.ಎಲ್.ಕುಸಲಾಪುರ ರವರು ತನಿಖೆ ಕೈಗೊಂಡದ್ದಾರೆ. 

ಟ್ರ್ಯಾಪ್ ಕಾರ್ಯಾಚರಣೆಯನ್ನು ಶ್ರೀ.ಮಂಜುನಾಥ ಚೌದರಿ ಎಂ.ಹೆಚ್. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ನೇತೃತ್ವದಲ್ಲಿ ನಡೆಸಲಾಗಿದ್ದು ಟ್ರ್ಯಾಪ್ ಕಾಲಕ್ಕೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಹೆಚ್.ಎಸ್ ಸುರೇಶ್, ಶ್ರೀ.ಪ್ರಕಾಶ್, ಸಿಬ್ಬಂದಿಯವರಾದ ಶ್ರೀ.ಯೋಗೇಶ್ ಸಿ.ಹೆಚ್.ಸಿ, ಶ್ರೀ.ಟೀಕಪ್ಪ ಸಿ.ಹೆಚ್.ಸಿ, ಶ್ರೀ.ಸುರೇಂದ್ರ ಸಿ.ಹೆಚ್.ಸಿ, ಶ್ರೀ.ಮಂಜುನಾಥ್ ಎಂ. ಶ್ರೀ.ಪ್ರಶಾಂತ್ ಕುಮಾರ್, ಸಿ.ಪಿ.ಸಿ, ಶ್ರೀ ಚೆನ್ನೇಶ್, ಸಿ.ಪಿ.ಸಿ ಶ್ರೀ.ಅರುಣ್ ಕುಮಾರ್ ಸಿ.ಪಿ.ಸಿ, ಶ್ರೀ ದೇವರಾಜ್, ಸಿ.ಪಿ.ಸಿ ಶ್ರೀ ಪ್ರಕಾಶ್, ಸಿ.ಪಿ.ಸಿ ಶ್ರೀ ಆದರ್ಶ ಸಿ.ಪಿ.ಸಿ ಶ್ರೀಮತಿ ಪುಟ್ಟಮ್ಮ.ಎನ್. ಮ.ಪಿ.ಸಿ, ಶ್ರೀಮತಿ ಅಂಜಲಿ ಮ.ಪಿ.ಸಿ ಶ್ರೀ ಗಂಗಾಧರ ಎ.ಪಿ.ಸಿ, ಶ್ರೀ ಪ್ರದೀಪ್, ಎ.ಪಿ.ಸಿ ರವರು ಹಾಜರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close