The high command said keep your mouth shut. Minister Madhuppa Bangarappa said that there will be a job of keeping the mouth shut. |
ಸುದ್ದಿಲೈವ್/ಶಿವಮೊಗ್ಗ
ಹೈಕಮ್ಯಾಂಡ್ ಬಾಯಿಮುಚ್ಚಿಕೊಂಡು ಇರಿ ಎಂದಿದೆ. ಬಾಯಿಮುಚ್ಚಿಕೊಂಡು ಕೆಲಸ ಮಾಡುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿ, 10 ಕೋಟಿ ರೂ ಶಾಸಕರಿಗೆ ನೀಡಲಾಗಿದೆ. ಗ್ಯಾರಂಟಿ ಯೋಜನೆಯಿಂದ ಸ್ವಲ್ಪ ತಡವಾಗಿದೆ. ಬಿಜೆಪಿ ರವರು ಕಾರ್ಯಕ್ರಮ ಘೋಷಣೆ ಮಾಡಿದ್ದು ಬಿಟ್ಟರೆ, ಹಣ ಇಡುತ್ತಿರಲಿಲ್ಲ. ಹಳೇ ಸರ್ಕಾರದ ಸಾಲ ತೀರಿಸಲಾಗಿದೆ. ಸರ್ಕಾರದ ಹಣವನ್ನು ಜನರ ಜೇಬಿಗೆ ಗ್ಯಾರಂಟಿ ಯೋಜನೆಯ ಮೂಲಕ ಹಾಕಲಾಗುತ್ತಿದೆ ಎಂದರು.
ನಮ್ಮ ಸರ್ಕಾರದ ಕೆಲಸ ಅಭಿವೃದ್ದಿ ಮಾಡುವುದಾಗಿದೆ. ನಮ್ಮ ಹೈ ಕಮಾಂಡ್ ಹೇಳಿದೆ ಬಾಯಿ ಮುಚ್ಚಿಕೊಂಡು ಮಾಡಬೇಕು ಎಂದು ಹೇಳಿದೆ. ಭ್ರಷ್ಟಚಾರ ನಿಲ್ಲಿಸಬೇಕಿದೆ. ಅದನ್ನು ಮಾಡುತ್ತೆವೆ ಎಂದರು.
ಶಿವಣ್ಣ ಆರೋಗ್ಯವಾಗಿದ್ದಾರೆ. ಅವರು ಇನ್ನೂ ಮುಂದಿನ 10 ದಿನಗಳಲ್ಲಿ ಬೆಂಗಳೂರಿಗೆ ಆಗಮಿಸುತ್ತಾರೆ. ಅವರ ತಂದೆ ತಾಯಿ ಹಾಗೂ ಅಭಿಮಾನಿ ದೇವರುಗಳ ಆರ್ಶಿವಾದದಿಂದ ಗುಣಮುಖರಾಗಿದ್ದಾರೆ.
ಸಂಸದರೆ ಕಾರಣ
ಬಿಜೆಪಿರವರು ಹಸುವಿನ ವಿಚಾರದಲ್ಲಿ ರಾಜಕೀಯ ಮಾಡುವುದು ಬಿಟ್ಟರೆ ಬೇರೆ ಅವರಿಗೆ ಗೊತ್ತಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಸಂಸದರು ಇಷ್ಟು ದಿನ ಸುಮ್ಮನಿದ್ದು ಈಗ ಈಶ್ವರ್ ಖಂಡ್ರೆ ರನ್ನು ಭೇಟಿ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ ಸಚಿವರು ಮಲೆನಾಡಿನಲ್ಲಿ ಸಮಸ್ಯೆ ಬೆಳೆಯಲು ಅವರೆ ಕಾರಣ. ನಮ್ಮ ಸರ್ಕಾರ ಸಂತ್ರಸ್ತರ ಹಾಗೂ ರೈತರ ಪರವಾಗಿ ಇರುತ್ತದೆ. ಯಾರು ಭಯಪಡುವ ಅಗತ್ಯವಿಲ್ಲ ಎಂದರು.
ಹಿಂದೆ ಅಡಕೆ ಸಂಶೋಧನಾ ಕೇಂದ್ರ ಮಾಡಲು 500 ಕೋಟಿ ರೂ ನಿಗದಿ ಮಾಡಿದ್ದು ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದ ಸಚಿವ ಮಧು ಬಂಗಾರಪ್ಪ. ಈ ಕುರಿತು ನಾನು ಇಂದು ಕೃಷಿ ಸಚಿವರ ಜೊತೆ ಮಾತನಾಡುವೆ ಎಂದರು.
ಕುಮಾರ್ ಸ್ವಾಮಿ ಆರೋಪ ಸತ್ಯಕ್ಕೆ ದೂರ
ವಿಐಎಸ್ಎಲ್ ಅಭಿವೃದ್ಧಿಗೆ ರಾಜ್ಯ ಸರ್ಕಾರವೇ ಅಡ್ಡಗಾಲು ಹಾಕುತ್ತಿದೆ ಎಂಬ ಕೆಂದ್ರ ಸಚಿವ ಹೆಚ್ ಡಿ ಕೆ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವರು, ವಿಐಎಸ್ ಎಲ್ ಮುಚ್ಚುವ ಹುನ್ನಾರವನ್ನು ಹೆಚ್ ಡಿ ಕೆ ಮಾಡಲು ಹೊರಟಿದ್ದಾರೆ. ಅವರು ಸುಮ್ಮನೆ ಆರೋಪ ಮಾಡುವುದನ್ನು ಬಿಡಬೇಕು. ಅವರು ಹಿಂದೆ ಕಾರ್ಖಾನೆಗೆ ಬಂದು ಹೋಗಿದ್ದು ಬಿಟ್ಟರೆ, ರಾಜ್ಯ ಸರ್ಕಾರದ ಜೊತೆ ಯಾವುದೇ ಮಾತುಕಥೆ ನಡೆಸದೆ, ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದರು.