ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದ ಜಿಲ್ಲಾ ಕೇಂದ್ರ, ತಾಲೂಕು ಮತ್ತು ಹಳ್ಳಿಗಳಲ್ಲಿ ಪ್ರತಿಭಟನೆ

committee constituted under the Supreme Court of the country has reported that there is a need to fix minimum support price for farmers' crops. Although the House Committee said the same, the State Farmers Union objected that the Center has been following an anti-farmer policy.


ಸುದ್ದಿಲೈವ್/ಶಿವಮೊಗ್ಗ

ದೇಶದ ಸರ್ವೋಚ್ಚ ನ್ಯಾಯಾಲಯದ ಅಡಿಯಲ್ಲಿ ರಚನೆ ಮಾಡಿದ ಸಮಿತಿ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಅವಶ್ಯಕಯೆ ಇದೆ ಎಂದು ವರದಿ ಮಾಡಿದೆ. ಸದನ ಸಮಿತಿ ಅದನ್ನೇ ಹೇಳಿದರೂ, ಕೇಂದ್ರ ರೈತ ವಿರೋಧಿ ನೀತಿ ಅನುಸರಿಸುತ್ತಾ ಬಂದಿದೆ ಎಂದು ರಾಜ್ಯ ರೈತ ಸಂಘ ಆಕ್ಷೇಪಿಸಿದೆ. 

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಂಘಟನೆಯ ರಾಜ್ಯಾಧ್ಯಕ್ಷ ಕರಿಬಸಪ್ಪ ಗೌಡ, ಸರ್ಕಾರದ ವಿರುದ್ಧ ದಲೈವಾಲ 43 ದಿನ ಉಪವಾಸ ಸತ್ಯಾಗ್ರಹ ನಡೆಸಿಕೊಂಡು ಬರುತ್ತಿದ್ದಾರೆ. ನ್ಯಾಯಾಲಯ ರಾಜ್ಯ ಮತ್ತು ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟಿದೆ. ಹಾಗಾಗಿ ಜ.13 ರಂದು ಎಲ್ಲಾ ರೈತ ಸಂಘಟನೆಗಳು ಕೇಂದ್ರದ ಕೃಷಿ ಸಚಿವ ಮತ್ತು ಪ್ರಧಾನಿ ಮೋದಿಯ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದರು. 

ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿವೆ. 45 ದಿನಗಳ ಹಿಂದೆ ಅಮಂತ್ರಣ ಸತ್ಯಗ್ರಹ ನಡೆಸುತ್ತಿದ್ದಾರೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರಧಾನಿ ಮೋದಿ ಮತ್ತು ಕೃಷಿಸಚಿವರ ಪ್ರತಿಕೃತಿ ದಹನ ಮಾಡಲಾಗಿದೆ. ಜ.14 ರಿಂದ 16 ರವರೆಗೆ ಹಳ್ಳಿ ಮತ್ತು ತಾಲೂಕಿನಲ್ಲಿ ಪ್ರತಿಕೃತಿ ದಹನ ಮಾಡಲಾಗುವುದು ಎಂದರು. 

ಎಂಎಸ್ ಪಿ ನಿಗದಿ, ರೈತರ ಸಂಪೂರ್ಣ ಮನ್ನ, ಎಂ ಎಸ್ ಸ್ವಾಮಿನಾಥನ್ ವರದಿ ಜಾರಿ ಮಾಡುವಂತೆ  ಜ.26 ರಂದು ಜಿಲ್ಲಾ ಗ್ರಾಮೀಣ ಕೇಂದ್ರಗಳಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಾಗುವುದು ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close